RedditincReddit Contributor Monetization Policy_Logo_About Page@2x

Reddit ಗಳಿಕೆ ನೀತಿ

ಸೆಪ್ಟೆಂಬರ್ 24, 2024ರಿಂದ ಜಾರಿಗೆ ಬಂದಿದೆ. ಕೊನೆಯದಾಗಿ ಸೆಪ್ಟೆಂಬರ್ 24, 2024ರಂದು ಪರಿಷ್ಕರಿಸಲಾಗಿದೆ

Reddit ಗಳಿಕೆ ಕಾರ್ಯಕ್ರಮಗಳ ಮೂಲಕ, ಅರ್ಹರಾದವರು Reddit ನಲ್ಲಿ ಮಾಡುವ ಅರ್ಹ ಚಟುವಟಿಕೆಗಳಿಗೆ ಹಣವನ್ನು ಪಡೆಯಬಹುದು. ಹಣ ಗಳಿಸಲು,  ಗಳಿಕೆಯ ನಿಯಮಗಳು  ಮತ್ತು ಈ ಗಳಿಕೆ ನೀತಿಯಲ್ಲಿ ತಿಳಿಸಿರುವ ಅರ್ಹತಾ ಷರತ್ತುಗಳನ್ನು ನೀವು ಪೂರೈಸಬೇಕು.

Redditನಲ್ಲಿರುವ ಇತರ ಎಲ್ಲ ವಿಷಯಗಳಂತೆ, ಹಣ ಗಳಿಸಬಹುದಾದ ವಿಷಯಗಳೂ Reddit ನ  ಬಳಕೆದಾರರ ಒಪ್ಪಂದ  ಮತ್ತು  Reddit ನಿಯಮಗಳಿಗೆ ಒಳಪಟ್ಟಿರುತ್ತವೆ ಎಂಬುದನ್ನು ಗಮನದಲ್ಲಿಡಿ. Reddit ನಿಯಮಗಳನ್ನು ಉಲ್ಲಂಘಿಸುವ ವಿಷಯಗಳ ವಿರುದ್ಧ ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಹಾಗೆಯೇ, Reddit ನಿಯಮಗಳು, ಈ ಗಳಿಕೆ ನೀತಿ ಅಥವಾ  ಗಳಿಕೆಯ ನಿಯಮಗಳನ್ನು ಉಲ್ಲಂಘಿಸುವ ವಿಷಯಗಳಿಂದ ಬಂದ ಯಾವುದೇ ಗಳಿಕೆಯನ್ನು ನಾವು ತಡೆಹಿಡಿಯುತ್ತೇವೆ.

ಅರ್ಹ ಆದಾಯ ಗಳಿಸುವವರು

ನಿಮ್ಮ ಖಾತೆಯು ಗಳಿಕೆ ಕಾರ್ಯಕ್ರಮದಲ್ಲಿ ಹಣ ಗಳಿಸುವ ಖಾತೆಯಾಗಿ ಅರ್ಹತೆ ಪಡೆಯಲು, Reddit ಈ ಕೆಳಗಿನ ಷರತ್ತುಗಳನ್ನು ನೀವು ಪೂರೈಸಿರಬೇಕು ಎಂದು ಹೇಳುತ್ತದೆ:

ಅರ್ಹವಲ್ಲದ ವಿಷಯ

Reddit ನಲ್ಲಿ ಉತ್ತಮವಾಗಿ ಕೊಡುಗೆ ನೀಡುವ ಸಮುದಾಯಗಳ ಸದಸ್ಯರನ್ನು ಪ್ರೋತ್ಸಾಹಿಸಲು ನಾವು ಬಯಸುತ್ತೇವೆ. ಅದಕ್ಕಾಗಿ, ಅರ್ಹರಾದವರು ಅರ್ಹ Devvit ಆಪ್‌ಗಳು ಸೇರಿದಂತೆ ಬಹುತೇಕ ರೀತಿಯ ವಿಷಯಗಳಿಂದ ಹಣ ಗಳಿಸಲು ನಾವು ಅವಕಾಶ ನೀಡುತ್ತೇವೆ.

Reddit ನಲ್ಲಿರುವ ಎಲ್ಲ ವಿಷಯಗಳೂ Reddit ನ Reddit ನಿಯಮಗಳು ಮತ್ತು  ಬಳಕೆದಾರರ ಒಪ್ಪಂದ  (ಅಂದರೆ, ನಮ್ಮ ನಿಯಮಗಳು) ಪಾಲಿಸಬೇಕು. ಅರ್ಹ ವ್ಯಕ್ತಿಯ ವಿಷಯಕ್ಕೆ ಅವಾರ್ಡ್ ಸಿಕ್ಕಿದ್ದು, ಅದು ನಮ್ಮ ನಿಯಮಗಳನ್ನು ಪಾಲಿಸುತ್ತಿದ್ದರೆ, ಗಳಿಕೆ ಕಾರ್ಯಕ್ರಮದ ಮೂಲಕ ಹಣ ಪಡೆಯಲು ಅವರು ಅರ್ಹರಾಗಬಹುದು.

ಆದರೆ, ಕೆಲವು ವಿಷಯಗಳಿಗೆ ವೇದಿಕೆಯಲ್ಲಿ ಅನುಮತಿ ಇದ್ದರೂ, ಅವುಗಳಿಗೆ ಹಣದ ಪಾವತಿ ಪಡೆಯಲು ಅರ್ಹತೆ ಇರುವುದಿಲ್ಲ. ಸಂಬಂಧಿಸಿದ ಗಳಿಕೆ ಕಾರ್ಯಕ್ರಮದ ನಿಯಮಗಳಲ್ಲಿ ಬೇರೆ ರೀತಿಯಲ್ಲಿ ಹೇಳಿರದಿದ್ದರೆ, ವಿಷಯವನ್ನು ಪೋಸ್ಟ್ ಮಾಡುವ ಸಮಯದಲ್ಲಿ ಅಥವಾ ಹಣ ಪಾವತಿಸುವ ಮೊದಲು ಯಾವುದೇ ಸಮಯದಲ್ಲಿ ಅದು ಈ ಕೆಳಗಿನಂತಿದ್ದರೆ, ಆ ವಿಷಯಕ್ಕೆ Reddit ಯಾವುದೇ ಹಣವನ್ನು ಪಾವತಿಸುವುದಿಲ್ಲ:

  • ನಿರ್ಬಂಧಿತ ಸಮುದಾಯದಲ್ಲಿ ಪೋಸ್ಟ್ ಮಾಡಿದ್ದರೆ

  • NSFW (“18+”) ಎಂದು ಗುರುತಿಸಿದ್ದರೆ ಅಥವಾ 18+ ಎಂದು ಟ್ಯಾಗ್ ಮಾಡಿರುವ ಸಮುದಾಯದಲ್ಲಿ ಪೋಸ್ಟ್ ಮಾಡಿದ್ದರೆ
    • ಸೂಚನೆ:  18+ ಸಮುದಾಯದಲ್ಲಿ ಅಳವಡಿಸಿರುವ Devvit ಆಪ್, ಆ Devvit ಆಪ್ ಮತ್ತು (ಅದರ ವಿಷಯ ಹಾಗೂ Devvit ಸರಕುಗಳು) ಈ ಗಳಿಕೆ ನೀತಿ ಮತ್ತು ಗಳಿಕೆಯ ನಿಯಮಗಳ ಪ್ರಕಾರ ಗಳಿಕೆಗೆ ಅರ್ಹವಾಗಿದ್ದರೆ, ಗಳಿಕೆಗೆ ಅರ್ಹವಾಗಿರಬಹುದು.

  • ಲೈಂಗಿಕವಾಗಿ ಸ್ಪಷ್ಟವಾದ ಅಥವಾ ಲೈಂಗಿಕ ಸೂಚನೆ ನೀಡುವ ವಿಷಯಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ನಗ್ನತೆ, ಸ್ಪಷ್ಟವಾಗಿ ಅಥವಾ ಪರೋಕ್ಷವಾಗಿ ತೋರಿಸುವ ಲೈಂಗಿಕ ಚಟುವಟಿಕೆಗಳು, ಲೈಂಗಿಕ ವಸ್ತುಗಳು, ಲೈಂಗಿಕ ಮನರಂಜನೆ ಅಥವಾ ಲೈಂಗಿಕ ಸೇವೆಗಳು ಸೇರಿವೆ. ಇದು ಲೈಂಗಿಕ ಅಥವಾ ಲೈಂಗಿಕ ಸೂಚನೆ ನೀಡುವ ಡಿಜಿಟಲ್ ಅಥವಾ ಅನಿಮೇಟೆಡ್ ವಿಷಯಗಳಿಗೂ, ಹಾಗೆಯೇ ಲೈಂಗಿಕ ವಿಷಯಗಳಿಗೆ ಕರೆದೊಯ್ಯುವ ಲಿಂಕ್‌ಗಳಿಗೂ ಅನ್ವಯಿಸುತ್ತದೆ.
    • ಲೈಂಗಿಕ ಉದ್ದೇಶವಿಲ್ಲದ ನಗ್ನತೆ ಇರುವ ವಿಷಯಗಳಿಗೆ ಕೆಲವು ವಿನಾಯಿತಿಗಳನ್ನು ನೀಡಬಹುದು. (ಉದಾಹರಣೆಗೆ, ಮಗುವಿಗೆ ಹಾಲುಣಿಸುವುದು, ಲೈಂಗಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡುವುದು ಅಥವಾ ಶೈಕ್ಷಣಿಕ ಸಂಶೋಧನೆಗೆ ಸಂಬಂಧಿಸಿದ ವಿಷಯಗಳು).

  • ಹಿಂಸೆ, ಸಾವು, ಗಂಭೀರ ಗಾಯ ಅಥವಾ ಭಯಾನಕ ದೃಶ್ಯಗಳನ್ನು ತೋರಿಸುವ ಅಥವಾ ಪ್ರಚಾರ ಮಾಡಲಾಗಿರುವ ವಿಷಯಗಳು. ಯುದ್ಧ ಅಥವಾ ಸೇನಾ ಸಂಘರ್ಷದ ಭಯಾನಕ ದೃಶ್ಯಗಳೂ ಇದರಲ್ಲಿ ಸೇರಿವೆ.
    • ವಿನಾಯಿತಿಗಳು: ವೃತ್ತಿಪರ ಹೋರಾಟದ ಕ್ರೀಡೆಗಳು, ಕಾಲ್ಪನಿಕ ಮನರಂಜನೆ, ಅನಿಮೇಟೆಡ್ ಅಥವಾ ಡಿಜಿಟಲ್ ವಿಷಯಗಳು (ಉದಾಹರಣೆಗೆ, ವಿಡಿಯೋ ಗೇಮ್‌ಗಳು) ಅಥವಾ ಕೆಲವು ಸಂದರ್ಭಗಳಲ್ಲಿ ಸುದ್ದಿಗೆ ಸಂಬಂಧಿಸಿದ ವಿಷಯಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

  • ಕೆಳಗಿನ ವಸ್ತುಗಳು ಅಥವಾ ಸೇವೆಗಳನ್ನು ಬಳಸಲು ಪ್ರಚಾರ ಮಾಡಲಾಗಿರುವ ವಿಷಯಗಳು:
    • (ಮನರಂಜನೆಗಾಗಿ ಬಳಸುವ ಮಾದಕ ವಸ್ತುಗಳು, ವೈದ್ಯರು ಸೂಚಿಸುವ ಔಷಧಿಗಳು ಅಥವಾ ಸಾಮಾನ್ಯವಾಗಿ ಸಿಗುವ ಔಷಧಿಗಳು), ಮದ್ಯ, ತಂಬಾಕು ಅಥವಾ ಇತರೆ ನಿಯಂತ್ರಿತ ವಸ್ತುಗಳು.

    • ಬಂದೂಕುಗಳು, ಬಂದೂಕಿನ ಭಾಗಗಳು, ಪರಿಕರಗಳು, ಗುಂಡುಗಳು ಮತ್ತು ಸ್ಫೋಟಕಗಳು

    • ಜೂಜು ಅಥವಾ ಲಾಟರಿ ಸೇವೆಗಳು. ಸ್ಪರ್ಧೆ, ಲಕ್ಕಿ ಡ್ರಾ ಅಥವಾ ಬಹುಮಾನ ಗೆಲ್ಲುವ ಆಟಕ್ಕೆ ಸೇರಲು ನೀಡುವ ಅವಕಾಶಗಳೂ ಇದರಲ್ಲಿ ಸೇರಿವೆ.

  • ಕೇಳುತ್ತದೆ, ಪ್ರೋತ್ಸಾಹಿಸುತ್ತದೆ ಅಥವಾ ನೀಡುತ್ತದೆ:
    • ಮೋಸ ಮಾಡುವ ಹಣ/ ಕ್ರಿಪ್ಟೋ ಗಳಿಸುವ ಸೇವೆಗಳು, ಯೋಜನೆಗಳು ಅಥವಾ ಸದಸ್ಯತ್ವಗಳು. (ಉದಾಹರಣೆಗೆ, ಬೇಗ ಶ್ರೀಮಂತರಾಗುವ ಯೋಜನೆಗಳು)

    • ದಾನಧರ್ಮದ ಅಥವಾ ರಾಜಕೀಯ ಉದ್ದೇಶ, ಪ್ರಚಾರ ಅಥವಾ ಸಂಸ್ಥೆಗೆ ಹಣ ಕೊಡುವುದು ಅಥವಾ ದೇಣಿಗೆ ನೀಡುವುದು

    • ಕಾನೂನುಬಾಹಿರ ಅಥವಾ ಅಪಾಯಕಾರಿ ಕೆಲಸಗಳನ್ನು ಮಾಡಲು ಪ್ರೇರೇಪಿಸುವುದು.

ಎನ್‌ಫೋರ್ಸ್‌ಮೆಂಟ್

ಗಳಿಕೆ ಕಾರ್ಯಕ್ರಮದಲ್ಲಿ ಹಣ ಗಳಿಸಲು, ಮೇಲೆ ತಿಳಿಸಿರುವ ಮತ್ತು  ಗಳಿಕೆಯ ನಿಯಮಗಳಲ್ಲಿ ನೀಡಿರುವ ಅನ್ವಯವಾಗುವ ಎಲ್ಲಾ ಷರತ್ತುಗಳನ್ನು ನೀವು ನಿರಂತರವಾಗಿ ಪಾಲಿಸಬೇಕು.

ನೀವು ಹಣ ಗಳಿಸುವ ವ್ಯಕ್ತಿಯಾಗಿ ಇರಲು ಬೇಕಾದ ಅರ್ಹತಾ ಷರತ್ತುಗಳನ್ನು ಇನ್ನು ಮುಂದೆ ಪೂರೈಸುತ್ತಿಲ್ಲ ಎಂದು Reddit ಗೆ ತಿಳಿದರೆ, ನೀವು ಗಳಿಕೆ ಕಾರ್ಯಕ್ರಮದಲ್ಲಿ ಮುಂದುವರಿದು ಭಾಗವಹಿಸಲು ಸಾಧ್ಯವಾಗುವುದಿಲ್ಲ. Reddit ನಲ್ಲಿ ಹಣ ಗಳಿಸುವ ನಿಮ್ಮ ಅವಕಾಶವನ್ನು ನಾವು ತಾತ್ಕಾಲಿಕವಾಗಿ ನಿಲ್ಲಿಸಬಹುದು ಅಥವಾ ಶಾಶ್ವತವಾಗಿ ತೆಗೆದುಹಾಕಬಹುದು. ನೀವು ಅರ್ಹತಾ ಷರತ್ತುಗಳನ್ನು ಪೂರೈಸುವುದನ್ನು ನಿಲ್ಲಿಸಿದ ಸಮಯವನ್ನು ಅವಲಂಬಿಸಿ, ಇನ್ನೂ ನಿಮಗೆ ಪಾವತಿಸದಿರುವ ಹಿಂದಿನ ಮತ್ತು ಮುಂದಿನ ಗಳಿಕೆಗಳ ಮೇಲೂ ಇದು ಪರಿಣಾಮ ಬೀರಬಹುದು.

ಅನ್ವಯವಾಗುವ ಗಳಿಕೆ ಕಾರ್ಯಕ್ರಮದ ಅರ್ಹತಾ ಷರತ್ತುಗಳನ್ನು ಉಲ್ಲಂಘಿಸಿರುವ ಯಾವುದೇ ಕೊಡುಗೆ, Devvit ಆಪ್ ಅಥವಾ ಇತರ ಚಟುವಟಿಕೆ ಕಂಡುಬಂದರೆ, ಅದರಿಂದ ಬಂದ ಗಳಿಕೆಯ ಹಣವನ್ನು ನಾವು ಪಾವತಿಸುವುದಿಲ್ಲ. ಅಗತ್ಯವಿದ್ದರೆ, ಹೆಚ್ಚುವರಿ ಕ್ರಮಗಳನ್ನೂ ತೆಗೆದುಕೊಳ್ಳಬಹುದು. ಇದಲ್ಲದೆ, ನೀವು ಯಾವುದೇ ಗಳಿಕೆ ಕಾರ್ಯಕ್ರಮದ ಷರತ್ತುಗಳನ್ನು ಪದೇಪದೇ ಉಲ್ಲಂಘಿಸಿದರೆ, ನೀವು ಭಾಗವಹಿಸುತ್ತಿರುವ ಯಾವುದೇ ಗಳಿಕೆ ಕಾರ್ಯಕ್ರಮದಿಂದ ನಿಮ್ಮ ಭಾಗವಹಿಸುವಿಕೆಯನ್ನು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಕೊನೆಗೊಳಿಸುವ ಬಗ್ಗೆ ನಾವು ನಿರ್ಧರಿಸಬಹುದು. ಯಾವುದೇ ಗಳಿಕೆ ಕಾರ್ಯಕ್ರಮದ ಷರತ್ತುಗಳನ್ನು ಗಂಭೀರವಾಗಿ ಉಲ್ಲಂಘಿಸಿದರೆ (ಉದಾಹರಣೆಗೆ, ನಿಮಗೆ ನೀವೇ ಅನುಮಾನಾಸ್ಪದ ಪ್ರಮಾಣದಲ್ಲಿ ಅವಾರ್ಡ್‌ಗಳು ಅಥವಾ ಗೋಲ್ಡ್ ನೀಡಿಕೊಳ್ಳುವುದು), ಆ ಕಾರ್ಯಕ್ರಮದಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ತಕ್ಷಣವೇ ಕೊನೆಗೊಳಿಸುವ ಬಗ್ಗೆ ನಾವು ನಿರ್ಧರಿಸಬಹುದು.

⌂ 换网址