
Reddit ನ ಬಳಕೆದಾರರ ಒಪ್ಪಂದ
- ಕನ್ನಡ
- Bahasa Indonesia
- Bahasa Melayu - Malaysia
- Čeština – Česká republika
- Dansk - Danmark
- Deutsch – Deutschland
- English
- Español - España
- Español - México
- Farsi
- Français - France
- Hrvatski – Hrvatska
- Italiano - Italia
- Magyar – Magyarország
- Nederlands - Nederland
- Norwegian Bokmål
- Polski (Polska)
- Português - Brasil
- Português - Portugal
- Română - România
- Slovenčina - Slovensko
- Suomi – Suomi
- Svenska – Sverige
- Tagalog
- Tiếng Việt - Việt Nam
- Türkçe - Türkiye
- Ελληνικά - Ελλάδα
- Български – България
- Русский — Россия
- Српски – Србија
- Українська — Україна
- עברית
- اردو
- العربية
- मराठी
- हिंदी भारत
- বাংলা
- ગુજરાતી
- தமிழ்
- తెలుగు
- ไทย
- 한국어 - 대한민국
- 中文 - 繁體
- 日本語 - 日本
- 简体中文
ಜಾರಿಗೆ ಬಂದ ದಿನಾಂಕ: ಜುಲೈ 1, 2026. ಕೊನೆಯದಾಗಿ ಪರಿಷ್ಕರಿಸಿದ ದಿನಾಂಕ: ಮೇ 26, 2026
Reddit ನಲ್ಲಿ ಲಕ್ಷಾಂತರ ವಿಭಿನ್ನ ಆನ್ಲೈನ್ ಸಮುದಾಯಗಳು ಕಾರ್ಯನಿರ್ವಹಿಸುತ್ತವೆ. ಈ ಬಳಕೆದಾರರ ಒಪ್ಪಂದ ಮತ್ತು ನಿಮ್ಮ ನಡವಳಿಕೆಯಿಂದಲೇ ಇದು ಸಾಧ್ಯವಾಗುತ್ತದೆ.
-
ನೀವು ಅಮೆರಿಕದಲ್ಲಿ ಅಥವಾ ಯುರೋಪಿನ ಆರ್ಥಿಕ ವಲಯ ("EEA"), ಯುನೈಟೆಡ್ ಕಿಂಗ್ಡಮ್ ಮತ್ತು ಸ್ವಿಟ್ಜರ್ಲ್ಯಾಂಡ್ ಹೊರಗಿನ ದೇಶಗಳಲ್ಲಿ ವಾಸಿಸುತ್ತಿದ್ದರೆ, ನಿಮಗೆ ಅನ್ವಯಿಸುವ ನಿಯಮಗಳು ಇಲ್ಲಿ ಇವೆ.
-
ನೀವು ಯುರೋಪಿನ ಆರ್ಥಿಕ ವಲಯ EEA, ಯುನೈಟೆಡ್ ಕಿಂಗ್ಡಮ್ ಅಥವಾ ಸ್ವಿಟ್ಜರ್ಲ್ಯಾಂಡ್ನಲ್ಲಿ ವಾಸಿಸುತ್ತಿದ್ದರೆ, ನಿಮಗೆ ಅನ್ವಯಿಸುವ ನಿಯಮಗಳು ಇಲ್ಲಿ ಲಭ್ಯವಿವೆ.
ನೀವು ಯುನೈಟೆಡ್ ಸ್ಟೇಟ್ಸ್ನಲ್ಲಿ ಅಥವಾ ಯುರೋಪಿಯನ್ ಆರ್ಥಿಕ ವಲಯ (EEA), ಯುನೈಟೆಡ್ ಕಿಂಗ್ಡಮ್ ಮತ್ತು ಸ್ವಿಟ್ಜರ್ಲ್ಯಾಂಡ್ ಹೊರತುಪಡಿಸಿದ ಬೇರೆ ದೇಶದಲ್ಲಿ ವಾಸಿಸುತ್ತಿದ್ದರೆ, ನಿಮಗೆ ಅನ್ವಯಿಸುವ Reddit ಬಳಕೆದಾರರ ಒಪ್ಪಂದ
ಹಲೋ, Reddit ಬಳಕೆದಾರರೇ ಮತ್ತು ಇಂಟರ್ನೆಟ್ನ ಜನರೇ! ಈ Reddit ಬಳಕೆದಾರರ ಒಪ್ಪಂದವು (“ನಿಯಮಗಳು”) Reddit, Inc. (“Reddit,” “ನಾವು,” “ನಮ್ಮನ್ನು,” ಅಥವಾ “ನಮ್ಮ”) ಒದಗಿಸುವ ವೆಬ್ಸೈಟ್ಗಳು, ಮೊಬೈಲ್ ಆ್ಯಪ್ಗಳು, ವಿಜೆಟ್ಗಳು, APIಗಳು, ಇಮೇಲ್ಗಳು ಮತ್ತು ಇತರ ಆನ್ಲೈನ್ ಉತ್ಪನ್ನಗಳು ಹಾಗೂ ಸೇವೆಗಳಿಗೆ (ಒಟ್ಟಾಗಿ, “ಸೇವೆಗಳು”) ನಿಮ್ಮ ಪ್ರವೇಶ ಮತ್ತು ಬಳಕೆಗೆ ಅನ್ವಯಿಸುತ್ತದೆ.
Reddit ಅನ್ನೋದು ಮೋಜು ಮಸ್ತಿ ಮತ್ತು ಮನರಂಜನೆಗಾಗಿ ಇರೋ ಜಾಗ ಅಂತ ನೆನಪಿಟ್ಟುಕೊಳ್ಳಿ. ಆದ್ರೆ, ಇಲ್ಲೂ ನಾವು ಕೆಲವು ಮೂಲಭೂತ ನಿಯಮಗಳನ್ನು ಪಾಲಿಸಬೇಕು. ನಮ್ಮ ಸೇವೆಗಳನ್ನು ಬಳಸುವ ಮೂಲಕ ಅಥವಾ ಅವುಗಳನ್ನು ಪ್ರವೇಶಿಸುವ ಮೂಲಕ, ನೀವು ಈ ನಿಯಮಗಳಿಗೆ ಒಪ್ಪಿಕೊಂಡಂತಾಗುತ್ತದೆ. ನೀವು ಈ ನಿಯಮಗಳನ್ನು ಒಪ್ಪದಿದ್ದರೆ, ನಮ್ಮ ಸೇವೆಗಳನ್ನು ಬಳಸುವಂತಿಲ್ಲ ಅಥವಾ ಪ್ರವೇಶಿಸುವಂತಿಲ್ಲ
1. ನಮ್ಮ ಸೇವೆಗಳನ್ನು ಬಳಸುವ ನಿಮ್ಮ ಹಕ್ಕು
13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು Reddit ನ ಸೇವೆಗಳನ್ನು ಬಳಸಲು ಅಥವಾ ಪ್ರವೇಶಿಸಲು ಅನುಮತಿ ಇಲ್ಲ. ನಮ್ಮ ಕೆಲವು ಸೇವೆಗಳನ್ನು ಬಳಸಲು ಇನ್ನೂ ಹೆಚ್ಚಿನ ವಯಸ್ಸಾಗಿರಬೇಕು. ಉದಾಹರಣೆಗೆ, Reddit ನಲ್ಲಿರುವ ವಯಸ್ಕರಿಗೆ ಮಾತ್ರ ವಯಸ್ಕರ ವಿಷಯಗಳನ್ನು ವೀಕ್ಷಿಸಲು ನಿಮಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ನೀವು ನಮ್ಮ ಸೇವೆಗಳನ್ನು ಬಳಸುವಾಗ, ದಯವಿಟ್ಟು ಎಲ್ಲಾ ಸೂಚನೆಗಳನ್ನು ಮತ್ತು ಹೆಚ್ಚುವರಿ ನಿಯಮಗಳನ್ನು ಎಚ್ಚರಿಕೆಯಿಂದ ಓದಿ.
Reddit ನ ಸೇವೆಗಳನ್ನು ಬಳಸುವ ಮೂಲಕ, ನೀವು ಈ ಕೆಳಗಿನ ವಿಷಯಗಳನ್ನು ದೃಢಪಡಿಸುತ್ತೀರಿ:
- ನೀವು ಸೇವೆಗಳನ್ನು ಪ್ರವೇಶಿಸಲು ಮತ್ತು ಬಳಸಲು ಕನಿಷ್ಠ 13 ವರ್ಷ ವಯಸ್ಸಿನವರಾಗಿರಬೇಕು ಹಾಗೂ ನೀವು ವಾಸಿಸುವ ದೇಶದ ಕಾನೂನುಗಳ ಪ್ರಕಾರ ಅಗತ್ಯವಿರುವ ಕನಿಷ್ಠ ವಯಸ್ಸಿಗಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು;
- ನೀವು Reddit ಜೊತೆ ಕಾನೂನುಬದ್ಧವಾಗಿ ಬದ್ಧವಾಗಿರುವ ಒಪ್ಪಂದ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು ಅಥವಾ, ನಿಮಗೆ 13 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದು, ನಿಮ್ಮ ಪ್ರದೇಶದ ಕಾನೂನಿನ ಪ್ರಕಾರ ವಯಸ್ಕರಾಗುವ ವಯಸ್ಸಿಗಿಂತ ಕಡಿಮೆ ವಯಸ್ಸಾಗಿದ್ದರೆ, ನಿಮ್ಮ ಕಾನೂನುಬದ್ಧ ಪಾಲಕರು ಈ ನಿಯಮಗಳನ್ನು ಪರಿಶೀಲಿಸಿ, ಅವುಗಳಿಗೆ ಒಪ್ಪಿಗೆ ನೀಡಿರಬೇಕು;
- ಅನ್ವಯವಾಗುವ ಯಾವುದೇ ಕಾನೂನಿನ ಪ್ರಕಾರ, ನೀವು ಈ ಸೇವೆಗಳನ್ನು ಬಳಸುವುದಕ್ಕೆ ಯಾವುದೇ ನಿಷೇಧವಿರಬಾರದು; ಮತ್ತು
- ನಿಮ್ಮನ್ನು ಈ ಸೇವೆಗಳನ್ನು ಬಳಸುವುದರಿಂದ ಶಾಶ್ವತವಾಗಿ ಅಮಾನತುಗೊಳಿಸಿರಬಾರದು ಅಥವಾ ಸೇವೆಗಳಿಂದ ಶಾಶ್ವತವಾಗಿ ತೆಗೆದುಹಾಕಿರಬಾರದು.
ನೀವು ಒಂದು ವ್ಯವಹಾರ ಸಂಸ್ಥೆ ಅಥವಾ ಸರ್ಕಾರಿ ಸಂಸ್ಥೆ ಸೇರಿದಂತೆ ಬೇರೆ ಯಾವುದೇ ಕಾನೂನುಬದ್ಧ ಸಂಸ್ಥೆಯ ಪರವಾಗಿ ಈ ನಿಯಮಗಳಿಗೆ ಒಪ್ಪಿಗೆ ನೀಡುತ್ತಿದ್ದರೆ, ಆ ಸಂಸ್ಥೆಯು ಈ ನಿಯಮಗಳಿಗೆ ಬದ್ಧವಾಗಿರುವಂತೆ ಒಪ್ಪಂದ ಮಾಡಿಕೊಳ್ಳಲು ನಿಮಗೆ ಸಂಪೂರ್ಣ ಕಾನೂನುಬದ್ಧ ಅಧಿಕಾರವಿದೆ ಎಂದು ನೀವು ದೃಢಪಡಿಸುತ್ತೀರಿ.
2. ಗೌಪ್ಯತೆ
Reddit ನ ಗೌಪ್ಯತಾ ನೀತಿಯಲ್ಲಿನೀವು ನಮ್ಮ ಸೇವೆಗಳನ್ನು ಪ್ರವೇಶಿಸುವಾಗ ಅಥವಾ ಬಳಸುವಾಗ ನಿಮ್ಮ ಬಗ್ಗೆ ಯಾವ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ, ಅದನ್ನು ಏಕೆ ಸಂಗ್ರಹಿಸುತ್ತೇವೆ, ಹೇಗೆ ಬಳಸುತ್ತೇವೆ ಮತ್ತು ಯಾರೊಂದಿಗೆ ಹಂಚಿಕೊಳ್ಳುತ್ತೇವೆ ಎಂಬುದನ್ನು ವಿವರಿಸಲಾಗಿದೆ. ನೀವು ನಮ್ಮ ಸೇವೆಗಳನ್ನು ಬಳಸುವ ಮೂಲಕ,ಗೌಪ್ಯತಾ ನೀತಿಯಲ್ಲಿತಿಳಿಸಿರುವಂತೆ ನಿಮ್ಮ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಬಳಸಲು ನೀವು ಒಪ್ಪಿಗೆ ನೀಡುತ್ತೀರಿ ಎಂಬುದನ್ನು ಅರ್ಥಮಾಡಿಕೊಂಡಿರುತ್ತೀರಿ.
3. ನೀವು ನಮ್ಮ ಸೇವೆಗಳನ್ನು ಬಳಸುವ ವಿಧಾನ
ನೀವು ಈ ನಿಯಮಗಳನ್ನು ಸಂಪೂರ್ಣವಾಗಿ ಮತ್ತು ನಿರಂತರವಾಗಿ ಪಾಲಿಸುವ ಷರತ್ತಿನ ಮೇಲೆ, Reddit ನಿಮಗೆ ಕೆಳಗಿನ ಕೆಲಸಗಳನ್ನು ಮಾಡಲು ವೈಯಕ್ತಿಕ, ಇತರರಿಗೆ ವರ್ಗಾಯಿಸಲಾಗದ, ಪ್ರತ್ಯೇಕ ಹಕ್ಕಲ್ಲದ, ಹಿಂಪಡೆಯಬಹುದಾದ ಮತ್ತು ಸೀಮಿತ ಅನುಮತಿಯನ್ನು ನೀಡುತ್ತದೆ: (a) ನಿಮ್ಮ ಸ್ವಂತ ಅಥವಾ ನಿಮ್ಮ ನಿಯಂತ್ರಣದಲ್ಲಿರುವ ಮೊಬೈಲ್ ಸಾಧನದಲ್ಲಿ, ಅಧಿಕೃತ ಅಪ್ಲಿಕೇಶನ್ ಮಳಿಗೆಯಿಂದ ಪಡೆದ Reddit ನ ಮೊಬೈಲ್ ಅಪ್ಲಿಕೇಶನ್ನ ಪ್ರತಿಯನ್ನು ಸ್ಥಾಪಿಸಿ ಬಳಸಬಹುದು.(b) Reddit ನ ಸೇವೆಗಳನ್ನು ಪ್ರವೇಶಿಸಿ ಬಳಸಬಹುದು.ಈ ನಿಯಮಗಳಲ್ಲಿ ನಿಮಗೆ ಸ್ಪಷ್ಟವಾಗಿ ನೀಡಿರುವ ಹಕ್ಕುಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಹಕ್ಕುಗಳನ್ನು Reddit ತನ್ನಲ್ಲಿಯೇ ಕಾಯ್ದಿರಿಸುತ್ತದೆ.
ಅನ್ವಯವಾಗುವ ಕಾನೂನಿನ ಪ್ರಕಾರ ನಿಷೇಧಿಸಲು ಅನುಮತಿಯಿಲ್ಲದ ಸಂದರ್ಭಗಳನ್ನು ಹೊರತುಪಡಿಸಿ ಮತ್ತು ಅಂತಹ ಸಂದರ್ಭಗಳಲ್ಲಿ ಮಾತ್ರ, ನಮ್ಮ ಲಿಖಿತ ಒಪ್ಪಿಗೆ ಇಲ್ಲದೆ ನೀವು ಕೆಳಗಿನ ಕೆಲಸಗಳನ್ನು ಮಾಡುವಂತಿಲ್ಲ:
- Reddit ನ ಸೇವೆಗಳು ಅಥವಾ ವಿಷಯಗಳಿಗೆ ಸಂಬಂಧಿಸಿದ ಬಳಕೆಯ ಅನುಮತಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವುದು, ಮಾರಾಟ ಮಾಡುವುದು, ವರ್ಗಾಯಿಸುವುದು, ಬೇರೆಯವರಿಗೆ ಹಸ್ತಾಂತರಿಸುವುದು, ಹಂಚಿಕೆ ಮಾಡುವುದು, ಹೋಸ್ಟ್ ಮಾಡುವುದು ಅಥವಾ ಬೇರೆ ಯಾವುದೇ ರೀತಿಯಲ್ಲಿ ವಾಣಿಜ್ಯ ಲಾಭ ಪಡೆಯುವುದು;
- ಸೇವೆಗಳು ಅಥವಾ ವಿಷಯಗಳ ಯಾವುದೇ ಭಾಗವನ್ನು ಮಾರ್ಪಡಿಸುವುದು, ಅವುಗಳನ್ನು ಆಧರಿಸಿ ಹೊಸ ಕೃತಿಗಳನ್ನು ರಚಿಸುವುದು, ಭಾಗಗಳಾಗಿ ಬೇರ್ಪಡಿಸುವುದು, ಮೂಲ ಸಂಕೇತವನ್ನು ಓದಲು ಸಾಧ್ಯವಾಗುವಂತೆ ಪರಿವರ್ತಿಸುವುದು ಅಥವಾ ಅವುಗಳ ಒಳರಚನೆ ಮತ್ತು ಕಾರ್ಯವಿಧಾನವನ್ನು ಪತ್ತೆಹಚ್ಚಲು ಪ್ರಯತ್ನಿಸುವುದು; ಅಥವಾ
- ಕೆಳಗೆ ವಿವರಿಸಿರುವ ಹೆಚ್ಚುವರಿ ನಿಯಮಗಳು ಅನುಮತಿಸುವ ಸಂದರ್ಭಗಳನ್ನು ಹೊರತುಪಡಿಸಿ, Reddit ನ ಸೇವೆಗಳು ಅಥವಾ ವಿಷಯಗಳನ್ನು ಬಳಸಿ ಅದೇ ರೀತಿಯ ಅಥವಾ ಸ್ಪರ್ಧಾತ್ಮಕ ಜಾಲತಾಣ, ಉತ್ಪನ್ನ ಅಥವಾ ಸೇವೆಯನ್ನು ನಿರ್ಮಿಸುವ ಉದ್ದೇಶದಿಂದ ಅವುಗಳನ್ನು ಪ್ರವೇಶಿಸುವುದು ಅಥವಾ ಬಳಸುವುದು.
ನಾವು ನಮ್ಮ ಸೇವೆಗಳನ್ನು ಯಾವಾಗಲೂ ಉತ್ತಮಗೊಳಿಸುತ್ತಿರುತ್ತೇವೆ. ಅಂದರೆ, ಹೊಸ ಫೀಚರ್ಗಳು, ಉತ್ಪನ್ನಗಳು ಅಥವಾ ಸೌಲಭ್ಯಗಳನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು. ಸಾಧ್ಯವಾದಷ್ಟು ಮುಂಚಿತವಾಗಿ ನಿಮಗೆ ತಿಳಿಸಲು ಪ್ರಯತ್ನಿಸುತ್ತೇವೆ, ಆದರೆ ಯಾವಾಗಲೂ ಅದು ಸಾಧ್ಯವಾಗುವುದಿಲ್ಲ. ಯಾವುದೇ ಸಮಯದಲ್ಲಿ, ನಿಮಗೆ ಮುಂಚಿತವಾಗಿ ತಿಳಿಸಿಯೂ ಅಥವಾ ತಿಳಿಸದೆಯೂ, ನಮ್ಮ ಸೇವೆಗಳನ್ನು (ಸಂಪೂರ್ಣವಾಗಿ ಅಥವಾ ಭಾಗಶಃ) ಬದಲಾಯಿಸುವ, ಅಮಾನತುಗೊಳಿಸುವ ಅಥವಾ ಸಂಪೂರ್ಣವಾಗಿ ನಿಲ್ಲಿಸುವ ಹಕ್ಕು ನಮಗಿದೆ. ಮುಂದೆ ಸೇವೆಗಳಿಗೆ ಸೇರಿಸುವ ಯಾವುದೇ ಹೊಸ ಬಿಡುಗಡೆ, ಅಪ್ಡೇಟ್ ಅಥವಾ ಹೆಚ್ಚುವರಿ ಸೌಲಭ್ಯಗಳಿಗೂ ಈ ನಿಯಮಗಳೇ ಅನ್ವಯಿಸುತ್ತವೆ. ಈ ನಿಯಮಗಳನ್ನು ಕಾಲಕಾಲಕ್ಕೆ ನವೀಕರಿಸಬಹುದು. ನಮ್ಮ ಸೇವೆಗಳಲ್ಲಿ ಅಥವಾ ಅವುಗಳ ಯಾವುದೇ ಭಾಗದಲ್ಲಿ ಮಾಡುವ ಬದಲಾವಣೆ, ಸ್ಥಗಿತ ಅಥವಾ ಸೇವೆಯನ್ನು ನಿಲ್ಲಿಸುವುದರಿಂದ ನಿಮಗೆ ಅಥವಾ ಇತರರಿಗೆ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ ಎಂಬುದಕ್ಕೆ ನೀವು ಒಪ್ಪುತ್ತೀರಿ.
ನಿಮ್ಮ Reddit ಅನುಭವವನ್ನು ವೈಯಕ್ತಿಕಗೊಳಿಸಲು, ನೀವು Reddit ನಲ್ಲಿ ಮಾಡುವ ಚಟುವಟಿಕೆಗಳು, ನೀವು ಸಬ್ಸ್ಕ್ರೈಬ್ ಮಾಡಿರುವ ಸಮುದಾಯಗಳು ಮತ್ತು ನಿಮ್ಮ ಸೆಟ್ಟಿಂಗ್ಗಳಲ್ಲಿ ಆಯ್ಕೆ ಮಾಡಿಕೊಂಡಿರುವ ಆದ್ಯತೆಗಳು ಸೇರಿದಂತೆ ಹಲವು ವಿಷಯಗಳನ್ನು ನಾವು ಪರಿಗಣಿಸುತ್ತೇವೆ. ಇವುಗಳ ಆಧಾರದ ಮೇಲೆ, ನಿಮಗೆ ಹೆಚ್ಚು ಸೂಕ್ತವಾದ ವಿಷಯಗಳನ್ನು Reddit ನಲ್ಲಿ ಶಿಫಾರಸು ಮಾಡಬಹುದು.ನಿಮಗೆ ಯಾವ ರೀತಿಯ ವಿಷಯಗಳನ್ನು ಶಿಫಾರಸು ಮಾಡಲಾಗುತ್ತದೆ ಮತ್ತು ಈ ವೈಯಕ್ತಿಕಗೊಳಿಸುವ ಆಯ್ಕೆಗಳಲ್ಲಿ ಕೆಲವನ್ನು ನೀವು ಹೇಗೆ ನಿಯಂತ್ರಿಸಬಹುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ನಮ್ಮ ಸಹಾಯ ಕೇಂದ್ರವನ್ನು ನೋಡಿ.
4. ನಿಮ್ಮ Reddit ಖಾತೆ ಮತ್ತು ಖಾತೆಯ ಸುರಕ್ಷತೆ
ನಮ್ಮ ಕೆಲವು ಫೀಚರ್ಗಳನ್ನು ಬಳಸಲು, ನೀವು Reddit ಖಾತೆಯನ್ನು (“ಖಾತೆ”) ರಚಿಸಬೇಕಾಗಬಹುದು. ಆಗ ನೀವು ಬಳಕೆದಾರರ ಹೆಸರು, ಪಾಸ್ವರ್ಡ್ ಮತ್ತು ನಿಮ್ಮ ಬಗ್ಗೆ ಕೆಲವು ಮಾಹಿತಿಯನ್ನು ನಮ್ಮಗೌಪ್ಯತಾ ನೀತಿಯಲ್ಲಿ.
ತಿಳಿಸಿರುವಂತೆ ನೀಡಬೇಕಾಗುತ್ತದೆ. ನಿಮ್ಮ ಖಾತೆಗೆ ಸಂಬಂಧಿಸಿದ ಮಾಹಿತಿ ಮತ್ತು ನಿಮ್ಮ ಖಾತೆಯಲ್ಲಿ ನಡೆಯುವ ಎಲ್ಲದಕ್ಕೂ ನೀವೇ ಜವಾಬ್ದಾರರು. ನಿಮ್ಮ ಖಾತೆಯ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಅನುಮತಿಯಿಲ್ಲದೆ ಯಾರಾದರೂ ನಿಮ್ಮ ಖಾತೆಯನ್ನು ಅನ್ವೇಷಿಸಿದ್ದಾರೆ ಎಂದು ತಿಳಿದರೆ ಅಥವಾ ಅನುಮಾನ ಬಂದರೆ, ತಕ್ಷಣವೇ Reddit ಗೆ ತಿಳಿಸಬೇಕು.ನಿಮ್ಮ ಖಾತೆಗಾಗಿ ಮಾತ್ರ ಬಳಸುವ ಬಲವಾದ ಪಾಸ್ವರ್ಡ್ ಇಡುವಂತೆ ಮತ್ತು ಎರಡು ಹಂತದ ದೃಢೀಕರಣವನ್ನುಸಕ್ರಿಯಗೊಳಿಸುವಂತೆ ನಾವು ಶಿಫಾರಸು ಮಾಡುತ್ತೇವೆ. ನಿಮ್ಮ ಖಾತೆಗೆ ಫೋನ್ ನಂಬರ್ ಸೇರಿಸಿ, ನಂತರ ಆ ನಂಬರ್ ಬದಲಾಯಿಸಿದರೆ ಅಥವಾ ಬಳಕೆಯನ್ನು ನಿಲ್ಲಿಸಿದರೆ, ನಿಮ್ಮ ಖಾತೆಯಲ್ಲಿರುವ ಮಾಹಿತಿಯನ್ನೂ
ನವೀಕರಿಸಿ. ನಮ್ಮಿಂದ ಮುಂಚಿತವಾಗಿ ಲಿಖಿತ ಅನುಮತಿ ಪಡೆಯದೆ, ನಿಮ್ಮ ಖಾತೆಯನ್ನು ಬೇರೆಯವರಿಗೆ ನೀಡುವಂತಿಲ್ಲ, ಮಾರುವಂತಿಲ್ಲ ಅಥವಾ ವರ್ಗಾಯಿಸುವಂತಿಲ್ಲ.
5. ನೀವು ಹಂಚಿಕೊಳ್ಳುವ ವಿಷಯಗಳು
ನಮ್ಮ ಸೇವೆಗಳಲ್ಲಿ ಮಾಹಿತಿ, ಪಠ್ಯ, ಲಿಂಕ್ಗಳು, ಗ್ರಾಫಿಕ್ಸ್, ಫೋಟೋಗಳು, ವೀಡಿಯೊಗಳು, ಆಡಿಯೊ, ಲೈವ್ ಸ್ಟ್ರೀಮ್ಗಳು, ಸಾಫ್ಟ್ವೇರ್, ಟೂಲ್ಗಳು ಅಥವಾ ಇತರ ವಿಷಯಗಳು (“ವಿಷಯಗಳು”) ಇರಬಹುದು. ಇವುಗಳಲ್ಲಿ ನೀವು ಅಥವಾ ನಿಮ್ಮ ಖಾತೆಯ ಮೂಲಕ Reddit ನಲ್ಲಿ ರಚಿಸುವ ಅಥವಾ ಹಂಚಿಕೊಳ್ಳುವ ವಿಷಯಗಳೂ (“ನಿಮ್ಮ ವಿಷಯಗಳು”) ಸೇರಿರುತ್ತವೆ. ನಿಮ್ಮ ವಿಷಯಗಳ ಸಂಪೂರ್ಣತೆ, ಸತ್ಯಾಸತ್ಯತೆ, ನಿಖರತೆ ಅಥವಾ ವಿಶ್ವಾಸಾರ್ಹತೆಗೆ ನಾವು ಜವಾಬ್ದಾರರಲ್ಲ. ಹಾಗೆಯೇ, ನಿಮ್ಮ ವಿಷಯಗಳನ್ನು ನಾವು ಸ್ಪಷ್ಟವಾಗಿ ಅಥವಾ ಪರೋಕ್ಷವಾಗಿ ಅನುಮೋದಿಸುತ್ತೇವೆ, ಬೆಂಬಲಿಸುತ್ತೇವೆ ಅಥವಾ ಅವುಗಳ ಬಗ್ಗೆ ಖಾತರಿ ನೀಡುತ್ತೇವೆ ಎಂದರ್ಥವಲ್ಲ.
ನೀವು ನಿಮ್ಮ ವಿಷಯಗಳನ್ನು Reddit ನಲ್ಲಿ ಹಂಚಿಕೊಂಡಾಗ, ಆ ವಿಷಯಗಳಿಗೆ ಸಂಬಂಧಿಸಿದಂತೆ ಈ ನಿಯಮಗಳಲ್ಲಿ ತಿಳಿಸಿರುವ ಹಕ್ಕುಗಳನ್ನು ನಮಗೆ ನೀಡಲು ಅಗತ್ಯವಿರುವ ಎಲ್ಲಾ ಹಕ್ಕುಗಳು ಮತ್ತು ಅಧಿಕಾರಗಳು ನಿಮ್ಮಲ್ಲಿವೆ ಎಂದು ಖಚಿತಪಡಿಸುತ್ತೀರಿ. ನಿಮ್ಮ ವಿಷಯಗಳಿಗೆ ನೀವೇ ಜವಾಬ್ದಾರರಾಗಿರುವುದರಿಂದ, ಅಗತ್ಯವಾದ ಹಕ್ಕುಗಳಿಲ್ಲದೆ ವಿಷಯಗಳನ್ನು ಪೋಸ್ಟ್ ಮಾಡಿದರೆ ಅಥವಾ ಹಂಚಿಕೊಂಡರೆ, ಅದರಿಂದ ನಿಮಗೆ ಕಾನೂನುಬದ್ಧ ಹೊಣೆಗಾರಿಕೆ ಉಂಟಾಗಬಹುದು.
ನಿಮ್ಮ ವಿಷಯಗಳ ಮೇಲಿನ ಮಾಲೀಕತ್ವದ ಹಕ್ಕುಗಳು ನಿಮ್ಮಲ್ಲೇ ಉಳಿಯುತ್ತವೆ. ಆದರೆ, ಆ ವಿಷಯಗಳನ್ನು ಬಳಸಲು ನೀವು Reddit ಗೆ ಕೆಳಗಿನ ಹಕ್ಕುಗಳನ್ನು ನೀಡುತ್ತೀರಿ:
ನೀವು Reddit ನಲ್ಲಿ ವಿಷಯಗಳನ್ನು ರಚಿಸಿದಾಗ ಅಥವಾ ಹಂಚಿಕೊಂಡಾಗ, ಆ ವಿಷಯಗಳನ್ನು ಜಗತ್ತಿನಾದ್ಯಂತ ಬಳಸಲು, ನಕಲಿಸಲು, ಬದಲಾಯಿಸಲು, ಹೊಂದಾಣಿಕೆ ಮಾಡಲು, ಅವುಗಳ ಆಧಾರದ ಮೇಲೆ ಹೊಸ ವಿಷಯಗಳನ್ನು ರಚಿಸಲು, ಹಂಚಲು, ಸಂಗ್ರಹಿಸಲು, ಪ್ರದರ್ಶಿಸಲು ಮತ್ತು ಪ್ರಸಾರ ಮಾಡಲು Reddit ಗೆ ಉಚಿತವಾಗಿ, ಶಾಶ್ವತವಾಗಿ, ಹಿಂಪಡೆಯಲಾಗದಂತೆ, ಪ್ರತ್ಯೇಕವಲ್ಲದಂತೆ, ಇತರರಿಗೆ ವರ್ಗಾಯಿಸಬಹುದಾದಂತೆ ಹಾಗೂ ಉಪ-ಪರವಾನಗಿ ನೀಡಬಹುದಾದಂತೆ ಅನುಮತಿ ನೀಡುತ್ತೀರಿ. ನಿಮ್ಮ ವಿಷಯಗಳಿಗೆ ಸಂಬಂಧಿಸಿದಂತೆ ನೀವು ನೀಡಿರುವ ಹೆಸರು, ಬಳಕೆದಾರರ ಹೆಸರು, ಧ್ವನಿ ಅಥವಾ ರೂಪವನ್ನೂ ಈಗಿರುವ ಅಥವಾ ಭವಿಷ್ಯದಲ್ಲಿ ಅಭಿವೃದ್ಧಿಪಡಿಸುವ ಯಾವುದೇ ಮಾಧ್ಯಮಗಳಲ್ಲಿ ಮತ್ತು ಚಾನೆಲ್ಗಳಲ್ಲಿ ಬಳಸುವ ಹಕ್ಕು ಇದರಲ್ಲಿ ಸೇರಿದೆ. Reddit ಜೊತೆ ಪಾಲುದಾರಿಕೆ ಹೊಂದಿರುವ ಇತರ ಕಂಪನಿಗಳು, ಸಂಸ್ಥೆಗಳು ಅಥವಾ ವ್ಯಕ್ತಿಗಳು ನಿಮ್ಮ ವಿಷಯಗಳನ್ನು ಮರುಹಂಚಿಕೊಳ್ಳಲು, ಪ್ರಸಾರ ಮಾಡಲು, ವಿತರಿಸಲು ಅಥವಾ ಪ್ರಕಟಿಸಲು ಅವಕಾಶ ನೀಡುವ ಹಕ್ಕು ಕೂಡ ಇದರಲ್ಲಿ ಸೇರಿದೆ. ಉದಾಹರಣೆಗೆ, ನಮ್ಮ ಸಾರ್ವಜನಿಕ ವಿಷಯ ನೀತಿಯಲ್ಲಿವಿವರಿಸಿರುವಂತೆ, AI ಮತ್ತು ಮಷಿನ್ ಲರ್ನಿಂಗ್ ಮಾದರಿಗಳಿಗೆ ತರಬೇತಿ ನೀಡಲು ನಿಮ್ಮ ವಿಷಯಗಳನ್ನು ಬಳಸುವ ಹಕ್ಕು ಕೂಡ ನಮಗಿರುತ್ತದೆ. ನಿಮ್ಮ ವಿಷಯಗಳಿಗೆ ಸಂಬಂಧಿಸಿದ ಮೆಟಾಡೇಟಾವನ್ನು ನಾವು ತೆಗೆದುಹಾಕಬಹುದು ಎಂಬುದಕ್ಕೂ ನೀವು ಒಪ್ಪುತ್ತೀರಿ.
ಹಾಗೆಯೇ, ನಿಮ್ಮ ವಿಷಯಗಳಿಗೆ ಸಂಬಂಧಿಸಿದ ನೈತಿಕ ಹಕ್ಕುಗಳು ಅಥವಾ ಮೂಲ ರಚನೆಕಾರರಾಗಿ ಗುರುತಿಸಬೇಕೆಂಬ ಹಕ್ಕಿನ ಕುರಿತು ನೀವು ಯಾವುದೇ ಹಕ್ಕು ಅಥವಾ ಬೇಡಿಕೆಯನ್ನು ಮುಂದಿಡುವುದಿಲ್ಲ ಎಂದು ಹಿಂಪಡೆಯಲಾಗದಂತೆ ಒಪ್ಪುತ್ತೀರಿ. Reddit ಅಥವಾ ನಮ್ಮ ಸೇವೆಗಳ ಬಗ್ಗೆ ನೀವು ನೀಡುವ ಆಲೋಚನೆಗಳು, ಸಲಹೆಗಳು ಮತ್ತು ಪ್ರತಿಕ್ರಿಯೆಗಳು ಸಂಪೂರ್ಣವಾಗಿ ನಿಮ್ಮ ಸ್ವಂತ ಇಚ್ಛೆಯಿಂದ ನೀಡಿದವುಗಳಾಗಿರುತ್ತವೆ. ಅವುಗಳಿಗಾಗಿ ನಿಮಗೆ ಯಾವುದೇ ಹಣ ನೀಡದೆ ಅಥವಾ ನಿಮ್ಮ ಬಗ್ಗೆ ಯಾವುದೇ ಬಾಧ್ಯತೆ ಇಲ್ಲದೆ
, Reddit ಅವುಗಳನ್ನು ಬಳಸಬಹುದು ಎಂಬುದಕ್ಕೂ ನೀವು ಒಪ್ಪುತ್ತೀರಿ. ನಿಮ್ಮ ವಿಷಯಗಳನ್ನು ಪರಿಶೀಲಿಸುವುದು, ಸಂಪಾದಿಸುವುದು ಅಥವಾ ಮೇಲ್ವಿಚಾರಣೆ ಮಾಡುವುದು ನಮಗೆ ಕಡ್ಡಾಯವಲ್ಲ. ಆದರೂ, ನಮ್ಮ ಸ್ವಂತ ನಿರ್ಧಾರದ ಮೇರೆಗೆ, ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಕ್ಕಾಗಿ ನಿಮ್ಮ ವಿಷಯಗಳನ್ನು ಅಳಿಸಬಹುದು ಅಥವಾ ಅವುಗಳಿಂದ ಹಣ ಗಳಿಸುವ ಅವಕಾಶವನ್ನು ನಿರಾಕರಿಸಬಹುದು. ಈ ನಿಯಮಗಳು,Reddit ನಿಯಮಗಳುಅಥವಾ ನಮ್ಮಇತರ ನಿಯಮಗಳು ಮತ್ತು ನೀತಿಗಳನ್ನುಉಲ್ಲಂಘಿಸಿದರೆ, ಅಥವಾ ನಿಮ್ಮಿಂದ ನಮಗೆ ಕಾನೂನುಬದ್ಧ ಹೊಣೆಗಾರಿಕೆ ಉಂಟಾಗುವ ಸಾಧ್ಯತೆಯಿದ್ದರೆ, ನಿಮ್ಮ ವಿಷಯಗಳನ್ನು ತೆಗೆದುಹಾಕಬಹುದು. ವಿಷಯಗಳ ಮೇಲ್ವಿಚಾರಣೆಯ ಬಗ್ಗೆ Reddit ಹೇಗೆ ನಿರ್ಧಾರ ತೆಗೆದುಕೊಳ್ಳುತ್ತದೆ,
Reddit ನಿಯಮಗಳನ್ನು ಹೇಗೆ ಜಾರಿಗೊಳಿಸುತ್ತದೆ ಮತ್ತು ವಿಷಯಗಳನ್ನು ತೆಗೆದುಹಾಕುವ ಅಥವಾ ನಿರ್ಬಂಧಿಸುವ ನಿರ್ಧಾರಗಳ ವಿರುದ್ಧ ಹೇಗೆ ಮೇಲ್ಮನವಿ ಸಲ್ಲಿಸಬಹುದು ಎಂಬ ಹೆಚ್ಚಿನ ಮಾಹಿತಿಗಾಗಿ,ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.
6. ಮೂರನೇ ಪಕ್ಷದ ವಿಷಯಗಳು, ಜಾಹೀರಾತುಗಳು ಮತ್ತು ಪ್ರಚಾರಗಳು
ನಮ್ಮ ಸೇವೆಗಳಲ್ಲಿ ಮೂರನೇ ವ್ಯಕ್ತಿಗಳ ವೆಬ್ಸೈಟ್ಗಳು, ಉತ್ಪನ್ನಗಳು ಅಥವಾ ಸೇವೆಗಳ ಲಿಂಕ್ಗಳು ಇರಬಹುದು. ಇವುಗಳನ್ನು ಜಾಹೀರಾತುದಾರರು, ನಮ್ಮ ಅಂಗಸಂಸ್ಥೆಗಳು, ಪಾಲುದಾರರು ಅಥವಾ ಇತರ ಬಳಕೆದಾರರು ಪೋಸ್ಟ್ ಮಾಡಿರಬಹುದು. ಇವುಗಳನ್ನು (“ಮೂರನೇ ಪಕ್ಷಗಳ ವಿಷಯಗಳು”) ಎಂದು ಕರೆಯಲಾಗುತ್ತದೆ.ಈ ವಿಷಯಗಳು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಹಾಗಾಗಿ, ಇತರರ ವೆಬ್ಸೈಟ್ಗಳು, ಉತ್ಪನ್ನಗಳು ಅಥವಾ ಸೇವೆಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ. ಇಂತಹ ವಿಷಯಗಳನ್ನು ನೀವು ಬಳಸುವುದು ನಿಮ್ಮ ಸ್ವಂತ ಜವಾಬ್ದಾರಿ. ಅವುಗಳಿಗೆ ಸಂಬಂಧಿಸಿದ ಯಾವುದೇ ವ್ಯವಹಾರ ಮಾಡುವ ಮೊದಲು, ಅಗತ್ಯವೆನಿಸುವ ಪರಿಶೀಲನೆಯನ್ನು ನೀವೇ ಮಾಡಿಕೊಳ್ಳಬೇಕು.
ನಮ್ಮ ಸೇವೆಗಳಲ್ಲಿ ಪ್ರಾಯೋಜಿತ ವಿಷಯಗಳು ಅಥವಾ ಜಾಹೀರಾತುಗಳೂ ಇರಬಹುದು. ಜಾಹೀರಾತುಗಳ ಪ್ರಕಾರ, ಪ್ರಮಾಣ ಮತ್ತು ಯಾರಿಗೆ ಅವುಗಳನ್ನು ತೋರಿಸಲಾಗುತ್ತದೆ ಎಂಬುದು ಬದಲಾಗಬಹುದು. ನಿಮ್ಮ ವಿಷಯಗಳು ಸೇರಿದಂತೆ, ನಮ್ಮ ಸೇವೆಗಳಲ್ಲಿ ಯಾವುದೇ ವಿಷಯ ಅಥವಾ ಮಾಹಿತಿಯನ್ನು ತೋರಿಸುವಾಗ ಅದರ ಜೊತೆಗೆ ಜಾಹೀರಾತುಗಳನ್ನು ಪ್ರದರ್ಶಿಸಬಹುದು ಎಂಬುದನ್ನು ನೀವು ಒಪ್ಪುತ್ತೀರಿ.
ನೀವು ನಮ್ಮ ಸೇವೆಗಳನ್ನು ಬಳಸಿಕೊಂಡು ಸ್ಪರ್ಧೆ ಅಥವಾ ಲಕ್ಕಿ ಡ್ರಾ ಸೇರಿದಂತೆ ಯಾವುದೇ ಪ್ರಚಾರ ಕಾರ್ಯಕ್ರಮವನ್ನು ನಡೆಸಲು ಆಯ್ಕೆ ಮಾಡಿದರೆ, ಆ ಕಾರ್ಯಕ್ರಮವನ್ನು (“ಪ್ರಚಾರ ಕಾರ್ಯಕ್ರಮ”) ಎಲ್ಲಾ ಅನ್ವಯವಾಗುವ ಕಾನೂನುಗಳು ಮತ್ತು ನಿಯಮಗಳಿಗೆ ಅನುಸಾರವಾಗಿ ನಡೆಸುವ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ. ಇದರಲ್ಲಿ ಅಧಿಕೃತ ನಿಯಮಗಳನ್ನು ರೂಪಿಸುವುದು, ಕೊಡುಗೆಗಳ ಷರತ್ತುಗಳನ್ನು ತಿಳಿಸುವುದು, ಯಾರು ಭಾಗವಹಿಸಬಹುದು ಎಂಬ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸುವುದು (ಮತ್ತು ಅಗತ್ಯವಿರುವ ಪರವಾನಗಿಗಳು, ನೋಂದಣಿಗಳು, ಬಾಂಡ್ಗಳು ಹಾಗೂ ನಿಯಂತ್ರಣ ಪ್ರಾಧಿಕಾರಗಳ ಅನುಮೋದನೆಗಳನ್ನು ಪಡೆಯುವುದು ಸೇರಿದೆ). ನಿಮ್ಮ ಪ್ರಚಾರ ಕಾರ್ಯಕ್ರಮಕ್ಕೆ Reddit ಪ್ರಾಯೋಜಕತ್ವ ನೀಡಿಲ್ಲ, ಅದನ್ನು ಅನುಮೋದಿಸಿಲ್ಲ ಮತ್ತು ಆ ಕಾರ್ಯಕ್ರಮದೊಂದಿಗೆ Reddit ಗೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಜೊತೆಗೆ, ಆ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಅದಕ್ಕೆ ಸಂಬಂಧಿಸಿದ ಯಾವುದೇ ಹೊಣೆಗಾರಿಕೆಯಿಂದ Reddit ಗೆ ವಿನಾಯಿತಿ ನೀಡಬೇಕು ಎಂಬ ನಿಯಮವನ್ನೂ ಸೇರಿಸಬೇಕು. ನಿಮ್ಮ ಪ್ರಚಾರ ಕಾರ್ಯಕ್ರಮಕ್ಕೆ ನಾವು ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ. ಹಾಗಾಗಿ, ಅಂತಹ ಕಾರ್ಯಕ್ರಮವನ್ನು ನಡೆಸುವ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ.
7. ನೀವು ಮಾಡಬಾರದ ಕೆಲಸಗಳು
ನೀವು ನಮ್ಮ ಸೇವೆಗಳನ್ನು ಬಳಸುವಾಗ ಅಥವಾ ಪ್ರವೇಶಿಸುವಾಗ, ಈ ನಿಯಮಗಳು ಮತ್ತು ಅನ್ವಯವಾಗುವ ಎಲ್ಲಾ ಕಾನೂನುಗಳು, ನಿಯಮಗಳು ಹಾಗೂ ನಿಬಂಧನೆಗಳನ್ನು ಪಾಲಿಸಬೇಕು. ನಿಷೇಧಿತ ವಿಷಯಗಳು ಮತ್ತು ನಡವಳಿಕೆಗಳ ಬಗ್ಗೆ ತಿಳಿಯಲು, ಈ ನಿಯಮಗಳ ಭಾಗವಾಗಿರುವReddit ನಿಯಮಗಳನ್ನುಪರಿಶೀಲಿಸಿ.Reddit ನಿಯಮಗಳಲ್ಲಿಹೇಳಿರುವ ನಿಷೇಧಗಳ ಜೊತೆಗೆ, ನೀವು ಈ ಕೆಳಗಿನ ಕೆಲಸಗಳನ್ನೂ ಮಾಡಬಾರದು:
- ಸ್ವಯಂಚಾಲಿತ ವಿಧಾನಗಳಲ್ಲಿ, ಅಂದರೆ ಗಣಕಯಂತ್ರ ಕಾರ್ಯಕ್ರಮಗಳ ಮೂಲಕ ಅಥವಾ ಬೇರೆ ಯಾವುದೇ ರೀತಿಯಲ್ಲಿ, Reddit ನ ಸೇವೆಗಳಿಗೆ ಅಡ್ಡಿಪಡಿಸುವ, ಅವುಗಳನ್ನು ನಿಷ್ಕ್ರಿಯಗೊಳಿಸುವ, ಅಸ್ತವ್ಯಸ್ತಗೊಳಿಸುವ, ಅತಿಯಾದ ಹೊರೆ ಉಂಟುಮಾಡುವ ಅಥವಾ ಅವುಗಳ ಕಾರ್ಯನಿರ್ವಹಣೆಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ಸೇವೆಗಳನ್ನು ಬಳಸುವುದು;
- ಬೇರೊಬ್ಬರ ಖಾತೆಯನ್ನು ಅಥವಾ ಸಾರ್ವಜನಿಕರಿಗೆ ಲಭ್ಯವಿಲ್ಲದ Reddit ನ ಯಾವುದೇ ಭಾಗವನ್ನು ಪ್ರವೇಶಿಸುವುದು ಅಥವಾ ಪ್ರವೇಶಿಸಲು ಪ್ರಯತ್ನಿಸುವುದು. ಇದರಲ್ಲಿ Reddit ನ ಸೇವೆಗಳಿಗೆ ಸಂಪರ್ಕಗೊಂಡಿರುವ ಅಥವಾ ಅವುಗಳೊಂದಿಗೆ ಬಳಸಲಾಗುವ ಗಣಕಯಂತ್ರ ವ್ಯವಸ್ಥೆಗಳು ಮತ್ತು ಜಾಲಗಳೂ ಸೇರಿವೆ.
- Reddit ನ ಸೇವೆಗಳ ಮೂಲಕ ಅಥವಾ ಅವುಗಳಿಗೆ ಯಾವುದೇ ವೈರಸ್ಗಳು, ಹುಳುಗಳಂತೆ ಹರಡುವ ಹಾನಿಕಾರಕ ತಂತ್ರಾಂಶಗಳು, ದುರುದ್ದೇಶಪೂರಿತ ಸಂಕೇತಗಳು ಅಥವಾ ಸೇವೆಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಇತರ ತಂತ್ರಾಂಶಗಳನ್ನು ಅಪ್ಲೋಡ್ ಮಾಡುವುದು, ಕಳುಹಿಸುವುದು ಅಥವಾ ಹಂಚಿಕೊಳ್ಳುವುದು ನಿಷಿದ್ಧ. ಇದರಲ್ಲಿ ಸೇವೆಗಳ ಸುರಕ್ಷತಾ ಸಂಬಂಧಿತ ಫೀಚರ್ಗಳಿಗೆ ತೊಂದರೆ ಉಂಟುಮಾಡುವ ತಂತ್ರಾಂಶಗಳೂ ಸೇರಿವೆ.
- Reddit ನ ಸೇವೆಗಳನ್ನು ಬಳಸಿಕೊಂಡು ಅನ್ವಯವಾಗುವ ಕಾನೂನುಗಳನ್ನು ಉಲ್ಲಂಘಿಸುವುದು ಅಥವಾ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಬೌದ್ಧಿಕ ಸ್ವತ್ತು ಹಕ್ಕುಗಳು ಅಥವಾ ಇತರ ಸ್ವಾಮ್ಯ ಹಕ್ಕುಗಳಿಗೆ ಧಕ್ಕೆ ತರುವುದು ನಿಷಿದ್ಧ;
- ಈ ನಿಯಮಗಳಲ್ಲಿ ಅಥವಾ Reddit ಜೊತೆ ಮಾಡಿಕೊಂಡಿರುವ ಪ್ರತ್ಯೇಕ ಒಪ್ಪಂದದಲ್ಲಿ ಅನುಮತಿ ನೀಡಿರುವುದನ್ನು ಹೊರತುಪಡಿಸಿ, ಯಾವುದೇ ವಿಧಾನದಲ್ಲಿ (ಸ್ವಯಂಚಾಲಿತವಾಗಿ ಅಥವಾ ಬೇರೆ ರೀತಿಯಲ್ಲಿ) Reddit ನ ಸೇವೆಗಳನ್ನು ಪ್ರವೇಶಿಸುವುದು, ಹುಡುಕುವುದು ಅಥವಾ ಅವುಗಳಿಂದ ಮಾಹಿತಿಯನ್ನು ಸಂಗ್ರಹಿಸುವುದು ನಿಷಿದ್ಧ. ನಮ್ಮ `robots.txt` ಕಡತದಲ್ಲಿ ತಿಳಿಸಿರುವ ನಿಯಮಗಳನ್ನು ಪಾಲಿಸುವ ಷರತ್ತಿನ ಮೇಲೆ, ಸ್ವಯಂಚಾಲಿತವಾಗಿ ಸೇವೆಗಳಲ್ಲಿನ ಮಾಹಿತಿಯನ್ನು ಹುಡುಕಲು ನಾವು ಅನುಮತಿ ನೀಡುತ್ತೇವೆ. ಆದರೆ, Reddit ನಿಂದ ಮುಂಚಿತವಾಗಿ ಲಿಖಿತ ಒಪ್ಪಿಗೆ ಪಡೆಯದೆ, ಸೇವೆಗಳಲ್ಲಿನ ಮಾಹಿತಿಯನ್ನು ಸ್ವಯಂಚಾಲಿತವಾಗಿ ತೆಗೆದು ಸಂಗ್ರಹಿಸುವುದು ನಿಷಿದ್ಧ; ಅಥವಾ
- Reddit ಗೆ ಅಥವಾ ಯಾವುದೇ ಪಾವತಿ ವ್ಯವಸ್ಥೆಗೆ ದುರುಪಯೋಗ ಮಾಡುವ ಅಥವಾ ವಂಚಿಸುವ ಉದ್ದೇಶದಿಂದ ಸೇವೆಗಳನ್ನು ಬಳಸುತ್ತಿದ್ದೀರಿ ಎಂದು ನಮಗೆ ಸಮಂಜಸವಾಗಿ ಅನಿಸಿದರೆ, ಆ ರೀತಿಯಲ್ಲಿ Reddit ನ ಸೇವೆಗಳನ್ನು ಬಳಸುವುದು ನಿಷಿದ್ಧ.
ಈ ನಿಯಮಗಳು ಅಥವಾ ನಮ್ಮ Reddit ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸುವವಿಷಯ ಅಥವಾ ನಡವಳಿಕೆಯನ್ನು ವರದಿ ಮಾಡಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಭದ್ರತಾ ದೋಷಗಳ ಜವಾಬ್ದಾರಿಯುತ ವರದಿ ಮಾಡುವಿಕೆಯನ್ನು ಸಹ ನಾವು ಬೆಂಬಲಿಸುತ್ತೇವೆ. ಭದ್ರತಾ ಸಮಸ್ಯೆಯನ್ನು ವರದಿ ಮಾಡಲು, ದಯವಿಟ್ಟು security@reddit.com ಗೆ ಇಮೇಲ್ ಮಾಡಿ.
8. ಮಾಡರೇಟರ್
ಸಬ್ರೆಡ್ಡಿಟ್ ಅನ್ನು ನಿರ್ವಹಿಸುವುದು ಅಧಿಕೃತ ಉದ್ಯೋಗವಲ್ಲ. ಇದು ಸೇವೆಗಳನ್ನು ಬಳಸುವವರಿಗೆ ಸಿಗಬಹುದಾದ ಸ್ವಯಂಪ್ರೇರಿತ ಜವಾಬ್ದಾರಿಯಾಗಿದೆ. ಮಾಡರೇಟರ್ ಕೈಗೊಳ್ಳುವ ಕ್ರಮಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ. ಈ ನಿಯಮಗಳನ್ನು ಉಲ್ಲಂಘಿಸುವುದು ಸೇರಿದಂತೆ, ಯಾವುದೇ ಕಾರಣಕ್ಕಾಗಿ ಅಥವಾ ಯಾವುದೇ ಕಾರಣವಿಲ್ಲದೆಯೂ, ಬಳಕೆದಾರರ ಸಮುದಾಯ ಮಾಡರೇಟ್ ಮಾಡುವ ಅಧಿಕಾರವನ್ನು ಯಾವುದೇ ಸಮಯದಲ್ಲಿ ಹಿಂಪಡೆಯುವ ಅಥವಾ ಸೀಮಿತಗೊಳಿಸುವ ಹಕ್ಕು ನಮಗಿದೆ.
ನೀವು ಸಬ್ರೆಡ್ಡಿಟ್ ಅನ್ನು ಮಾಡರೇಟ್ ಮಾಡಲು ಆಯ್ಕೆ ಮಾಡಿಕೊಂಡರೆ:
- ನೀವು ಮಾಡರೇಟರ್ ನೀತಿ ಸಂಹಿತೆಯ ನಿಯಮಗಳನ್ನು ಪಾಲಿಸಲು ಒಪ್ಪುತ್ತೀರಿ;
- ನೀವು ಮಾಡರೇಟ್ ಮಾಡುವ ಸಬ್ರೆಡ್ಡಿಟ್ಗೆ ಸಂಬಂಧಿಸಿದ ವರದಿಗಳು ಬಂದಾಗ, ಸೂಕ್ತ ಕ್ರಮ ಕೈಗೊಳ್ಳಲು ನೀವು ಒಪ್ಪುತ್ತೀರಿ. ಇದರಲ್ಲಿ ನಿಯಮಗಳನ್ನು ಉಲ್ಲಂಘಿಸುವ ವಿಷಯಗಳನ್ನು ತೆಗೆದುಹಾಕುವುದು ಮತ್ತು/ಅಥವಾ ಪರಿಶೀಲನೆಗಾಗಿ ತಕ್ಷಣವೇ Reddit ಗೆ ವಿಷಯವನ್ನು ತಿಳಿಸುವುದು ಸೇರಿರಬಹುದು.
- ನೀವು Redditನ ಪರವಾಗಿ ಕಾರ್ಯನಿರ್ವಹಿಸಲು ಅಧಿಕಾರ ಹೊಂದಿಲ್ಲ ಮತ್ತು ಅಂತಹ ಅಧಿಕಾರ ನಿಮಗಿದೆ ಎಂದು ಹೇಳಿಕೊಳ್ಳುವಂತೆಯೂ ಇಲ್ಲ;
- ನಮ್ಮ ಲಿಖಿತ ಅನುಮತಿಯಿಲ್ಲದೆ, Redditನ ಪರವಾಗಿ ಅಥವಾ ನೀವು ಮಾಡರೇಟ್ ಮಾಡುವ ಯಾವುದೇ ಸಬ್ರೆಡ್ಡಿಟ್ ಪರವಾಗಿ, ಮೂರನೇ ವ್ಯಕ್ತಿಯೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವಂತಿಲ್ಲ;
- ಮೂರನೇ ವ್ಯಕ್ತಿಗಳಿಂದ ಯಾವುದೇ ರೀತಿಯ ಹಣ, ಪ್ರತಿಫಲ, ಉಡುಗೊರೆ ಅಥವಾ ಉಪಕಾರವನ್ನು ಪಡೆದು, ಅದಕ್ಕೆ ಬದಲಾಗಿ ಸಮುದಾಯದ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವಂತಿಲ್ಲ;
- ನೀವು ಸಬ್ರೆಡ್ಡಿಟ್ ಅನ್ನು ಮಾಡರೇಟ್ ಮಾಡುವುದರಿಂದ ಸಾರ್ವಜನಿಕರಿಗೆ ಲಭ್ಯವಿಲ್ಲದ ಮಾಹಿತಿಗೆ ಪ್ರವೇಶ ಪಡೆದಿದ್ದರೆ, ಆ ಮಾಹಿತಿಯನ್ನು ಸಮುದಾಯ ಮಾಡರೇಟರ್ ಆಗಿ ನಿಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು; ಮತ್ತು
- ನೀವು ಮಾಡರೇಟ್ ಮಾಡುವ ಸಬ್ರೆಡ್ಡಿಟ್ಗಳಿಗೆ ನಿಯಮಗಳನ್ನು ರಚಿಸಬಹುದು ಮತ್ತು ಜಾರಿಗೊಳಿಸಬಹುದು, ಆದರೆ ಅಂತಹ ನಿಯಮಗಳು ಈ ನಿಯಮಗಳು,Reddit ನಿಯಮಗಳು ಅಥವಾ ಮಾಡರೇಟರ್ ನೀತಿ ಸಂಹಿತೆಯೊಂದಿಗೆ ಸಂಘರ್ಷಿಸುವುದಿಲ್ಲ.
Reddit ಗೆ, ಯಾವುದೇ ಸಮುದಾಯ ಮಾಡರೇಟರ್ ಕೈಗೊಂಡ ಕ್ರಮ ಅಥವಾ ತೆಗೆದುಕೊಂಡ ನಿರ್ಧಾರವು Reddit ನ ಅಥವಾ Reddit ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅನಿಸಿದರೆ, ಆ ಕ್ರಮ ಅಥವಾ ನಿರ್ಧಾರವನ್ನು ರದ್ದುಗೊಳಿಸುವ ಹಕ್ಕು Reddit ಗೆ ಇದೆ. ಆದರೆ, ಹಾಗೆ ಮಾಡಲೇಬೇಕು ಎಂಬ ಕಡ್ಡಾಯವಿಲ್ಲ. ಈ ಕುರಿತು ಅಂತಿಮ ನಿರ್ಧಾರವನ್ನು Reddit ಸ್ವತಃ ತೆಗೆದುಕೊಳ್ಳುತ್ತದೆ.
9. ಕೃತಿಸ್ವಾಮ್ಯ, ಟ್ರೇಡ್ಮಾರ್ಕ್, ಡಿಜಿಟಲ್ ಹಕ್ಕುಸ್ವಾಮ್ಯ ಕಾನೂನು ಮತ್ತು ವಿಷಯಗಳನ್ನು ತೆಗೆದುಹಾಕುವುದು
Reddit ಇತರರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಗೌರವಿಸುತ್ತದೆ. ನಮ್ಮ ಸೇವೆಗಳನ್ನು ಬಳಸುವವರೂ ಅದೇ ರೀತಿ ಗೌರವಿಸಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಇದಕ್ಕಾಗಿ ನಮ್ಮಲ್ಲಿ ಒಂದುನೀತಿಇದೆ. ಅದರ ಪ್ರಕಾರ, ಇತರರ ಹಕ್ಕುಗಳನ್ನು ಉಲ್ಲಂಘಿಸುವ ವಿಷಯಗಳನ್ನು ನಮ್ಮ ಸೇವೆಗಳಿಂದ ತೆಗೆದುಹಾಕಲಾಗುತ್ತದೆ. ಪದೇಪದೇ ಇಂತಹ ಉಲ್ಲಂಘನೆ ಮಾಡುವ ಬಳಕೆದಾರರ ಖಾತೆಗಳನ್ನು ಸೂಕ್ತ ಸಂದರ್ಭಗಳಲ್ಲಿ ಮುಚ್ಚಬಹುದು. ನಮ್ಮ ಸೇವೆಗಳಲ್ಲಿ ನಿಮ್ಮ ಮಾಲೀಕತ್ವದಲ್ಲಿರುವ ಅಥವಾ ನಿಮ್ಮ ನಿಯಂತ್ರಣದಲ್ಲಿರುವ ಕಾಪಿರೈಟ್ ಅಥವಾ ಟ್ರೇಡ್ಮಾರ್ಕ್ ಹಕ್ಕುಗಳನ್ನು ಉಲ್ಲಂಘಿಸುವ ಯಾವುದಾದರೂ ವಿಷಯವಿದೆ ಎಂದು ನಿಮಗೆ ಅನಿಸಿದರೆ, ನಮ್ಮ ಕಾಪಿರೈಟ್ ವರದಿ ಫಾರ್ಮ್ಅಥವಾಟ್ರೇಡ್ಮಾರ್ಕ್ ವರದಿ ಫಾರ್ಮ್ಭರ್ತಿ ಮಾಡುವ ಮೂಲಕ Reddit ನ ಸಂಬಂಧಪಟ್ಟ ಅಧಿಕಾರಿಗೆ ತಿಳಿಸಬಹುದು ಅಥವಾ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದು:
ಕಾಪಿರೈಟ್ ಅಧಿಕಾರಿ
Reddit, Inc.
303 2nd Street, Suite 500S
San Francisco, CA 94107
copyright@reddit.com
ಸರಿಯಾದನೋಟಿಸ್ ನೀಡಲು ಬೇಕಾದ ಮಾಹಿತಿಗಾಗಿ 17 U.S.C. § 512(c)(3)ನೋಡಿ. ನಮ್ಮ ಸೇವೆಗಳಲ್ಲಿರುವ ಯಾವುದಾದರೂ ವಿಷಯ ಅಥವಾ ಚಟುವಟಿಕೆ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ತಿಳಿದಿದ್ದರೂ ತಪ್ಪಾಗಿ ವರದಿ ಮಾಡಿದರೆ, ಅದರಿಂದ ಉಂಟಾಗುವ ಕೆಲವು ವೆಚ್ಚಗಳು ಮತ್ತು ನಷ್ಟಗಳಿಗೆ ನೀವು Reddit ಗೆ ಜವಾಬ್ದಾರರಾಗಬೇಕಾಗಬಹುದು ಎಂಬುದನ್ನು ಗಮನದಲ್ಲಿಡಿ.
ಕಾಪಿರೈಟ್ ಅಥವಾ ಟ್ರೇಡ್ಮಾರ್ಕ್ ದೂರು ಬಂದ ಕಾರಣಕ್ಕೆ ನಾವು ನಿಮ್ಮ ವಿಷಯವನ್ನು ತೆಗೆದುಹಾಕಿದರೆ, ನಿಮಗೆ ತಿಳಿಸುತ್ತೇವೆ. ಕಾಪಿರೈಟ್ ದೂರಿನಲ್ಲಿನ ತಪ್ಪು ಅಥವಾ ವಿಷಯವನ್ನು ತಪ್ಪಾಗಿ ಗುರುತಿಸಿದ ಕಾರಣಕ್ಕೆ ನಿಮ್ಮ ವಿಷಯವನ್ನು ಅನ್ಯಾಯವಾಗಿ ತೆಗೆದುಹಾಕಲಾಗಿದೆ ಎಂದು ನಿಮಗೆ ಅನಿಸಿದರೆ, ನಮ್ಮಕಾಪಿರೈಟ್ ಪ್ರತಿವಾದ ನೋಟಿಸ್ ಫಾರ್ಮ್ಮೂಲಕ ಅಥವಾ (ಮೇಲಿನ ವಿಳಾಸದಲ್ಲಿರುವ) ಕಾಪಿರೈಟ್ ಅಧಿಕಾರಿಗೆ ಪ್ರತಿವಾದ ನೋಟಿಸ್ ಕಳುಹಿಸಬಹುದು. ಸರಿಯಾದ ಪ್ರತಿವಾದ ನೋಟಿಸ್ ನೀಡಲು ಬೇಕಾದ ಮಾಹಿತಿಗಾಗಿ 17 U.S.C. § 512(g)(3)ನೋಡಿ.
10. ಪಾವತಿಸಿದ ಸೇವೆಗಳು
ಆದರೆ, ಕೆಲವು ಸೇವೆಗಳು, ಫೀಚರ್ಗಳು ಮತ್ತು ಉತ್ಪನ್ನಗಳನ್ನು ಹಣ ಕೊಟ್ಟು ಖರೀದಿಸಬಹುದು. ಇವುಗಳನ್ನು (“ಪಾವತಿಸಿದ ಸೇವೆಗಳು”) ಎಂದು ಕರೆಯಲಾಗುತ್ತದೆ. ಈ ನಿಯಮಗಳ ಜೊತೆಗೆ, ಪಾವತಿಸಿದ ಸೇವೆಗಳಿಗೆReddit Econ ನಿಯಮಗಳುಕೂಡ ಅನ್ವಯಿಸುತ್ತವೆ. ನೀವು ಪಾವತಿಸಿದ ಸೇವೆಗಳನ್ನು ಖರೀದಿಸಿದರೆ ಅಥವಾ ಬಳಸಿದರೆ, Econ ನಿಯಮಗಳಿಗೆಮತ್ತು ಅನ್ವಯಿಸಿದರೆ ಪೂರ್ವವೀಕ್ಷಣೆಗಳ ನಿಯಮಗಳಿಗೆ ಕೂಡ ಒಪ್ಪಿಕೊಂಡಂತಾಗುತ್ತದೆ.
11. ಬೌದ್ಧಿಕ ಆಸ್ತಿ
ಸೇವೆಗಳನ್ನು Reddit ಒಡೆತನದಲ್ಲಿದೆ ಮತ್ತು ನಿರ್ವಹಿಸುತ್ತದೆ. Reddit ಒದಗಿಸಿದ ದೃಶ್ಯ ಇಂಟರ್ಫೇಸ್ಗಳು, ಗ್ರಾಫಿಕ್ಸ್, ವಿನ್ಯಾಸ, ಸಂಕಲನ, ಮಾಹಿತಿ, ಡೇಟಾ, ಕಂಪ್ಯೂಟರ್ ಕೋಡ್, ಉತ್ಪನ್ನಗಳು, ಸೇವೆಗಳು, ಟ್ರೇಡ್ಮಾರ್ಕ್ಗಳು ಮತ್ತು ಸೇವೆಗಳ (“ಮೆಟೀರಿಯಲ್ಸ್”) ಎಲ್ಲಾ ಇತರ ಅಂಶಗಳು ಬೌದ್ಧಿಕ ಆಸ್ತಿ ಮತ್ತು ಇತರ ಕಾನೂನುಗಳಿಂದ ರಕ್ಷಿಸಲ್ಪಟ್ಟಿವೆ. ಸೇವೆಗಳಲ್ಲಿ ಸೇರಿಸಲಾದ ಎಲ್ಲಾ ವಸ್ತುಗಳು Reddit ಅಥವಾ ಅದರ ಮೂರನೇ ವ್ಯಕ್ತಿಯ ಪರವಾನಗಿದಾರರ ಆಸ್ತಿಯಾಗಿದೆ. ಸಾಮಗ್ರಿಗಳನ್ನು ಡೌನ್ಲೋಡ್ ಮಾಡುವ ಮೂಲಕ ಅಥವಾ ಪಾವತಿಸಿದ ಸೇವೆಗಳನ್ನು ಖರೀದಿಸುವ ಮೂಲಕ ನೀವು ಯಾವುದೇ ಮಾಲೀಕತ್ವದ ಹಕ್ಕುಗಳನ್ನು ಪಡೆದುಕೊಳ್ಳುವುದಿಲ್ಲ ಎಂದು ನೀವು ಅಂಗೀಕರಿಸಿ ಒಪ್ಪಿಗೆ ನೀಡುತ್ತೀರಿ. Reddit ನಿಂದ ಸ್ಪಷ್ಟವಾಗಿ ಅಧಿಕೃತಗೊಳಿಸಲ್ಪಟ್ಟ ಮತ್ತು Reddit ನ ಬ್ರ್ಯಾಂಡ್ ಮಾರ್ಗಸೂಚಿಗಳಿಗೆಒಳಪಟ್ಟಿರುವುದನ್ನು ಹೊರತುಪಡಿಸಿ , ನೀವು ಸಾಮಗ್ರಿಗಳನ್ನು ಬಳಸುವಂತಿಲ್ಲ. ಈ ನಿಯಮಗಳಲ್ಲಿ ಸ್ಪಷ್ಟವಾಗಿ ನೀಡದ ಸಾಮಗ್ರಿಗಳಿಗೆ Reddit ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸುತ್ತದೆ.
12. ನಷ್ಟಪರಿಹಾರ
ಕಾನೂನಿನಿಂದ ನಿಷೇಧಿಸಲ್ಪಟ್ಟಿರುವ ಮಟ್ಟಿಗೆ ಹೊರತುಪಡಿಸಿ, ಈ ಕೆಳಗಿನವುಗಳಿಂದ ಉಂಟಾಗುವ, ಅವುಗಳಿಗೆ ಸಂಬಂಧಿಸಿದ ಅಥವಾ ಅವುಗಳಿಗೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ಮೂರನೇ ವ್ಯಕ್ತಿಯ ಹಕ್ಕು ಅಥವಾ ಬೇಡಿಕೆ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಹೊಣೆಗಾರಿಕೆ, ಹಾನಿ, ನಷ್ಟ ಮತ್ತು ವೆಚ್ಚಗಳಿಂದ (ವೆಚ್ಚಗಳು ಮತ್ತು ವಕೀಲರ ಶುಲ್ಕಗಳನ್ನು ಒಳಗೊಂಡಂತೆ) Reddit, ಅದರ ಅಂಗಸಂಸ್ಥೆಗಳು ಹಾಗೂ ಅವುಗಳ ಆಯಾ ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು, ಅಂಗಸಂಸ್ಥೆಗಳು, ಏಜೆಂಟ್ಗಳು, ಗುತ್ತಿಗೆದಾರರು, ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರು ಮತ್ತು ಪರವಾನಗಿದಾರರನ್ನು (ಒಟ್ಟಾಗಿ “Reddit ಸಂಸ್ಥೆಗಳು”) ರಕ್ಷಿಸಲು, ನಷ್ಟಪರಿಹಾರ ನೀಡಲು ಮತ್ತು ಹಾನಿಯಾಗದಂತೆ ಇರಿಸಲು ನೀವು ಒಪ್ಪುತ್ತೀರಿ: (a) ನೀವು ಸೇವೆಗಳನ್ನು ಬಳಸುವುದು; (b) ನೀವು ಈ ನಿಯಮಗಳನ್ನು ಉಲ್ಲಂಘಿಸುವುದು; (c) ನೀವು ಅನ್ವಯವಾಗುವ ಕಾನೂನುಗಳು ಅಥವಾ ನಿಯಮಗಳನ್ನು ಉಲ್ಲಂಘಿಸುವುದು; ಅಥವಾ (d) ನಿಮ್ಮ ವಿಷಯ. ನೀವು ನಮಗೆ ನಷ್ಟಪರಿಹಾರ ನೀಡಬೇಕಾಗಿರುವ ಯಾವುದೇ ವಿಷಯದ ಪ್ರತಿವಾದವನ್ನು ನಿಯಂತ್ರಿಸುವ ಹಕ್ಕನ್ನು ನಾವು ಕಾಯ್ದಿರಿಸಿಕೊಂಡಿದ್ದೇವೆ ಮತ್ತು ಈ ಹಕ್ಕುಗಳ ವಿರುದ್ಧದ ನಮ್ಮ ಪ್ರತಿವಾದದಲ್ಲಿ ಸಹಕರಿಸಲು ನೀವು ಒಪ್ಪುತ್ತೀರಿ.
13. ಹಕ್ಕು ನಿರಾಕರಣೆ ಮತ್ತು ಹೊಣೆಗಾರಿಕೆಯ ಮಿತಿ
ಈ ನಿಯಮಗಳಲ್ಲಿರುವ ಯಾವುದೂ, ಸೇವೆಗಳ ಬಳಕೆದಾರರಾಗಿ ನಿಮಗೆ ಇರಬಹುದಾದ ಶಾಸನಬದ್ಧ ಹಕ್ಕುಗಳಿಗೆ ಧಕ್ಕೆ ಉಂಟುಮಾಡುವುದಿಲ್ಲ. ಕೆಲವು ದೇಶಗಳು, ರಾಜ್ಯಗಳು, ಪ್ರಾಂತ್ಯಗಳು ಅಥವಾ ಇತರ ನ್ಯಾಯವ್ಯಾಪ್ತಿಗಳು, ಈ ವಿಭಾಗದಲ್ಲಿ ತಿಳಿಸಿರುವಂತೆ ಕೆಲವು ಖಾತರಿಗಳನ್ನು ಹೊರತುಪಡಿಸುವುದನ್ನು ಅಥವಾ ಹೊಣೆಗಾರಿಕೆಯನ್ನು ಮಿತಿಗೊಳಿಸುವುದನ್ನು ಅನುಮತಿಸುವುದಿಲ್ಲ; ಆದ್ದರಿಂದ ಕೆಳಗಿನ ನಿಯಮಗಳು ನಿಮಗೆ ಸಂಪೂರ್ಣವಾಗಿ ಅನ್ವಯಿಸದಿರಬಹುದು. ಬದಲಿಗೆ, ಅಂತಹ ನ್ಯಾಯವ್ಯಾಪ್ತಿಗಳಲ್ಲಿ, ಕೆಳಗಿನ ಹೊರತುಪಡಿಕೆಗಳು ಮತ್ತು ಮಿತಿಗಳು ಆ ನ್ಯಾಯವ್ಯಾಪ್ತಿಗಳ ಕಾನೂನುಗಳು ಅನುಮತಿಸುವ ಮಟ್ಟಿಗೆ ಮಾತ್ರ ಅನ್ವಯಿಸುತ್ತವೆ.
ಸೇವೆಗಳನ್ನು “ಇರುವಂತೆಯೇ” ಮತ್ತು “ಲಭ್ಯವಿರುವಂತೆಯೇ” ಒದಗಿಸಲಾಗುತ್ತದೆ ಮತ್ತು ಯಾವುದೇ ರೀತಿಯ ಸ್ಪಷ್ಟ, ಸೂಚ್ಯ, ಕಾನೂನುಬದ್ಧ ಅಥವಾ ಶಾಸನಬದ್ಧ ಪ್ರತಿನಿಧಿಸುವಿಕೆಗಳು, ಖಾತರಿಗಳು ಅಥವಾ ಷರತ್ತುಗಳನ್ನು ನೀಡಲಾಗುವುದಿಲ್ಲ. ಇವುಗಳಲ್ಲಿ ವ್ಯಾಪಾರಯೋಗ್ಯತೆ, ಮಾಲೀಕತ್ವ, ನಿರ್ದಿಷ್ಟ ಉದ್ದೇಶಕ್ಕೆ ಸೂಕ್ತತೆ ಮತ್ತು ಉಲ್ಲಂಘನೆಯಾಗದಿರುವಿಕೆಯ ಸೂಚ್ಯ ಖಾತರಿಗಳು ಸೇರಿವೆ. ಸೇವೆಗಳು ನಿಖರ, ಸಂಪೂರ್ಣ, ವಿಶ್ವಾಸಾರ್ಹ, ಪ್ರಸ್ತುತ ಅಥವಾ ದೋಷರಹಿತವಾಗಿವೆ ಎಂದು Reddit ಘಟಕಗಳು ಖಾತರಿ ನೀಡುವುದಿಲ್ಲ. ಸೇವೆಗಳಲ್ಲಿ ಲಭ್ಯವಿರುವ ಅಥವಾ ಸೇವೆಗಳಿಗೆ ಲಿಂಕ್ ಮಾಡಲಾದ ಯಾವುದೇ ವಿಷಯವನ್ನು ಅಥವಾ ಮಾಡರೇಟರ್ಗಳು ಸೇರಿದಂತೆ ಯಾವುದೇ ಮೂರನೇ ವ್ಯಕ್ತಿ ಅಥವಾ ಬಳಕೆದಾರರ ಕ್ರಮಗಳನ್ನು Reddit ನಿಯಂತ್ರಿಸುವುದಿಲ್ಲ, ಅನುಮೋದಿಸುವುದಿಲ್ಲ ಅಥವಾ ಅವುಗಳಿಗೆ ಜವಾಬ್ದಾರಿಯನ್ನು ವಹಿಸುವುದಿಲ್ಲ. ಸೇವೆಗಳಿಗೆ ನಿಮ್ಮ ಪ್ರವೇಶ ಮತ್ತು ಬಳಕೆಯನ್ನು ಸುರಕ್ಷಿತವಾಗಿಸಲು Reddit ಪ್ರಯತ್ನಿಸಿದರೂ, ನಮ್ಮ ಸೇವೆಗಳು ಅಥವಾ ಸರ್ವರ್ಗಳು ವೈರಸ್ಗಳು ಅಥವಾ ಇತರ ಹಾನಿಕಾರಕ ಘಟಕಗಳಿಂದ ಮುಕ್ತವಾಗಿವೆ ಎಂದು ನಾವು ಪ್ರತಿನಿಧಿಸುವುದಿಲ್ಲ ಅಥವಾ ಖಾತರಿ ನೀಡುವುದಿಲ್ಲ.
ಯಾವುದೇ ಸಂದರ್ಭದಲ್ಲೂ, ಈ ನಿಯಮಗಳು ಅಥವಾ ಸೇವೆಗಳಿಂದ ಉಂಟಾಗುವ ಅಥವಾ ಅವುಗಳಿಗೆ ಸಂಬಂಧಿಸಿದ ಯಾವುದೇ ಪರೋಕ್ಷ, ಪರಿಣಾಮಾನುಸಾರ, ಉದಾಹರಣಾತ್ಮಕ, ಆಕಸ್ಮಿಕ, ವಿಶೇಷ ಅಥವಾ ದಂಡನಾತ್ಮಕ ಹಾನಿಗಳಿಗೆ, ಅಥವಾ ಕಳೆದುಹೋದ ಲಾಭಗಳಿಗೆ Reddit ಘಟಕಗಳು ನಿಮಗೆ ಜವಾಬ್ದಾರರಾಗಿರುವುದಿಲ್ಲ. ಇದರಲ್ಲಿ, ಸೇವೆಗಳಲ್ಲಿ ಲಭ್ಯವಾಗಿರುವ ವಿಷಯವು ಮಾನಹಾನಿಕರ, ಆಕ್ಷೇಪಾರ್ಹ ಅಥವಾ ಕಾನೂನುಬಾಹಿರವಾಗಿದೆ ಎಂದು ಆರೋಪಿಸಲ್ಪಟ್ಟಿರುವುದರಿಂದ ಉಂಟಾಗುವ ಅಥವಾ ಸಂಬಂಧಿಸಿದ ಹಾನಿಗಳೂ ಸೇರಿವೆ. ಸೇವೆಗಳಿಗೆ ಪ್ರವೇಶ ಮತ್ತು ಬಳಕೆ ನಿಮ್ಮ ಸ್ವಂತ ವಿವೇಚನೆ ಮತ್ತು ಅಪಾಯದ ಮೇಲಿದೆ; ನಿಮ್ಮ ಸಾಧನ ಅಥವಾ ಕಂಪ್ಯೂಟರ್ ವ್ಯವಸ್ಥೆಗೆ ಉಂಟಾಗುವ ಯಾವುದೇ ಹಾನಿಗೆ ಅಥವಾ ಪರಿಣಾಮವಾಗಿ ಸಂಭವಿಸುವ ಡೇಟಾ ನಷ್ಟಕ್ಕೆ ನೀವೇ ಸಂಪೂರ್ಣವಾಗಿ ಜವಾಬ್ದಾರರಾಗಿರುತ್ತೀರಿ. ಯಾವುದೇ ಸಂದರ್ಭದಲ್ಲೂ Reddit ಘಟಕಗಳ ಒಟ್ಟು ಹೊಣೆಗಾರಿಕೆಯು ನೂರು ಯು.ಎಸ್. ಡಾಲರ್ಗಳು (US$100) ಅಥವಾ ದಾವೆಗೆ ಕಾರಣವಾದ ಸೇವೆಗಳಿಗಾಗಿ ಹಿಂದಿನ ಆರು ತಿಂಗಳಲ್ಲಿ ನೀವು Reddit ಗೆ ಪಾವತಿಸಿದ ಯಾವುದೇ ಮೊತ್ತ—ಇವುಗಳಲ್ಲಿ ಯಾವುದು ಹೆಚ್ಚೋ ಅದನ್ನು ಮೀರುವುದಿಲ್ಲ. ಈ ವಿಭಾಗದ ಮಿತಿಗಳು ಖಾತರಿ, ಒಪ್ಪಂದ, ಶಾಸನ, ಅಪಕೃತ್ಯ, ನಿರ್ಲಕ್ಷ್ಯ, ಕಟ್ಟುನಿಟ್ಟಿನ ಹೊಣೆಗಾರಿಕೆ ಅಥವಾ ಇನ್ನಾವುದೇ ಆಧಾರಿತ ಹೊಣೆಗಾರಿಕೆಯ ಸಿದ್ಧಾಂತಕ್ಕೆ ಅನ್ವಯಿಸುತ್ತವೆ; Reddit ಘಟಕಗಳಿಗೆ ಇಂತಹ ಯಾವುದೇ ಹಾನಿಯ ಸಾಧ್ಯತೆಯ ಬಗ್ಗೆ ತಿಳಿಸಲಾಗಿದ್ದರೂ ಮತ್ತು ಈ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಪರಿಹಾರವು ತನ್ನ ಮೂಲಭೂತ ಉದ್ದೇಶವನ್ನು ಸಾಧಿಸಲು ವಿಫಲವಾಗಿದೆ ಎಂದು ಕಂಡುಬಂದರೂ ಸಹ ಅವು ಅನ್ವಯಿಸುತ್ತವೆ.
14. ಅನ್ವಯಿಸುವ ಕಾನೂನು ಮತ್ತು ನ್ಯಾಯಾಲಯದ ವ್ಯಾಪ್ತಿ
ನೀವು Reddit ಅನ್ನು ಆನಂದಿಸಬೇಕು ಎಂಬುದು ನಮ್ಮ ಆಶಯ. ಆದ್ದರಿಂದ, ನಿಮಗೆ ಯಾವುದೇ ಸಮಸ್ಯೆ ಅಥವಾ ವಿವಾದವಿದ್ದರೆ, ಅದನ್ನು ನಮ್ಮೊಂದಿಗೆ ಅನೌಪಚಾರಿಕವಾಗಿ ಪ್ರಸ್ತಾಪಿಸಿ ಪರಿಹರಿಸಲು ಪ್ರಯತ್ನಿಸಲು ನೀವು ಒಪ್ಪುತ್ತೀರಿ. ನಿಮ್ಮ ಪ್ರತಿಕ್ರಿಯೆ ಮತ್ತು ಕಳವಳಗಳ ಕುರಿತು ನೀವು ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು.
ಅನ್ವಯವಾಗುವ ಕಾನೂನಿನಿಂದ ಅನುಮತಿಸಲಾದ ಪೂರ್ಣ ಪ್ರಮಾಣದ ಮಟ್ಟಿಗೆ, ಈ ನಿಯಮಗಳು ಅಥವಾ ಸೇವೆಗಳಿಂದ ಉಂಟಾಗುವ ಅಥವಾ ಅವುಗಳಿಗೆ ಸಂಬಂಧಿಸಿದಂತೆ ನೀವು ತರುವ ಯಾವುದೇ ಹಕ್ಕುಗಳು, ಕಾನೂನುಗಳ ಸಂಘರ್ಷಕ್ಕೆ ಸಂಬಂಧಿಸಿದ ನಿಯಮಗಳನ್ನು ಪರಿಗಣಿಸದೆ, ಕ್ಯಾಲಿಫೋರ್ನಿಯಾ ರಾಜ್ಯದ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತವೆ; ಈ ನಿಯಮಗಳು ಅಥವಾ ಸೇವೆಗಳಿಗೆ ಸಂಬಂಧಿಸಿದ ಎಲ್ಲಾ ವಿವಾದಗಳನ್ನು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಫೆಡರಲ್ ಅಥವಾ ರಾಜ್ಯ ನ್ಯಾಯಾಲಯಗಳಲ್ಲಿ ಮಾತ್ರ ತರಬೇಕು ಮತ್ತು ನೀವು ಹಾಗೂ Reddit ಈ ನ್ಯಾಯಾಲಯಗಳ ವೈಯಕ್ತಿಕ ನ್ಯಾಯವ್ಯಾಪ್ತಿಗೆ ಸಮ್ಮತಿಸುತ್ತೀರಿ.
ನೀವು ಯು.ಎಸ್. ನಗರದ, ಕೌಂಟಿಯ ಅಥವಾ ರಾಜ್ಯ ಸರ್ಕಾರದ ಘಟಕವಾಗಿದ್ದರೆ, ಈ ವಿಭಾಗ 14 ನಿಮಗೆ ಅನ್ವಯಿಸುವುದಿಲ್ಲ. ನೀವು ಯು.ಎಸ್. ಫೆಡರಲ್ ಸರ್ಕಾರದ ಘಟಕವಾಗಿದ್ದರೆ, ಈ ನಿಯಮಗಳು ಅಥವಾ ಸೇವೆಗಳಿಂದ ಉಂಟಾಗುವ ಅಥವಾ ಅವುಗಳಿಗೆ ಸಂಬಂಧಿಸಿದ ಯಾವುದೇ ಹಕ್ಕುಗಳು, ಕಾನೂನುಗಳ ಸಂಘರ್ಷಕ್ಕೆ ಸಂಬಂಧಿಸಿದ ನಿಯಮಗಳನ್ನು ಪರಿಗಣಿಸದೆ, ಅಮೆರಿಕ ಸಂಯುಕ್ತ ಸಂಸ್ಥಾನದ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತವೆ. ಅನ್ವಯವಾಗುವ ಫೆಡರಲ್ ಕಾನೂನಿನ ಅನುಪಸ್ಥಿತಿಯಲ್ಲಿ, ಫೆಡರಲ್ ಕಾನೂನಿನಿಂದ ಅನುಮತಿಸಲಾದ ಮಟ್ಟಿಗೆ, ಕ್ಯಾಲಿಫೋರ್ನಿಯಾದ ಕಾನೂನುಗಳು (ಅದರ ಕಾನೂನುಗಳ ಸಂಘರ್ಷಕ್ಕೆ ಸಂಬಂಧಿಸಿದ ನಿಯಮಗಳನ್ನು ಹೊರತುಪಡಿಸಿ) ಅನ್ವಯಿಸುತ್ತವೆ. ಈ ನಿಯಮಗಳು ಅಥವಾ ಸೇವೆಗಳಿಗೆ ಸಂಬಂಧಿಸಿದ ಎಲ್ಲಾ ವಿವಾದಗಳನ್ನು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಫೆಡರಲ್ ಅಥವಾ ರಾಜ್ಯ ನ್ಯಾಯಾಲಯಗಳಲ್ಲಿ ಮಾತ್ರ ತರಬೇಕು.
15. ಈ ನಿಯಮಗಳಲ್ಲಿ ಬದಲಾವಣೆಗಳು
ನಾವು ಕಾಲಕಾಲಕ್ಕೆ ಈ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಬಹುದು. ನಾವು ಈ ನಿಯಮಗಳಲ್ಲಿ ಬದಲಾವಣೆ ಮಾಡಿದರೆ, ಹೊಸ ನಿಯಮಗಳನ್ನು ಪೋಸ್ಟ್ ಮಾಡುತ್ತೇವೆ ಮತ್ತು ಮೇಲಿನ ಜಾರಿಗೆ ಬರುವ ದಿನಾಂಕವನ್ನು ನವೀಕರಿಸುತ್ತೇವೆ. ನಮ್ಮ ಅಭಿಪ್ರಾಯದಲ್ಲಿ ಈ ಬದಲಾವಣೆಗಳು ಮಹತ್ವದ್ದಾಗಿದ್ದರೆ, ನಿಮ್ಮ ಖಾತೆಗೆ ಲಿಂಕ್ ಆಗಿರುವ ಇಮೇಲ್ ವಿಳಾಸಕ್ಕೆ (ನೀವು ಪರಿಶೀಲಿಸಿದ ಇಮೇಲ್ ವಿಳಾಸವನ್ನು ನೀಡಿದ್ದರೆ) ಇಮೇಲ್ ಕಳುಹಿಸುವ ಮೂಲಕ ಅಥವಾ ನಮ್ಮ ಸೇವೆಗಳ ಮೂಲಕ ನಿಮಗೆ ಸೂಚನೆ ನೀಡುವ ಮೂಲಕವೂ ತಿಳಿಸಬಹುದು. ಪರಿಷ್ಕರಿಸಿದ ನಿಯಮಗಳು ಜಾರಿಗೆ ಬಂದ ದಿನದಿಂದ ಅಥವಾ ಅದರ ನಂತರವೂ ನೀವು ನಮ್ಮ ಸೇವೆಗಳನ್ನು ಬಳಸುವುದನ್ನು ಮುಂದುವರಿಸಿದರೆ, ಆ ಪರಿಷ್ಕರಿಸಿದ ನಿಯಮಗಳಿಗೆ ನೀವು ಒಪ್ಪಿಕೊಂಡಂತಾಗುತ್ತದೆ. ಪರಿಷ್ಕರಿಸಿದ ನಿಯಮಗಳನ್ನು ನೀವು ಒಪ್ಪದಿದ್ದರೆ, ಆ ಬದಲಾವಣೆಗಳು ಜಾರಿಗೆ ಬರುವ ಮೊದಲು ನಮ್ಮ ಸೇವೆಗಳನ್ನು ಬಳಸುವುದನ್ನು ನಿಲ್ಲಿಸಬೇಕು.
16. ಹೆಚ್ಚುವರಿ ನಿಯಮಗಳು
Reddit ಹಲವು ರೀತಿಯ ಸೇವೆಗಳನ್ನು ನೀಡುವುದರಿಂದ, ನಿರ್ದಿಷ್ಟ ಪ್ರಾಡಕ್ಟ್ ಅಥವಾ ಸೇವೆಯನ್ನು ಬಳಸುವ ಮೊದಲು ನೀವು ಕೆಲವು ಹೆಚ್ಚುವರಿ ಷರತ್ತುಗಳು, ನೀತಿಗಳು, ಮಾರ್ಗಸೂಚಿಗಳು ಅಥವಾ ನಿಯಮಗಳಿಗೆ ಒಪ್ಪಿಗೆ ನೀಡಬೇಕಾಗಬಹುದು. (ಇವೆಲ್ಲವನ್ನೂ ಒಟ್ಟಾಗಿ “ಹೆಚ್ಚುವರಿ ಷರತ್ತುಗಳು” ಎಂದು ಕರೆಯಲಾಗುತ್ತದೆ). ಎಲ್ಲ ಹೆಚ್ಚುವರಿ ಷರತ್ತುಗಳೂ ಈ ನಿಯಮಗಳ ಭಾಗವಾಗಿರುತ್ತವೆ. ಈ ನಿಯಮಗಳು ಮತ್ತು ಹೆಚ್ಚುವರಿ ಷರತ್ತುಗಳ ನಡುವೆ ಯಾವುದಾದರೂ ವ್ಯತ್ಯಾಸ ಅಥವಾ ಸಂಘರ್ಷವಿದ್ದರೆ, ಸಂಬಂಧಿತ Reddit ಸೇವೆಯನ್ನು ನೀವು ಬಳಸುವಾಗ ಆ ಹೆಚ್ಚುವರಿ ಷರತ್ತುಗಳೇ ಅನ್ವಯಿಸುತ್ತವೆ.
- ನೀವು ಯಾವುದೇ ಪಾವತಿಸಿದ ಸೇವೆಗಳು ಅಥವಾ ಡಿಜಿಟಲ್ ಸರಕುಗಳನ್ನು ಬಳಸಿದರೆ, ನೀವು Reddit Econ ನಿಯಮಗಳಿಗೂ ಒಪ್ಪಿಕೊಳ್ಳಬೇಕು.
- ನೀವು ಯಾವುದೇ ಪೂರ್ವವೀಕ್ಷಣೆಗಳ ಫೀಚರ್ಗಳನ್ನು ಅಥವಾ ಡಿಜಿಟಲ್ ಸರಕುಗಳನ್ನು ಬಳಸಿದರೆ, ನೀವು Reddit ಪೂರ್ವವೀಕ್ಷಣೆಗಳ ನಿಯಮಗಳಿಗೂ ಒಪ್ಪಿಕೊಳ್ಳಬೇಕು.
- ನೀವು Reddit ಸೇವೆಗಳಲ್ಲಿ ಜಾಹೀರಾತು ನೀಡಿದರೆ,Reddit ಜಾಹಿರಾತು ಪ್ಲಾಟ್ಫಾರ್ಮ್ ನಿಯಮಗಳಿಗೂ ಒಪ್ಪಿಗೆ ನೀಡಬೇಕು.
- ನೀವು ನಮ್ಮ ಡೆವಲಪರ್ ಸೇವೆಗಳನ್ನು (API ಸೇರಿದಂತೆ) ಬಳಸಿದರೆ, Reddit ಡೆವಲಪರ್ ನಿಯಮಗಳಿಗೂ ಒಪ್ಪಿಗೆ ನೀಡಬೇಕು.
- ನೀವು ಹೆಚ್ಚುವರಿ ನಿಯಮಗಳಿಗೆ ಒಳಪಟ್ಟಿರುವ ಯಾವುದೇ Reddit ಪ್ರೋಗ್ರಾಂನಲ್ಲಿ ಭಾಗವಹಿಸಿದರೆ (ಉದಾ. ಯಾವುದೇ ಗಳಿಕೆ ಕಾರ್ಯಕ್ರಮಕ್ಕಾಗಿ ಗಳಿಕೆಯ ನಿಯಮಗಳು), ನೀವು ಆ ಹೆಚ್ಚುವರಿ ನಿಯಮಗಳಿಗೆ ಸಹ ಒಪ್ಪಿಕೊಳ್ಳಬೇಕು.
17. ಸೇವೆಯ ಮುಕ್ತಾಯ
ನಿಮ್ಮ ಖಾತೆಯನ್ನು ಅಳಿಸಿ ಮತ್ತು ಎಲ್ಲಾ ಸೇವೆಗಳನ್ನು ಬಳಸುವುದನ್ನು ನಿಲ್ಲಿಸುವ ಮೂಲಕ ನೀವು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಕ್ಕಾಗಿ ಈ ಷರತ್ತುಗಳನ್ನು ಕೊನೆಗೊಳಿಸಬಹುದು. ನಿಮ್ಮ ಖಾತೆಯನ್ನು ಅಳಿಸದೆ ಸೇವೆಗಳನ್ನು ಬಳಸುವುದನ್ನು ನಿಲ್ಲಿಸಿದರೆ, ದೀರ್ಘಕಾಲದ ನಿಷ್ಕ್ರಿಯತೆಯಿಂದಾಗಿ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು.
ಅನ್ವಯವಾಗುವ ಕಾನೂನಿನಿಂದ ಅನುಮತಿಸಲಾದ ಪೂರ್ಣ ಪ್ರಮಾಣದಲ್ಲಿ, ಈ ಷರತ್ತುಗಳನ್ನು ಅಥವಾ ನಮ್ಮ Reddit ನಿಯಮಗಳನ್ನು ಉಲ್ಲಂಘಿಸುವುದು ಸೇರಿದಂತೆ, ಯಾವುದೇ ಕಾರಣಕ್ಕಾಗಲಿ ಅಥವಾ ಕಾರಣವಿಲ್ಲದೆಯೇ, ನಾವು ಯಾವುದೇ ಸಮಯದಲ್ಲಿ ನಿಮ್ಮ ಖಾತೆ, ಮಾಡರೇಟರ್ ಸ್ಥಾನಮಾನ ಅಥವಾ ಸೇವೆಗಳನ್ನು ಪ್ರವೇಶಿಸುವ ಅಥವಾ ಬಳಸುವ ನಿಮ್ಮ ಸಾಮರ್ಥ್ಯವನ್ನು ಅಮಾನತುಗೊಳಿಸಬಹುದು ಅಥವಾ ಕೊನೆಗೊಳಿಸಬಹುದು.
ಈ ಷರತ್ತುಗಳು ಅಥವಾ ನಿಮ್ಮ ಖಾತೆಯ ಯಾವುದೇ ಮುಕ್ತಾಯದ ನಂತರವೂ ಈ ಕೆಳಗಿನ ವಿಭಾಗಗಳು ಜಾರಿಯಲ್ಲಿರುತ್ತವೆ: 5 (ನಿಮ್ಮ ವಿಷಯ), 7 (ನೀವು ಮಾಡಲಾಗದ ಕೆಲಸಗಳು), 12 (ನಷ್ಟಪರಿಹಾರ), 13 (ಹಕ್ಕು ನಿರಾಕರಣೆಗಳು ಮತ್ತು ಹೊಣೆಗಾರಿಕೆಯ ಮಿತಿ), 14 (ಅನ್ವಯವಾಗುವ ಕಾನೂನು ಮತ್ತು ನ್ಯಾಯವ್ಯಾಪ್ತಿ), 17 (ಕೊನೆಗೊಳಿಸುವಿಕೆ), ಮತ್ತು 18 (ಇತರೆ).
18. ಇತರೆ ವಿಷಯಗಳು
ಈ ನಿಯಮಗಳು, ಗೌಪ್ಯತೆ ನೀತಿ ಮತ್ತು ಈ ನಿಯಮಗಳಲ್ಲಿ ಉಲ್ಲೇಖದ ಮೂಲಕ ಸ್ಪಷ್ಟವಾಗಿ ಸೇರಿಸಲಾದ ಇತರೆ ಯಾವುದೇ ಒಪ್ಪಂದಗಳೊಂದಿಗೆ ಸೇರಿ, ಸೇವೆಗಳಿಗೆ ನಿಮ್ಮ ಪ್ರವೇಶ ಮತ್ತು ಬಳಕೆಗೆ ಸಂಬಂಧಿಸಿದಂತೆ ನಿಮ್ಮ ಮತ್ತು ನಮ್ಮ ನಡುವಿನ ಸಂಪೂರ್ಣ ಒಪ್ಪಂದವನ್ನು ರೂಪಿಸುತ್ತವೆ. ಈ ನಿಯಮಗಳ ಯಾವುದೇ ಹಕ್ಕು ಅಥವಾ ವಿಧಿಯನ್ನು ನಾವು ಚಲಾಯಿಸಲು ಅಥವಾ ಜಾರಿಗೊಳಿಸಲು ವಿಫಲವಾದರೂ, ಅದು ಅಂತಹ ಹಕ್ಕು ಅಥವಾ ವಿಧಿಯ ತ್ಯಾಗವೆಂದು ಪರಿಗಣಿಸಲ್ಪಡುವುದಿಲ್ಲ. ಈ ನಿಯಮಗಳ ಯಾವುದೇ ಭಾಗವು ಅಮಾನ್ಯ ಅಥವಾ ಜಾರಿಗೊಳಿಸಲಾಗದಂತಿದೆ ಎಂದು ನಿರ್ಧರಿಸಲ್ಪಟ್ಟರೆ, ಜಾರಿಗೊಳಿಸಲಾಗದ ಭಾಗಕ್ಕೆ ಸಾಧ್ಯವಾದಷ್ಟು ಹೆಚ್ಚಿನ ಮಟ್ಟಿಗೆ ಪರಿಣಾಮ ನೀಡಲಾಗುತ್ತದೆ ಮತ್ತು ಉಳಿದ ಭಾಗಗಳು ಸಂಪೂರ್ಣ ಜಾರಿಯಲ್ಲಿಯೂ ಪರಿಣಾಮದಲ್ಲಿಯೂ ಇರುತ್ತವೆ. ನಮ್ಮ ಸಮ್ಮತಿಯಿಲ್ಲದೆ ನೀವು ಈ ನಿಯಮಗಳ ಅಡಿಯಲ್ಲಿ ನಿಮ್ಮ ಯಾವುದೇ ಹಕ್ಕುಗಳು ಅಥವಾ ಬಾಧ್ಯತೆಗಳನ್ನು ನಿಯೋಜಿಸಲು ಅಥವಾ ವರ್ಗಾಯಿಸಲು ಸಾಧ್ಯವಿಲ್ಲ. ಈ ನಿಯಮಗಳ ಅಡಿಯಲ್ಲಿ ನಮ್ಮ ಯಾವುದೇ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ನಾವು ಮುಕ್ತವಾಗಿ ನಿಯೋಜಿಸಬಹುದು.
ಈ ನಿಯಮಗಳಲ್ಲಿ ಶೀರ್ಷಿಕೆಗಳನ್ನು ಉಲ್ಲೇಖಕ್ಕಾಗಿ ಮಾತ್ರ ಬಳಸಲಾಗಿದೆ ಮತ್ತು ಅವುಗಳನ್ನು ಅರ್ಥೈಸುವಾಗ ಪರಿಗಣಿಸಲಾಗುವುದಿಲ್ಲ. ಈ ನಿಯಮಗಳ ಉದ್ದೇಶಗಳಿಗಾಗಿ: (a) “ಸೇರಿಸು,” “ಸೇರಿಸುತ್ತದೆ,” ಮತ್ತು “ಸೇರಿದಂತೆ” ಎಂಬ ಪದಗಳನ್ನು “ಮಿತಿಯಿಲ್ಲದೆ” ಎಂಬ ಪದಗಳಿಂದ ಅನುಸರಿಸಲಾಗುತ್ತದೆ ಎಂದು ಪರಿಗಣಿಸಲಾಗುತ್ತದೆ; (b) “ಅಂದರೆ,” “ಉದಾಹರಣೆಗೆ,” “ಉದಾ,” ಎಂಬ ಪದಗಳು ಮತ್ತು ಆ ಪದಗಳ ಯಾವುದೇ ಉತ್ಪನ್ನಗಳು ಉದಾಹರಣೆಯ ಮೂಲಕ ಅರ್ಥೈಸಲ್ಪಡುತ್ತವೆ ಮತ್ತು ಈ ಪದಗಳನ್ನು ಅನುಸರಿಸುವ ವಸ್ತುಗಳನ್ನು ಸಮಗ್ರ ಪಟ್ಟಿ ಎಂದು ಪರಿಗಣಿಸಲಾಗುವುದಿಲ್ಲ; ಮತ್ತು (c) “ಅಥವಾ” ಎಂಬ ಪದವನ್ನು “ಮತ್ತು/ಅಥವಾ” ಎಂಬ ಅಂತರ್ಗತ ಅರ್ಥದಲ್ಲಿ ಬಳಸಲಾಗುತ್ತದೆ ಮತ್ತು “ಅಥವಾ,” “ಯಾವುದೇ,” ಮತ್ತು “ಎರಡೂ” ಎಂಬ ಪದಗಳು ಪ್ರತ್ಯೇಕವಾಗಿಲ್ಲ. ಪಕ್ಷವು ಭಾಷೆಯನ್ನು ರಚಿಸಿದೆ ಎಂಬ ಹಕ್ಕಿನ ಆಧಾರದ ಮೇಲೆ ಯಾವುದೇ ಪಕ್ಷದ ವಿರುದ್ಧ ಯಾವುದೇ ಅಸ್ಪಷ್ಟತೆಯನ್ನು ಅರ್ಥೈಸಲಾಗುವುದಿಲ್ಲ.ಈ ನಿಯಮಗಳು ನಿಮ್ಮ ಮತ್ತು Reddit, Inc ನಡುವಿನ ಕಾನೂನುಬದ್ಧ ಒಪ್ಪಂದವಾಗಿದೆ. ಈ ನಿಯಮಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
Reddit, ಇಂಕ್.
303 2ನೇ ಬೀದಿ, ಸೂಟ್ 500S
ಸ್ಯಾನ್ ಫ್ರಾನ್ಸಿಸ್ಕೊ, CA 94107
ಅಮೇರಿಕ
ನೀವು ಯುರೋಪಿಯನ್ ಆರ್ಥಿಕ ವಲಯ (EEA), ಯುನೈಟೆಡ್ ಕಿಂಗ್ಡಮ್ ಅಥವಾ ಸ್ವಿಟ್ಜರ್ಲ್ಯಾಂಡ್ನಲ್ಲಿ ವಾಸಿಸುತ್ತಿದ್ದರೆ, ನಿಮಗೆ ಅನ್ವಯಿಸುವ Reddit ಬಳಕೆದಾರರ ಒಪ್ಪಂದ
ನಮಸ್ಕಾರ, Reddit ಬಳಕೆದಾರರೇ ಮತ್ತು ಇಂಟರ್ನೆಟ್ನ ಜನರೇ! ಈ Reddit ನ ಬಳಕೆದಾರರ ಒಪ್ಪಂದ (“ನಿಯಮಗಳು”) ವೆಬ್ಸೈಟ್ಗಳು, ಮೊಬೈಲ್ ಅಪ್ಲಿಕೇಶನ್ಗಳು, ವಿಜೆಟ್ಗಳು, API ಗಳು, ಇಮೇಲ್ಗಳು ಮತ್ತು ಇತರ ಆನ್ಲೈನ್ ಉತ್ಪನ್ನಗಳು ಮತ್ತು ಸೇವೆಗಳಿಗೆ (ಒಟ್ಟಾರೆಯಾಗಿ, “ಸೇವೆಗಳು”) ನಿಮ್ಮ ಪ್ರವೇಶ ಮತ್ತು ಬಳಕೆಗೆ ಅನ್ವಯಿಸುತ್ತದೆ. ನೀವು ಯುಕೆಯಲ್ಲಿ ವಾಸಿಸುತ್ತಿದ್ದರೆ, ನೀವು Reddit, Inc., 548 ಮಾರ್ಕೆಟ್ ಸ್ಟ್ರೀಟ್, #16093, ಸ್ಯಾನ್ ಫ್ರಾನ್ಸಿಸ್ಕೋ, CA 94104 USA ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೀರಿ. ನೀವು EEA ಅಥವಾ ಸ್ವಿಟ್ಜರ್ಲ್ಯಾಂಡ್ನಲ್ಲಿ ವಾಸಿಸುತ್ತಿದ್ದರೆ, ನೀವು Reddit ನೆದರ್ಲ್ಯಾಂಡ್ಸ್ BV, ಲೂಯಿರ್ಸ್ಗ್ರಾಚ್ಟ್ 43, 1016 VR ಆಮ್ಸ್ಟರ್ಡ್ಯಾಮ್, ನೆದರ್ಲ್ಯಾಂಡ್ಸ್ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೀರಿ. "Reddit", "ನಾವು", "ನಮಗೆ", ಅಥವಾ "ನಮ್ಮ" ಗೆ ಸಂಬಂಧಿಸಿದ ಎಲ್ಲಾ ಉಲ್ಲೇಖಗಳು ನಿಮ್ಮ ನಿವಾಸದ ಆಧಾರದ ಮೇಲೆ ಅನ್ವಯವಾಗುವ ಘಟಕವನ್ನು ಉಲ್ಲೇಖಿಸುತ್ತವೆ.
Reddit ಅನ್ನೋದು ಮೋಜು ಮಸ್ತಿ ಮತ್ತು ಮನರಂಜನೆಗಾಗಿ ಇರೋ ಜಾಗ ಅಂತ ನೆನಪಿಟ್ಟುಕೊಳ್ಳಿ. ಆದ್ರೆ, ಇಲ್ಲೂ ನಾವು ಕೆಲವು ಮೂಲಭೂತ ನಿಯಮಗಳನ್ನು ಪಾಲಿಸಬೇಕು. Reddit ನ ಸೇವೆಗಳನ್ನು ಬಳಸಲು, ನೀವು ಈ ನಿಯಮಗಳನ್ನು ಒಪ್ಪಿಕೊಂಡಿರಬೇಕು. ಈ ನಿಯಮಗಳು: (a) ನೀವು ಖಾತೆಯನ್ನು ರಚಿಸುವಾಗ ನಿಮಗೆ ತೋರಿಸಲಾಗುತ್ತವೆ.(b) ನೀವು Reddit ನ ಸೇವೆಗಳನ್ನು ಬಳಸುವಾಗ ಎಲ್ಲ ಸಮಯದಲ್ಲೂ ನೋಡಲು ಲಭ್ಯವಿರುತ್ತವೆ. ನೀವು ಈ ನಿಯಮಗಳನ್ನು ಒಪ್ಪಿಕೊಳ್ಳದಿದ್ದರೆ, Reddit ನ ನಮ್ಮ ಸೇವೆಗಳನ್ನು ಬಳಸಲು ಅಥವಾ ಪ್ರವೇಶಿಸಲು ನಿಮಗೆ ಅವಕಾಶವಿರುವುದಿಲ್ಲ.
1. ನಮ್ಮ ಸೇವೆಗಳನ್ನು ಬಳಸುವ ನಿಮ್ಮ ಹಕ್ಕು
13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು Reddit ನ ಸೇವೆಗಳನ್ನು ಬಳಸಲು ಅಥವಾ ಪ್ರವೇಶಿಸಲು ಅನುಮತಿ ಇಲ್ಲ. ನಮ್ಮ ಕೆಲವು ಸೇವೆಗಳನ್ನು ಬಳಸಲು ಇನ್ನೂ ಹೆಚ್ಚಿನ ವಯಸ್ಸಾಗಿರಬೇಕು. ಉದಾಹರಣೆಗೆ, Reddit ನಲ್ಲಿರುವ ವಯಸ್ಕರಿಗೆ ಮಾತ್ರ ವಯಸ್ಕರ ವಿಷಯಗಳನ್ನು ವೀಕ್ಷಿಸಲು ನಿಮಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ನೀವು ನಮ್ಮ ಸೇವೆಗಳನ್ನು ಬಳಸುವಾಗ, ದಯವಿಟ್ಟು ಎಲ್ಲಾ ಸೂಚನೆಗಳನ್ನು ಮತ್ತು ಹೆಚ್ಚುವರಿ ನಿಯಮಗಳನ್ನು ಎಚ್ಚರಿಕೆಯಿಂದ ಓದಿ.
Reddit ನ ಸೇವೆಗಳನ್ನು ಬಳಸುವ ಮೂಲಕ, ನೀವು ಈ ಕೆಳಗಿನ ವಿಷಯಗಳನ್ನು ದೃಢಪಡಿಸುತ್ತೀರಿ:
- ನೀವು ಸೇವೆಗಳನ್ನು ಪ್ರವೇಶಿಸಲು ಮತ್ತು ಬಳಸಲು ಕನಿಷ್ಠ 13 ವರ್ಷ ವಯಸ್ಸಿನವರಾಗಿರಬೇಕು ಹಾಗೂ ನೀವು ವಾಸಿಸುವ ದೇಶದ ಕಾನೂನುಗಳ ಪ್ರಕಾರ ಅಗತ್ಯವಿರುವ ಕನಿಷ್ಠ ವಯಸ್ಸಿಗಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು;
- ನೀವು Reddit ಜೊತೆ ಕಾನೂನುಬದ್ಧವಾಗಿ ಬದ್ಧವಾಗಿರುವ ಒಪ್ಪಂದ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು ಅಥವಾ, ನಿಮಗೆ 13 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದು, ನಿಮ್ಮ ಪ್ರದೇಶದ ಕಾನೂನಿನ ಪ್ರಕಾರ ವಯಸ್ಕರಾಗುವ ವಯಸ್ಸಿಗಿಂತ ಕಡಿಮೆ ವಯಸ್ಸಾಗಿದ್ದರೆ, ನಿಮ್ಮ ಕಾನೂನುಬದ್ಧ ಪಾಲಕರು ಈ ನಿಯಮಗಳನ್ನು ಪರಿಶೀಲಿಸಿ, ಅವುಗಳಿಗೆ ಒಪ್ಪಿಗೆ ನೀಡಿರಬೇಕು;
- ಅನ್ವಯವಾಗುವ ಯಾವುದೇ ಕಾನೂನಿನ ಪ್ರಕಾರ, ನೀವು ಈ ಸೇವೆಗಳನ್ನು ಬಳಸುವುದಕ್ಕೆ ಯಾವುದೇ ನಿಷೇಧವಿರಬಾರದು; ಮತ್ತು
- ನಿಮ್ಮನ್ನು ಈ ಸೇವೆಗಳನ್ನು ಬಳಸುವುದರಿಂದ ಶಾಶ್ವತವಾಗಿ ಅಮಾನತುಗೊಳಿಸಿರಬಾರದು ಅಥವಾ ಸೇವೆಗಳಿಂದ ಶಾಶ್ವತವಾಗಿ ತೆಗೆದುಹಾಕಿರಬಾರದು.
ನೀವು ಒಂದು ವ್ಯವಹಾರ ಸಂಸ್ಥೆ ಅಥವಾ ಸರ್ಕಾರಿ ಸಂಸ್ಥೆ ಸೇರಿದಂತೆ ಬೇರೆ ಯಾವುದೇ ಕಾನೂನುಬದ್ಧ ಸಂಸ್ಥೆಯ ಪರವಾಗಿ ಈ ನಿಯಮಗಳಿಗೆ ಒಪ್ಪಿಗೆ ನೀಡುತ್ತಿದ್ದರೆ, ಆ ಸಂಸ್ಥೆಯು ಈ ನಿಯಮಗಳಿಗೆ ಬದ್ಧವಾಗಿರುವಂತೆ ಒಪ್ಪಂದ ಮಾಡಿಕೊಳ್ಳಲು ನಿಮಗೆ ಸಂಪೂರ್ಣ ಕಾನೂನುಬದ್ಧ ಅಧಿಕಾರವಿದೆ ಎಂದು ನೀವು ದೃಢಪಡಿಸುತ್ತೀರಿ.
2. ಗೌಪ್ಯತೆ
Reddit ನ ಗೌಪ್ಯತಾ ನೀತಿಯಲ್ಲಿನೀವು ನಮ್ಮ ಸೇವೆಗಳನ್ನು ಪ್ರವೇಶಿಸುವಾಗ ಅಥವಾ ಬಳಸುವಾಗ ನಿಮ್ಮ ಬಗ್ಗೆ ಯಾವ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ, ಅದನ್ನು ಏಕೆ ಸಂಗ್ರಹಿಸುತ್ತೇವೆ, ಹೇಗೆ ಬಳಸುತ್ತೇವೆ ಮತ್ತು ಯಾರೊಂದಿಗೆ ಹಂಚಿಕೊಳ್ಳುತ್ತೇವೆ ಎಂಬುದನ್ನು ವಿವರಿಸಲಾಗಿದೆ. ನೀವು ನಮ್ಮ ಸೇವೆಗಳನ್ನು ಬಳಸುವ ಮೂಲಕ,ಗೌಪ್ಯತಾ ನೀತಿಯಲ್ಲಿತಿಳಿಸಿರುವಂತೆ ನಿಮ್ಮ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಬಳಸಲು ನೀವು ಒಪ್ಪಿಗೆ ನೀಡುತ್ತೀರಿ ಎಂಬುದನ್ನು ಅರ್ಥಮಾಡಿಕೊಂಡಿರುತ್ತೀರಿ.
3. ನೀವು ನಮ್ಮ ಸೇವೆಗಳನ್ನು ಬಳಸುವ ವಿಧಾನ
ನೀವು ಈ ನಿಯಮಗಳನ್ನು ಸಂಪೂರ್ಣವಾಗಿ ಮತ್ತು ನಿರಂತರವಾಗಿ ಪಾಲಿಸುವ ಷರತ್ತಿನ ಮೇಲೆ, Reddit ನಿಮಗೆ ಕೆಳಗಿನ ಕೆಲಸಗಳನ್ನು ಮಾಡಲು ವೈಯಕ್ತಿಕ, ಇತರರಿಗೆ ವರ್ಗಾಯಿಸಲಾಗದ, ಪ್ರತ್ಯೇಕ ಹಕ್ಕಲ್ಲದ, ಹಿಂಪಡೆಯಬಹುದಾದ ಮತ್ತು ಸೀಮಿತ ಅನುಮತಿಯನ್ನು ನೀಡುತ್ತದೆ: (a) ನಿಮ್ಮ ಸ್ವಂತ ಅಥವಾ ನಿಮ್ಮ ನಿಯಂತ್ರಣದಲ್ಲಿರುವ ಮೊಬೈಲ್ ಸಾಧನದಲ್ಲಿ, ಅಧಿಕೃತ ಅಪ್ಲಿಕೇಶನ್ ಮಳಿಗೆಯಿಂದ ಪಡೆದ Reddit ನ ಮೊಬೈಲ್ ಅಪ್ಲಿಕೇಶನ್ನ ಪ್ರತಿಯನ್ನು ಸ್ಥಾಪಿಸಿ ಬಳಸಬಹುದು.(b) Reddit ನ ಸೇವೆಗಳನ್ನು ಪ್ರವೇಶಿಸಿ ಬಳಸಬಹುದು.ಈ ನಿಯಮಗಳಲ್ಲಿ ನಿಮಗೆ ಸ್ಪಷ್ಟವಾಗಿ ನೀಡಿರುವ ಹಕ್ಕುಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಹಕ್ಕುಗಳನ್ನು Reddit ತನ್ನಲ್ಲಿಯೇ ಕಾಯ್ದಿರಿಸುತ್ತದೆ.
ಅನ್ವಯವಾಗುವ ಕಾನೂನಿನ ಪ್ರಕಾರ ನಿಷೇಧಿಸಲು ಅನುಮತಿಯಿಲ್ಲದ ಸಂದರ್ಭಗಳನ್ನು ಹೊರತುಪಡಿಸಿ ಮತ್ತು ಅಂತಹ ಸಂದರ್ಭಗಳಲ್ಲಿ ಮಾತ್ರ, ನಮ್ಮ ಲಿಖಿತ ಒಪ್ಪಿಗೆ ಇಲ್ಲದೆ ನೀವು ಕೆಳಗಿನ ಕೆಲಸಗಳನ್ನು ಮಾಡುವಂತಿಲ್ಲ:
- Reddit ನ ಸೇವೆಗಳು ಅಥವಾ ವಿಷಯಗಳಿಗೆ ಸಂಬಂಧಿಸಿದ ಬಳಕೆಯ ಅನುಮತಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವುದು, ಮಾರಾಟ ಮಾಡುವುದು, ವರ್ಗಾಯಿಸುವುದು, ಬೇರೆಯವರಿಗೆ ಹಸ್ತಾಂತರಿಸುವುದು, ಹಂಚಿಕೆ ಮಾಡುವುದು, ಹೋಸ್ಟ್ ಮಾಡುವುದು ಅಥವಾ ಬೇರೆ ಯಾವುದೇ ರೀತಿಯಲ್ಲಿ ವಾಣಿಜ್ಯ ಲಾಭ ಪಡೆಯುವುದು;
- ಸೇವೆಗಳು ಅಥವಾ ವಿಷಯಗಳ ಯಾವುದೇ ಭಾಗವನ್ನು ಮಾರ್ಪಡಿಸುವುದು, ಅವುಗಳನ್ನು ಆಧರಿಸಿ ಹೊಸ ಕೃತಿಗಳನ್ನು ರಚಿಸುವುದು, ಭಾಗಗಳಾಗಿ ಬೇರ್ಪಡಿಸುವುದು, ಮೂಲ ಸಂಕೇತವನ್ನು ಓದಲು ಸಾಧ್ಯವಾಗುವಂತೆ ಪರಿವರ್ತಿಸುವುದು ಅಥವಾ ಅವುಗಳ ಒಳರಚನೆ ಮತ್ತು ಕಾರ್ಯವಿಧಾನವನ್ನು ಪತ್ತೆಹಚ್ಚಲು ಪ್ರಯತ್ನಿಸುವುದು; ಅಥವಾ
- ಕೆಳಗೆ ವಿವರಿಸಿರುವ ಹೆಚ್ಚುವರಿ ನಿಯಮಗಳು ಅನುಮತಿಸುವ ಸಂದರ್ಭಗಳನ್ನು ಹೊರತುಪಡಿಸಿ, Reddit ನ ಸೇವೆಗಳು ಅಥವಾ ವಿಷಯಗಳನ್ನು ಬಳಸಿ ಅದೇ ರೀತಿಯ ಅಥವಾ ಸ್ಪರ್ಧಾತ್ಮಕ ಜಾಲತಾಣ, ಉತ್ಪನ್ನ ಅಥವಾ ಸೇವೆಯನ್ನು ನಿರ್ಮಿಸುವ ಉದ್ದೇಶದಿಂದ ಅವುಗಳನ್ನು ಪ್ರವೇಶಿಸುವುದು ಅಥವಾ ಬಳಸುವುದು.
ನಾವು ನಮ್ಮ ಸೇವೆಗಳನ್ನು ಯಾವಾಗಲೂ ಉತ್ತಮಗೊಳಿಸುತ್ತಿರುತ್ತೇವೆ. ಅಂದರೆ, ಹೊಸ ಫೀಚರ್ಗಳು, ಉತ್ಪನ್ನಗಳು ಅಥವಾ ಸೌಲಭ್ಯಗಳನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು. ಸಾಧ್ಯವಾದಷ್ಟು ಮುಂಚಿತವಾಗಿ ನಿಮಗೆ ತಿಳಿಸಲು ಪ್ರಯತ್ನಿಸುತ್ತೇವೆ, ಆದರೆ ಯಾವಾಗಲೂ ಅದು ಸಾಧ್ಯವಾಗುವುದಿಲ್ಲ. ಯಾವುದೇ ಸಮಯದಲ್ಲಿ, ನಿಮಗೆ ಮುಂಚಿತವಾಗಿ ತಿಳಿಸಿಯೂ ಅಥವಾ ತಿಳಿಸದೆಯೂ, ನಮ್ಮ ಸೇವೆಗಳನ್ನು (ಸಂಪೂರ್ಣವಾಗಿ ಅಥವಾ ಭಾಗಶಃ) ಬದಲಾಯಿಸುವ, ಅಮಾನತುಗೊಳಿಸುವ ಅಥವಾ ಸಂಪೂರ್ಣವಾಗಿ ನಿಲ್ಲಿಸುವ ಹಕ್ಕು ನಮಗಿದೆ. ಮುಂದೆ ಸೇವೆಗಳಿಗೆ ಸೇರಿಸುವ ಯಾವುದೇ ಹೊಸ ಬಿಡುಗಡೆ, ಅಪ್ಡೇಟ್ ಅಥವಾ ಹೆಚ್ಚುವರಿ ಸೌಲಭ್ಯಗಳಿಗೂ ಈ ನಿಯಮಗಳೇ ಅನ್ವಯಿಸುತ್ತವೆ. ಈ ನಿಯಮಗಳನ್ನು ಕಾಲಕಾಲಕ್ಕೆ ನವೀಕರಿಸಬಹುದು. ನಮ್ಮ ಸೇವೆಗಳಲ್ಲಿ ಅಥವಾ ಅವುಗಳ ಯಾವುದೇ ಭಾಗದಲ್ಲಿ ಮಾಡುವ ಬದಲಾವಣೆ, ಸ್ಥಗಿತ ಅಥವಾ ಸೇವೆಯನ್ನು ನಿಲ್ಲಿಸುವುದರಿಂದ ನಿಮಗೆ ಅಥವಾ ಇತರರಿಗೆ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ ಎಂಬುದಕ್ಕೆ ನೀವು ಒಪ್ಪುತ್ತೀರಿ.
ನಿಮ್ಮ Reddit ಅನುಭವವನ್ನು ವೈಯಕ್ತಿಕಗೊಳಿಸಲು, ನೀವು Reddit ನಲ್ಲಿ ಮಾಡುವ ಚಟುವಟಿಕೆಗಳು, ನೀವು ಸಬ್ಸ್ಕ್ರೈಬ್ ಮಾಡಿರುವ ಸಮುದಾಯಗಳು ಮತ್ತು ನಿಮ್ಮ ಸೆಟ್ಟಿಂಗ್ಗಳಲ್ಲಿ ಆಯ್ಕೆ ಮಾಡಿಕೊಂಡಿರುವ ಆದ್ಯತೆಗಳು ಸೇರಿದಂತೆ ಹಲವು ವಿಷಯಗಳನ್ನು ನಾವು ಪರಿಗಣಿಸುತ್ತೇವೆ. ಇವುಗಳ ಆಧಾರದ ಮೇಲೆ, ನಿಮಗೆ ಹೆಚ್ಚು ಸೂಕ್ತವಾದ ವಿಷಯಗಳನ್ನು Reddit ನಲ್ಲಿ ಶಿಫಾರಸು ಮಾಡಬಹುದು. ನಿಮಗೆ ಯಾವ ರೀತಿಯ ವಿಷಯಗಳನ್ನು ಶಿಫಾರಸು ಮಾಡಲಾಗುತ್ತದೆ ಮತ್ತು ಈ ವೈಯಕ್ತಿಕಗೊಳಿಸುವ ಆಯ್ಕೆಗಳಲ್ಲಿ ಕೆಲವನ್ನು ನೀವು ಹೇಗೆ ನಿಯಂತ್ರಿಸಬಹುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ನಮ್ಮ ಸಹಾಯ ಕೇಂದ್ರವನ್ನು ನೋಡಿ.
4. ನಿಮ್ಮ Reddit ಖಾತೆ ಮತ್ತು ಖಾತೆಯ ಸುರಕ್ಷತೆ
ನಮ್ಮ ಸೇವೆಗಳ ಕೆಲವು ಫೀಚರ್ಗಳನ್ನು ಬಳಸಲು, ನೀವು Reddit ಖಾತೆಯನ್ನುರಚಿಸಬೇಕಾಗಬಹುದು. ಹಾಗೆ ಮಾಡುವಾಗ, ನಿಮ್ಮ ಬಳಕೆದಾರರ ಹೆಸರು, ಪಾಸ್ವರ್ಡ್ ಮತ್ತು ನಿಮ್ಮ ಬಗ್ಗೆ ಕೆಲವು ಇತರ ಮಾಹಿತಿಗಳನ್ನು ನಮಗೆ ನೀಡಬೇಕಾಗುತ್ತದೆ. ಈ ಮಾಹಿತಿಯ ವಿವರಗಳನ್ನು ನಮ್ಮ ಗೌಪ್ಯತಾ ನೀತಿಯಲ್ಲಿ ತಿಳಿಸಲಾಗಿದೆ.
ನಿಮ್ಮ ಖಾತೆಗೆ ಸಂಬಂಧಿಸಿದ ಮಾಹಿತಿಗೂ, ನಿಮ್ಮ ಖಾತೆಯ ಮೂಲಕ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ನೀವೇ ಸಂಪೂರ್ಣ ಜವಾಬ್ದಾರರಾಗಿರುತ್ತೀರಿ. ನಿಮ್ಮ ಖಾತೆಯ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಅನುಮತಿಯಿಲ್ಲದೆ ಬೇರೆಯವರು ನಿಮ್ಮ ಖಾತೆಯನ್ನು ಬಳಸಿದ್ದಾರೆ ಎಂದು ತಿಳಿದರೆ ಅಥವಾ ಅನುಮಾನ ಬಂದರೆ, ತಕ್ಷಣವೇReddit ಗೆ ತಿಳಿಸಬೇಕು. ನಿಮ್ಮ ಖಾತೆಗೆ ಮಾತ್ರ ಬಳಸುವ, ಊಹಿಸಲು ಕಷ್ಟವಾದ ಬಲವಾದ ಪಾಸ್ವರ್ಡ್ ಅನ್ನು ಇಟ್ಟುಕೊಳ್ಳುವಂತೆ ನಾವು ಶಿಫಾರಸು ಮಾಡುತ್ತೇವೆ. ಜೊತೆಗೆಎರಡು ಹಂತಗಳ ದೃಢೀಕರಣವನ್ನೂಸಕ್ರಿಯಗೊಳಿಸಿ. ನಿಮ್ಮ ಖಾತೆಗೆ ದೂರವಾಣಿ ಸಂಖ್ಯೆಯನ್ನು ಸೇರಿಸಿ, ನಂತರ ಆ ಸಂಖ್ಯೆಯನ್ನು ಬದಲಾಯಿಸಿದರೆ ಅಥವಾ ಸ್ಥಗಿತಗೊಳಿಸಿದರೆ, ನಿಮ್ಮ ಖಾತೆಯಲ್ಲಿರುವ ಮಾಹಿತಿಯನ್ನೂ ನವೀಕರಿಸಲು ಮರೆಯಬೇಡಿ.
Reddit ನಿಂದ ಮುಂಚಿತವಾಗಿ ಲಿಖಿತ ಅನುಮತಿ ಪಡೆಯದೆ, ನಿಮ್ಮ ಖಾತೆಯನ್ನು ಬೇರೆಯವರಿಗೆ ಬಳಸಲು ಅನುಮತಿ ನೀಡುವಂತಿಲ್ಲ, ಮಾರಾಟ ಮಾಡುವಂತಿಲ್ಲ ಅಥವಾ ವರ್ಗಾಯಿಸುವಂತಿಲ್ಲ.
5. ನೀವು ಹಂಚಿಕೊಳ್ಳುವ ವಿಷಯಗಳು
ನಮ್ಮ ಸೇವೆಗಳಲ್ಲಿ ಮಾಹಿತಿ, ಪಠ್ಯ, ಲಿಂಕ್ಗಳು, ಗ್ರಾಫಿಕ್ಸ್, ಫೋಟೋಗಳು, ವೀಡಿಯೊಗಳು, ಆಡಿಯೊ, ಲೈವ್ ಸ್ಟ್ರೀಮ್ಗಳು, ಸಾಫ್ಟ್ವೇರ್, ಟೂಲ್ಗಳು ಅಥವಾ ಇತರ ವಿಷಯಗಳು (“ವಿಷಯಗಳು”) ಇರಬಹುದು. ಇವುಗಳಲ್ಲಿ ನೀವು ಅಥವಾ ನಿಮ್ಮ ಖಾತೆಯ ಮೂಲಕ Reddit ನಲ್ಲಿ ರಚಿಸುವ ಅಥವಾ ಹಂಚಿಕೊಳ್ಳುವ ವಿಷಯಗಳೂ (“ನಿಮ್ಮ ವಿಷಯಗಳು”) ಸೇರಿರುತ್ತವೆ. ನಿಮ್ಮ ವಿಷಯಗಳ ಸಂಪೂರ್ಣತೆ, ಸತ್ಯಾಸತ್ಯತೆ, ನಿಖರತೆ ಅಥವಾ ವಿಶ್ವಾಸಾರ್ಹತೆಗೆ ನಾವು ಜವಾಬ್ದಾರರಲ್ಲ. ಜೊತೆಗೆ, ನಿಮ್ಮ ವಿಷಯಗಳನ್ನು ನಾವು ಸ್ಪಷ್ಟವಾಗಿ ಅಥವಾ ಪರೋಕ್ಷವಾಗಿ ಅನುಮೋದಿಸುತ್ತೇವೆ, ಬೆಂಬಲಿಸುತ್ತೇವೆ ಅಥವಾ ಅವುಗಳ ಬಗ್ಗೆ ಖಾತರಿ ನೀಡುತ್ತೇವೆ ಎಂದರ್ಥವಲ್ಲ.
ನೀವು ನಿಮ್ಮ ವಿಷಯಗಳನ್ನು Reddit ನಲ್ಲಿ ಹಂಚಿಕೊಂಡಾಗ, ಆ ವಿಷಯಗಳಿಗೆ ಸಂಬಂಧಿಸಿದಂತೆ ಈ ನಿಯಮಗಳಲ್ಲಿ ತಿಳಿಸಿರುವ ಹಕ್ಕುಗಳನ್ನು ನಮಗೆ ನೀಡಲು ಅಗತ್ಯವಿರುವ ಎಲ್ಲಾ ಹಕ್ಕುಗಳು ಮತ್ತು ಅಧಿಕಾರಗಳು ನಿಮ್ಮಲ್ಲಿವೆ ಎಂದು ಖಚಿತಪಡಿಸುತ್ತೀರಿ. ನಿಮ್ಮ ವಿಷಯಗಳಿಗೆ ನೀವೇ ಜವಾಬ್ದಾರರಾಗಿರುವುದರಿಂದ, ಅಗತ್ಯವಾದ ಹಕ್ಕುಗಳಿಲ್ಲದೆ ವಿಷಯಗಳನ್ನು ಪೋಸ್ಟ್ ಮಾಡಿದರೆ ಅಥವಾ ಹಂಚಿಕೊಂಡರೆ, ಅದರಿಂದ ನಿಮಗೆ ಕಾನೂನುಬದ್ಧ ಹೊಣೆಗಾರಿಕೆ ಉಂಟಾಗಬಹುದು.
ನಿಮ್ಮ ವಿಷಯಗಳ ಮೇಲಿನ ಮಾಲೀಕತ್ವದ ಹಕ್ಕುಗಳು ನಿಮ್ಮಲ್ಲೇ ಉಳಿಯುತ್ತವೆ. ಆದರೆ, ಆ ವಿಷಯಗಳನ್ನು ಬಳಸಲು ನೀವು Reddit ಗೆ ಕೆಳಗಿನ ಹಕ್ಕುಗಳನ್ನು ನೀಡುತ್ತೀರಿ:
ನೀವು Reddit ನಲ್ಲಿ ವಿಷಯಗಳನ್ನು ರಚಿಸಿದಾಗ ಅಥವಾ ಹಂಚಿಕೊಂಡಾಗ, ಆ ವಿಷಯಗಳನ್ನು ಜಗತ್ತಿನಾದ್ಯಂತ ಬಳಸಲು, ನಕಲಿಸಲು, ಬದಲಾಯಿಸಲು, ಹೊಂದಾಣಿಕೆ ಮಾಡಲು, ಅವುಗಳ ಆಧಾರದ ಮೇಲೆ ಹೊಸ ವಿಷಯಗಳನ್ನು ರಚಿಸಲು, ಹಂಚಲು, ಸಂಗ್ರಹಿಸಲು, ಪ್ರದರ್ಶಿಸಲು ಮತ್ತು ಪ್ರಸಾರ ಮಾಡಲು Reddit ಗೆ ಉಚಿತವಾಗಿ, ಶಾಶ್ವತವಾಗಿ, ಹಿಂಪಡೆಯಲಾಗದಂತೆ, ಪ್ರತ್ಯೇಕವಲ್ಲದಂತೆ, ಇತರರಿಗೆ ವರ್ಗಾಯಿಸಬಹುದಾದಂತೆ ಹಾಗೂ ಉಪ-ಪರವಾನಗಿ ನೀಡಬಹುದಾದಂತೆ ಅನುಮತಿ ನೀಡುತ್ತೀರಿ. ನಿಮ್ಮ ವಿಷಯಗಳಿಗೆ ಸಂಬಂಧಿಸಿದಂತೆ ನೀವು ನೀಡಿರುವ ಹೆಸರು, ಬಳಕೆದಾರರ ಹೆಸರು, ಧ್ವನಿ ಅಥವಾ ರೂಪವನ್ನೂ ಈಗಿರುವ ಅಥವಾ ಭವಿಷ್ಯದಲ್ಲಿ ಅಭಿವೃದ್ಧಿಪಡಿಸುವ ಯಾವುದೇ ಮಾಧ್ಯಮಗಳಲ್ಲಿ ಮತ್ತು ಚಾನೆಲ್ಗಳಲ್ಲಿ ಬಳಸುವ ಹಕ್ಕು ಇದರಲ್ಲಿ ಸೇರಿದೆ. Reddit ಜೊತೆ ಪಾಲುದಾರಿಕೆ ಹೊಂದಿರುವ ಇತರ ಕಂಪನಿಗಳು, ಸಂಸ್ಥೆಗಳು ಅಥವಾ ವ್ಯಕ್ತಿಗಳು ನಿಮ್ಮ ವಿಷಯಗಳನ್ನು ಮರುಹಂಚಿಕೊಳ್ಳಲು, ಪ್ರಸಾರ ಮಾಡಲು, ವಿತರಿಸಲು ಅಥವಾ ಪ್ರಕಟಿಸಲು ಅವಕಾಶ ನೀಡುವ ಹಕ್ಕು ಕೂಡ ಇದರಲ್ಲಿ ಸೇರಿದೆ. ಉದಾಹರಣೆಗೆ, ನಮ್ಮ ಸಾರ್ವಜನಿಕ ಕಂಟೆಂಟ್ ನೀತಿಯಲ್ಲಿವಿವರಿಸಿರುವಂತೆ, AI ಮತ್ತು ಮಷಿನ್ ಲರ್ನಿಂಗ್ ಮಾದರಿಗಳಿಗೆ ತರಬೇತಿ ನೀಡಲು ನಿಮ್ಮ ವಿಷಯಗಳನ್ನು ಬಳಸುವ ಹಕ್ಕು ಕೂಡ ನಮಗಿರುತ್ತದೆ. ನಿಮ್ಮ ವಿಷಯಗಳಿಗೆ ಸಂಬಂಧಿಸಿದ ಮೆಟಾಡೇಟಾವನ್ನು ನಾವು ತೆಗೆದುಹಾಕಬಹುದು ಎಂಬುದಕ್ಕೂ ನೀವು ಒಪ್ಪುತ್ತೀರಿ.
ಹಾಗೆಯೇ, ನಿಮ್ಮ ವಿಷಯಗಳಿಗೆ ಸಂಬಂಧಿಸಿದ ನೈತಿಕ ಹಕ್ಕುಗಳು ಅಥವಾ ಮೂಲ ರಚನೆಕಾರರಾಗಿ ಗುರುತಿಸಬೇಕೆಂಬ ಹಕ್ಕಿನ ಕುರಿತು ನೀವು ಯಾವುದೇ ಹಕ್ಕು ಅಥವಾ ಬೇಡಿಕೆಯನ್ನು ಮುಂದಿಡುವುದಿಲ್ಲ ಎಂದು ಹಿಂಪಡೆಯಲಾಗದಂತೆ ಒಪ್ಪುತ್ತೀರಿ. Reddit ಅಥವಾ ನಮ್ಮ ಸೇವೆಗಳ ಬಗ್ಗೆ ನೀವು ನೀಡುವ ಆಲೋಚನೆಗಳು, ಸಲಹೆಗಳು ಮತ್ತು ಪ್ರತಿಕ್ರಿಯೆಗಳು ಸಂಪೂರ್ಣವಾಗಿ ನಿಮ್ಮ ಸ್ವಂತ ಇಚ್ಛೆಯಿಂದ ನೀಡಿದವುಗಳಾಗಿರುತ್ತವೆ. ಅವುಗಳಿಗಾಗಿ ನಿಮಗೆ ಯಾವುದೇ ಹಣ ನೀಡದೆ ಅಥವಾ ನಿಮ್ಮ ಬಗ್ಗೆ ಯಾವುದೇ ಬಾಧ್ಯತೆ ಇಲ್ಲದೆ
, Reddit ಅವುಗಳನ್ನು ಬಳಸಬಹುದು ಎಂಬುದಕ್ಕೂ ನೀವು ಒಪ್ಪುತ್ತೀರಿ. ನಿಮ್ಮ ವಿಷಯಗಳನ್ನು ಪರಿಶೀಲಿಸುವುದು, ಸ್ಕ್ರೀನಿಂಗ್ ಮಾಡುವುದು, ಸಂಪಾದಿಸುವುದು ಅಥವಾ ಮೇಲ್ವಿಚಾರಣೆ ಮಾಡುವುದು ನಮಗೆ ಕಡ್ಡಾಯವಲ್ಲ. ಆದರೂ, ನಮ್ಮ ಸ್ವಂತ ನಿರ್ಧಾರದ ಮೇರೆಗೆ, ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಕ್ಕಾಗಿ ನಿಮ್ಮ ವಿಷಯಗಳನ್ನು ಅಳಿಸಬಹುದು ಅಥವಾ ಅವುಗಳಿಂದ ಹಣ ಗಳಿಸುವ ಅವಕಾಶವನ್ನು ನಿರಾಕರಿಸಬಹುದು. ಈ ನಿಯಮಗಳು,Reddit ನಿಯಮಗಳುಅಥವಾ ನಮ್ಮಇತರ ನಿಯಮಗಳು ಮತ್ತು ನೀತಿಗಳನ್ನುಉಲ್ಲಂಘಿಸಿದರೆ, ಅಥವಾ ನಿಮ್ಮಿಂದ ನಮಗೆ ಕಾನೂನುಬದ್ಧ ಹೊಣೆಗಾರಿಕೆ ಉಂಟಾಗುವ ಸಾಧ್ಯತೆಯಿದ್ದರೆ, ನಿಮ್ಮ ವಿಷಯಗಳನ್ನು ತೆಗೆದುಹಾಕಬಹುದು. ವಿಷಯಗಳ ಮೇಲ್ವಿಚಾರಣೆಯ ಬಗ್ಗೆ Reddit ಹೇಗೆ ನಿರ್ಧಾರ ತೆಗೆದುಕೊಳ್ಳುತ್ತದೆ,
Reddit ನಿಯಮಗಳನ್ನು ಹೇಗೆ ಜಾರಿಗೊಳಿಸುತ್ತದೆ ಮತ್ತು ವಿಷಯಗಳನ್ನು ತೆಗೆದುಹಾಕುವ ಅಥವಾ ನಿರ್ಬಂಧಿಸುವ ನಿರ್ಧಾರಗಳ ವಿರುದ್ಧ ಹೇಗೆ ಮೇಲ್ಮನವಿ ಸಲ್ಲಿಸಬಹುದು ಎಂಬ ಹೆಚ್ಚಿನ ಮಾಹಿತಿಗಾಗಿ,ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.
6. ಮೂರನೇ ಪಕ್ಷದ ವಿಷಯಗಳು, ಜಾಹೀರಾತುಗಳು ಮತ್ತು ಪ್ರಚಾರಗಳು
ನಮ್ಮ ಸೇವೆಗಳಲ್ಲಿ ಮೂರನೇ ವ್ಯಕ್ತಿಗಳ ವೆಬ್ಸೈಟ್ಗಳು, ಉತ್ಪನ್ನಗಳು ಅಥವಾ ಸೇವೆಗಳ ಲಿಂಕ್ಗಳು ಇರಬಹುದು. ಇವುಗಳನ್ನು ಜಾಹೀರಾತುದಾರರು, ನಮ್ಮ ಅಂಗಸಂಸ್ಥೆಗಳು, ಪಾಲುದಾರರು ಅಥವಾ ಇತರ ಬಳಕೆದಾರರು ಪೋಸ್ಟ್ ಮಾಡಿರಬಹುದು. ಇವುಗಳನ್ನು (“ಮೂರನೇ ಪಕ್ಷಗಳ ವಿಷಯಗಳು”) ಎಂದು ಕರೆಯಲಾಗುತ್ತದೆ.ಈ ವಿಷಯಗಳು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಹಾಗಾಗಿ, ಇತರರ ವೆಬ್ಸೈಟ್ಗಳು, ಉತ್ಪನ್ನಗಳು ಅಥವಾ ಸೇವೆಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ. ಇಂತಹ ವಿಷಯಗಳನ್ನು ನೀವು ಬಳಸುವುದು ನಿಮ್ಮದೇ ಸ್ವಂತ ಜವಾಬ್ದಾರಿಯಾಗಿರುತ್ತದೆ. ಅವುಗಳಿಗೆ ಸಂಬಂಧಿಸಿದ ಯಾವುದೇ ವ್ಯವಹಾರ ಮಾಡುವ ಮೊದಲು, ಅಗತ್ಯವೆನಿಸುವ ಪರಿಶೀಲನೆಯನ್ನು ನೀವೇ ಮಾಡಿಕೊಳ್ಳಬೇಕು.
ನಮ್ಮ ಸೇವೆಗಳಲ್ಲಿ ಪ್ರಾಯೋಜಿತ ವಿಷಯಗಳು ಅಥವಾ ಜಾಹೀರಾತುಗಳೂ ಇರಬಹುದು. ಜಾಹೀರಾತುಗಳ ಪ್ರಕಾರ, ಪ್ರಮಾಣ ಮತ್ತು ಯಾರಿಗೆ ಅವುಗಳನ್ನು ತೋರಿಸಲಾಗುತ್ತದೆ ಎಂಬುದು ಬದಲಾಗಬಹುದು. ನಿಮ್ಮ ವಿಷಯಗಳು ಒಳಗೊಂಡಂತೆ, ನಮ್ಮ ಸೇವೆಗಳಲ್ಲಿ ಯಾವುದೇ ವಿಷಯ ಅಥವಾ ಮಾಹಿತಿಯನ್ನು ತೋರಿಸುವಾಗ ಅದರ ಜೊತೆಗೆ ಜಾಹೀರಾತುಗಳನ್ನು ಪ್ರದರ್ಶಿಸಬಹುದು ಎಂಬುದನ್ನು ನೀವು ಒಪ್ಪುತ್ತೀರಿ.
ನೀವು ನಮ್ಮ ಸೇವೆಗಳನ್ನು ಬಳಸಿಕೊಂಡು ಸ್ಪರ್ಧೆ ಅಥವಾ ಲಕ್ಕಿ ಡ್ರಾ ಸೇರಿದಂತೆ ಯಾವುದೇ ಪ್ರಚಾರ ಕಾರ್ಯಕ್ರಮವನ್ನು ನಡೆಸಲು ಆಯ್ಕೆ ಮಾಡಿದರೆ, ಆ ಕಾರ್ಯಕ್ರಮವನ್ನು (“ಪ್ರಚಾರ ಕಾರ್ಯಕ್ರಮ”) ಎಲ್ಲಾ ಅನ್ವಯವಾಗುವ ಕಾನೂನುಗಳು ಮತ್ತು ನಿಯಮಗಳಿಗೆ ಅನುಸಾರವಾಗಿ ನಡೆಸುವ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ. ಇದರಲ್ಲಿ ಅಧಿಕೃತ ನಿಯಮಗಳನ್ನು ರೂಪಿಸುವುದು, ಕೊಡುಗೆಗಳ ಷರತ್ತುಗಳನ್ನು ತಿಳಿಸುವುದು, ಯಾರು ಭಾಗವಹಿಸಬಹುದು ಎಂಬ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸುವುದು (ಅಂದರೆ ಅಗತ್ಯವಿರುವ ಪರವಾನಗಿಗಳು, ನೋಂದಣಿಗಳು, ಬಾಂಡ್ಗಳು ಹಾಗೂ ನಿಯಂತ್ರಣ ಪ್ರಾಧಿಕಾರಗಳ ಅನುಮೋದನೆಗಳನ್ನು ಪಡೆಯುವುದು). ನಿಮ್ಮ ಪ್ರಚಾರ ಕಾರ್ಯಕ್ರಮಕ್ಕೆ Reddit ಪ್ರಾಯೋಜಕತ್ವ ನೀಡಿಲ್ಲ, ಅದನ್ನು ಅನುಮೋದಿಸಿಲ್ಲ ಮತ್ತು ಆ ಕಾರ್ಯಕ್ರಮದೊಂದಿಗೆ Reddit ಗೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು. ಹಾಗೆಯೇ, ಆ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಅದಕ್ಕೆ ಸಂಬಂಧಿಸಿದ ಯಾವುದೇ ಹೊಣೆಗಾರಿಕೆಯಿಂದ Reddit ಗೆ ವಿನಾಯಿತಿ ನೀಡಬೇಕು ಎಂಬ ನಿಯಮವನ್ನೂ ಸೇರಿಸಬೇಕು. ನಿಮ್ಮ ಪ್ರಚಾರ ಕಾರ್ಯಕ್ರಮಕ್ಕೆ ನಾವು ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ. ಹಾಗಾಗಿ, ಅಂತಹ ಕಾರ್ಯಕ್ರಮವನ್ನು ನಡೆಸುವ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ.
7. ನೀವು ಮಾಡಬಾರದ ಕೆಲಸಗಳು
ನೀವು Reddit ಸೇವೆಗಳನ್ನು ಬಳಸುವಾಗ ಅಥವಾ ಪ್ರವೇಶಿಸುವಾಗ, ಈ ನಿಯಮಗಳು ಮತ್ತು ಅನ್ವಯವಾಗುವ ಎಲ್ಲಾ ಕಾನೂನುಗಳು, ನಿಯಮಗಳು ಹಾಗೂ ನಿಬಂಧನೆಗಳನ್ನು ಪಾಲಿಸಬೇಕು. ನಿಷೇಧಿತ ವಿಷಯಗಳು ಮತ್ತು ನಡವಳಿಕೆಗಳ ಬಗ್ಗೆ ತಿಳಿಯಲು, ಈ ನಿಯಮಗಳ ಭಾಗವಾಗಿರುವReddit ನಿಯಮಗಳನ್ನುಪರಿಶೀಲಿಸಿ.Reddit ನಿಯಮಗಳಲ್ಲಿಹೇಳಿರುವ ನಿಷೇಧಗಳ ಜೊತೆಗೆ, ನೀವು ಈ ಕೆಳಗಿನ ಕೆಲಸಗಳನ್ನೂ ಮಾಡಬಾರದು:
- ಸ್ವಯಂಚಾಲಿತ ವಿಧಾನಗಳಲ್ಲಿ, ಅಂದರೆ ಗಣಕಯಂತ್ರ ಕಾರ್ಯಕ್ರಮಗಳ ಮೂಲಕ ಅಥವಾ ಬೇರೆ ಯಾವುದೇ ರೀತಿಯಲ್ಲಿ, Reddit ನ ಸೇವೆಗಳಿಗೆ ಅಡ್ಡಿಪಡಿಸುವ, ಅವುಗಳನ್ನು ನಿಷ್ಕ್ರಿಯಗೊಳಿಸುವ, ಅಸ್ತವ್ಯಸ್ತಗೊಳಿಸುವ, ಅತಿಯಾದ ಹೊರೆ ಉಂಟುಮಾಡುವ ಅಥವಾ ಅವುಗಳ ಕಾರ್ಯನಿರ್ವಹಣೆಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ಸೇವೆಗಳನ್ನು ಬಳಸುವುದು;
- ಬೇರೊಬ್ಬರ ಖಾತೆಯನ್ನು ಅಥವಾ ಸಾರ್ವಜನಿಕರಿಗೆ ಲಭ್ಯವಿಲ್ಲದ Reddit ನ ಯಾವುದೇ ಭಾಗವನ್ನು ಪ್ರವೇಶಿಸುವುದು ಅಥವಾ ಪ್ರವೇಶಿಸಲು ಪ್ರಯತ್ನಿಸುವುದು. ಇದರಲ್ಲಿ Reddit ನ ಸೇವೆಗಳಿಗೆ ಸಂಪರ್ಕಗೊಂಡಿರುವ ಅಥವಾ ಅವುಗಳೊಂದಿಗೆ ಬಳಸಲಾಗುವ ಗಣಕಯಂತ್ರ ವ್ಯವಸ್ಥೆಗಳು ಮತ್ತು ಜಾಲಗಳೂ ಸೇರಿವೆ.
- Reddit ನ ಸೇವೆಗಳ ಮೂಲಕ ಅಥವಾ ಅವುಗಳಿಗೆ ಯಾವುದೇ ವೈರಸ್ಗಳು, ಹುಳುಗಳಂತೆ ಹರಡುವ ಹಾನಿಕಾರಕ ತಂತ್ರಾಂಶಗಳು, ದುರುದ್ದೇಶಪೂರಿತ ಸಂಕೇತಗಳು ಅಥವಾ ಸೇವೆಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಇತರ ತಂತ್ರಾಂಶಗಳನ್ನು ಅಪ್ಲೋಡ್ ಮಾಡುವುದು, ಕಳುಹಿಸುವುದು ಅಥವಾ ಹಂಚಿಕೊಳ್ಳುವುದು ನಿಷಿದ್ಧ. ಇದರಲ್ಲಿ ಸೇವೆಗಳ ಸುರಕ್ಷತಾ ಸಂಬಂಧಿತ ಫೀಚರ್ಗಳಿಗೆ ತೊಂದರೆ ಉಂಟುಮಾಡುವ ತಂತ್ರಾಂಶಗಳೂ ಸೇರಿವೆ.
- Reddit ನ ಸೇವೆಗಳನ್ನು ಬಳಸಿಕೊಂಡು ಅನ್ವಯವಾಗುವ ಕಾನೂನುಗಳನ್ನು ಉಲ್ಲಂಘಿಸುವುದು ಅಥವಾ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಬೌದ್ಧಿಕ ಸ್ವತ್ತು ಹಕ್ಕುಗಳು ಅಥವಾ ಇತರ ಸ್ವಾಮ್ಯ ಹಕ್ಕುಗಳಿಗೆ ಧಕ್ಕೆ ತರುವುದು ನಿಷಿದ್ಧ;
- ಈ ನಿಯಮಗಳಲ್ಲಿ ಅಥವಾ Reddit ಜೊತೆ ಮಾಡಿಕೊಂಡಿರುವ ಪ್ರತ್ಯೇಕ ಒಪ್ಪಂದದಲ್ಲಿ ಅನುಮತಿ ನೀಡಿರುವುದನ್ನು ಹೊರತುಪಡಿಸಿ, ಯಾವುದೇ ವಿಧಾನದಲ್ಲಿ (ಸ್ವಯಂಚಾಲಿತವಾಗಿ ಅಥವಾ ಬೇರೆ ರೀತಿಯಲ್ಲಿ) Reddit ನ ಸೇವೆಗಳನ್ನು ಪ್ರವೇಶಿಸುವುದು, ಹುಡುಕುವುದು ಅಥವಾ ಅವುಗಳಿಂದ ಮಾಹಿತಿಯನ್ನು ಸಂಗ್ರಹಿಸುವುದು ನಿಷಿದ್ಧ. ನಮ್ಮ `robots.txt` ಕಡತದಲ್ಲಿ ತಿಳಿಸಿರುವ ನಿಯಮಗಳನ್ನು ಪಾಲಿಸುವ ಷರತ್ತಿನ ಮೇಲೆ, ಸ್ವಯಂಚಾಲಿತವಾಗಿ ಸೇವೆಗಳಲ್ಲಿನ ಮಾಹಿತಿಯನ್ನು ಹುಡುಕಲು ನಾವು ಅನುಮತಿ ನೀಡುತ್ತೇವೆ. ಆದರೆ, Reddit ನಿಂದ ಮುಂಚಿತವಾಗಿ ಲಿಖಿತ ಒಪ್ಪಿಗೆ ಪಡೆಯದೆ, ಸೇವೆಗಳಲ್ಲಿನ ಮಾಹಿತಿಯನ್ನು ಸ್ವಯಂಚಾಲಿತವಾಗಿ ತೆಗೆದು ಸಂಗ್ರಹಿಸುವುದು ನಿಷಿದ್ಧ; ಅಥವಾ
- Reddit ಗೆ ಅಥವಾ ಯಾವುದೇ ಪಾವತಿ ವ್ಯವಸ್ಥೆಗೆ ದುರುಪಯೋಗ ಮಾಡುವ ಅಥವಾ ವಂಚಿಸುವ ಉದ್ದೇಶದಿಂದ ಸೇವೆಗಳನ್ನು ಬಳಸುತ್ತಿದ್ದೀರಿ ಎಂದು ನಮಗೆ ಸಮಂಜಸವಾಗಿ ಅನಿಸಿದರೆ, ಆ ರೀತಿಯಲ್ಲಿ Reddit ನ ಸೇವೆಗಳನ್ನು ಬಳಸುವುದು ನಿಷಿದ್ಧ.
ಈ ನಿಯಮಗಳು ಅಥವಾ ನಮ್ಮ Reddit ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸುವವಿಷಯ ಅಥವಾ ನಡವಳಿಕೆಯನ್ನು ವರದಿ ಮಾಡಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಭದ್ರತಾ ದೋಷಗಳ ಜವಾಬ್ದಾರಿಯುತ ವರದಿ ಮಾಡುವಿಕೆಯನ್ನು ಸಹ ನಾವು ಬೆಂಬಲಿಸುತ್ತೇವೆ. ಭದ್ರತಾ ಸಮಸ್ಯೆಯನ್ನು ವರದಿ ಮಾಡಲು, ದಯವಿಟ್ಟು security@reddit.com ಗೆ ಇಮೇಲ್ ಮಾಡಿ.
8. ಮಾಡರೇಟರ್
ಸಬ್ರೆಡ್ಡಿಟ್ ಅನ್ನು ನಿರ್ವಹಿಸುವುದು ಅಧಿಕೃತ ಉದ್ಯೋಗವಲ್ಲ. ಇದು ಸೇವೆಗಳನ್ನು ಬಳಸುವವರಿಗೆ ಸಿಗಬಹುದಾದ ಸ್ವಯಂಪ್ರೇರಿತ ಜವಾಬ್ದಾರಿಯಾಗಿದೆ. ಮಾಡರೇಟರ್ ಕೈಗೊಳ್ಳುವ ಕ್ರಮಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ. ಈ ನಿಯಮಗಳನ್ನು ಉಲ್ಲಂಘಿಸುವುದು ಸೇರಿದಂತೆ, ಯಾವುದೇ ಕಾರಣಕ್ಕಾಗಿ ಅಥವಾ ಯಾವುದೇ ಕಾರಣವಿಲ್ಲದೆಯೂ, ಬಳಕೆದಾರರ ಸಮುದಾಯ ಮಾಡರೇಟ್ ಮಾಡುವ ಅಧಿಕಾರವನ್ನು ಯಾವುದೇ ಸಮಯದಲ್ಲಿ ಹಿಂಪಡೆಯುವ ಅಥವಾ ಸೀಮಿತಗೊಳಿಸುವ ಹಕ್ಕು ನಮಗಿದೆ.
ನೀವು ಸಬ್ರೆಡ್ಡಿಟ್ ಅನ್ನು ಮಾಡರೇಟ್ ಮಾಡಲು ಆಯ್ಕೆ ಮಾಡಿಕೊಂಡರೆ:
- ನೀವು ಮಾಡರೇಟರ್ ನೀತಿ ಸಂಹಿತೆಯ ನಿಯಮಗಳನ್ನು ಪಾಲಿಸಲು ಒಪ್ಪುತ್ತೀರಿ;
- ನೀವು ಮಾಡರೇಟ್ ಮಾಡುವ ಸಬ್ರೆಡ್ಡಿಟ್ಗೆ ಸಂಬಂಧಿಸಿದ ವರದಿಗಳು ಬಂದಾಗ, ಸೂಕ್ತ ಕ್ರಮ ಕೈಗೊಳ್ಳಲು ನೀವು ಒಪ್ಪುತ್ತೀರಿ. ಇದರಲ್ಲಿ ನಿಯಮಗಳನ್ನು ಉಲ್ಲಂಘಿಸುವ ವಿಷಯಗಳನ್ನು ತೆಗೆದುಹಾಕುವುದು ಮತ್ತು/ಅಥವಾ ಪರಿಶೀಲನೆಗಾಗಿ ತಕ್ಷಣವೇ Reddit ಗೆ ವಿಷಯವನ್ನು ತಿಳಿಸುವುದು ಸೇರಿರಬಹುದು.
- ನೀವು Redditನ ಪರವಾಗಿ ಕಾರ್ಯನಿರ್ವಹಿಸಲು ಅಧಿಕಾರ ಹೊಂದಿಲ್ಲ ಮತ್ತು ಅಂತಹ ಅಧಿಕಾರ ನಿಮಗಿದೆ ಎಂದು ಹೇಳಿಕೊಳ್ಳುವಂತೆಯೂ ಇಲ್ಲ;
- ನಮ್ಮ ಲಿಖಿತ ಅನುಮತಿಯಿಲ್ಲದೆ, Redditನ ಪರವಾಗಿ ಅಥವಾ ನೀವು ಮಾಡರೇಟ್ ಮಾಡುವ ಯಾವುದೇ ಸಬ್ರೆಡ್ಡಿಟ್ ಪರವಾಗಿ, ಮೂರನೇ ವ್ಯಕ್ತಿಯೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವಂತಿಲ್ಲ;
- ಮೂರನೇ ವ್ಯಕ್ತಿಗಳಿಂದ ಯಾವುದೇ ರೀತಿಯ ಹಣ, ಪ್ರತಿಫಲ, ಉಡುಗೊರೆ ಅಥವಾ ಉಪಕಾರವನ್ನು ಪಡೆದು, ಅದಕ್ಕೆ ಬದಲಾಗಿ ಸಮುದಾಯದ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವಂತಿಲ್ಲ;
- ನೀವು ಸಬ್ರೆಡ್ಡಿಟ್ ಅನ್ನು ಮಾಡರೇಟ್ ಮಾಡುವುದರಿಂದ ಸಾರ್ವಜನಿಕರಿಗೆ ಲಭ್ಯವಿಲ್ಲದ ಮಾಹಿತಿಗೆ ಪ್ರವೇಶ ಪಡೆದಿದ್ದರೆ, ಆ ಮಾಹಿತಿಯನ್ನು ಸಮುದಾಯ ಮಾಡರೇಟರ್ ಆಗಿ ನಿಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು; ಮತ್ತು
- ನೀವು ಮಾಡರೇಟ್ ಮಾಡುವ ಸಬ್ರೆಡ್ಡಿಟ್ಗಳಿಗೆ ನಿಯಮಗಳನ್ನು ರಚಿಸಬಹುದು ಮತ್ತು ಜಾರಿಗೊಳಿಸಬಹುದು, ಆದರೆ ಅಂತಹ ನಿಯಮಗಳು ಈ ನಿಯಮಗಳು,Reddit ನಿಯಮಗಳು ಅಥವಾ ಮಾಡರೇಟರ್ ನೀತಿ ಸಂಹಿತೆಯೊಂದಿಗೆ ಸಂಘರ್ಷಿಸುವುದಿಲ್ಲ.
Reddit ಗೆ, ಯಾವುದೇ ಸಮುದಾಯ ಮಾಡರೇಟರ್ ಕೈಗೊಂಡ ಕ್ರಮ ಅಥವಾ ತೆಗೆದುಕೊಂಡ ನಿರ್ಧಾರವು Reddit ನ ಅಥವಾ Reddit ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅನಿಸಿದರೆ, ಆ ಕ್ರಮ ಅಥವಾ ನಿರ್ಧಾರವನ್ನು ರದ್ದುಗೊಳಿಸುವ ಹಕ್ಕು Reddit ಗೆ ಇದೆ. ಆದರೆ, ಹಾಗೆ ಮಾಡಲೇಬೇಕು ಎಂಬ ಕಡ್ಡಾಯವಿಲ್ಲ. ಈ ಕುರಿತು ಅಂತಿಮ ನಿರ್ಧಾರವನ್ನು Reddit ಸ್ವತಃ ತೆಗೆದುಕೊಳ್ಳುತ್ತದೆ.
9. ಕೃತಿಸ್ವಾಮ್ಯ, ಟ್ರೇಡ್ಮಾರ್ಕ್, ಡಿಜಿಟಲ್ ಹಕ್ಕುಸ್ವಾಮ್ಯ ಕಾನೂನು ಮತ್ತು ವಿಷಯಗಳನ್ನು ತೆಗೆದುಹಾಕುವುದು
Reddit ಇತರರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಗೌರವಿಸುತ್ತದೆ. ನಮ್ಮ ಸೇವೆಗಳನ್ನು ಬಳಸುವವರೂ ಅದೇ ರೀತಿ ಗೌರವಿಸಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಇದಕ್ಕಾಗಿ ನಮ್ಮಲ್ಲಿ ಒಂದುನೀತಿಇದೆ. ಅದರ ಪ್ರಕಾರ, ಇತರರ ಹಕ್ಕುಗಳನ್ನು ಉಲ್ಲಂಘಿಸುವ ವಿಷಯಗಳನ್ನು ನಮ್ಮ ಸೇವೆಗಳಿಂದ ತೆಗೆದುಹಾಕಲಾಗುತ್ತದೆ. ಪದೇಪದೇ ಇಂತಹ ಉಲ್ಲಂಘನೆ ಮಾಡುವ ಬಳಕೆದಾರರ ಖಾತೆಗಳನ್ನು ಸೂಕ್ತ ಸಂದರ್ಭಗಳಲ್ಲಿ ಮುಚ್ಚಬಹುದು. ನಮ್ಮ ಸೇವೆಗಳಲ್ಲಿ ನಿಮ್ಮ ಮಾಲೀಕತ್ವದಲ್ಲಿರುವ ಅಥವಾ ನಿಮ್ಮ ನಿಯಂತ್ರಣದಲ್ಲಿರುವ ಕಾಪಿರೈಟ್ ಅಥವಾ ಟ್ರೇಡ್ಮಾರ್ಕ್ ಹಕ್ಕುಗಳನ್ನು ಉಲ್ಲಂಘಿಸುವ ಯಾವುದಾದರೂ ವಿಷಯವಿದೆ ಎಂದು ನಿಮಗೆ ಅನಿಸಿದರೆ, ನಮ್ಮ ಕಾಪಿರೈಟ್ ವರದಿ ಫಾರ್ಮ್ಅಥವಾಟ್ರೇಡ್ಮಾರ್ಕ್ ವರದಿ ಫಾರ್ಮ್ಭರ್ತಿ ಮಾಡುವ ಮೂಲಕ Reddit ನ ಸಂಬಂಧಪಟ್ಟ ಅಧಿಕಾರಿಗೆ ತಿಳಿಸಬಹುದು ಅಥವಾ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಬಹುದು:
ಕಾಪಿರೈಟ್ ಅಧಿಕಾರಿ
Reddit, Inc.
548 ಮಾರ್ಕೆಟ್ ಸ್ಟ್ರೀಟ್, #16093
ಸ್ಯಾನ್ ಫ್ರಾನ್ಸಿಸ್ಕೊ, CA 94104
copyright@reddit.com
ಸರಿಯಾದನೋಟಿಸ್ ನೀಡಲು ಬೇಕಾದ ಮಾಹಿತಿಗಾಗಿ 17 U.S.C. § 512(c)(3)ನೋಡಿ. ನಮ್ಮ ಸೇವೆಗಳಲ್ಲಿರುವ ಯಾವುದಾದರೂ ವಿಷಯ ಅಥವಾ ಚಟುವಟಿಕೆ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ತಿಳಿದಿದ್ದರೂ ತಪ್ಪಾಗಿ ವರದಿ ಮಾಡಿದರೆ, ಅದರಿಂದ ಉಂಟಾಗುವ ಕೆಲವು ವೆಚ್ಚಗಳು ಮತ್ತು ನಷ್ಟಗಳಿಗೆ ನೀವು Reddit ಗೆ ಜವಾಬ್ದಾರರಾಗಬೇಕಾಗಬಹುದು ಎಂಬುದನ್ನು ಗಮನದಲ್ಲಿಡಿ.
ಕಾಪಿರೈಟ್ ಅಥವಾ ಟ್ರೇಡ್ಮಾರ್ಕ್ ದೂರು ಬಂದ ಕಾರಣಕ್ಕೆ ನಾವು ನಿಮ್ಮ ವಿಷಯವನ್ನು ತೆಗೆದುಹಾಕಿದರೆ, ನಿಮಗೆ ತಿಳಿಸುತ್ತೇವೆ. ಕಾಪಿರೈಟ್ ದೂರಿನಲ್ಲಿನ ತಪ್ಪು ಅಥವಾ ವಿಷಯವನ್ನು ತಪ್ಪಾಗಿ ಗುರುತಿಸಿದ ಕಾರಣಕ್ಕೆ ನಿಮ್ಮ ವಿಷಯವನ್ನು ಅನ್ಯಾಯವಾಗಿ ತೆಗೆದುಹಾಕಲಾಗಿದೆ ಎಂದು ನಿಮಗೆ ಅನಿಸಿದರೆ, ನಮ್ಮಕಾಪಿರೈಟ್ ಪ್ರತಿವಾದ ನೋಟಿಸ್ ಫಾರ್ಮ್ಮೂಲಕ ಅಥವಾ (ಮೇಲಿನ ವಿಳಾಸದಲ್ಲಿರುವ) ಕಾಪಿರೈಟ್ ಅಧಿಕಾರಿಗೆ ಪ್ರತಿವಾದ ನೋಟಿಸ್ ಕಳುಹಿಸಬಹುದು. ಸರಿಯಾದ ಪ್ರತಿವಾದ ನೋಟಿಸ್ ನೀಡಲು ಬೇಕಾದ ಮಾಹಿತಿಗಾಗಿ 17 U.S.C. § 512(g)(3)ನೋಡಿ.
10. ಪಾವತಿಸಿದ ಸೇವೆಗಳು
ಹಲವು Reddit ಸೇವೆಗಳನ್ನು ಬಳಸಲು ಯಾವುದೇ ಶುಲ್ಕವಿಲ್ಲ. ಆದರೆ, ಕೆಲವು ಸೇವೆಗಳು, ಫೀಚರ್ಗಳು ಮತ್ತು ಪ್ರಾಡಕ್ಟ್ಗಳನ್ನು ಹಣ ಕೊಟ್ಟು ಖರೀದಿಸಬೇಕಾಗಬಹುದು. ಇವುಗಳನ್ನು (“ಪಾವತಿ ಸೇವೆಗಳು”) ಎಂದು ಕರೆಯಲಾಗುತ್ತದೆ.ಈ ನಿಯಮಗಳ ಜೊತೆಗೆ, ಪಾವತಿ ಸೇವೆಗಳಿಗೆ Reddit Econ ನಿಯಮಗಳುಕೂಡ ಅನ್ವಯಿಸುತ್ತವೆ. ನೀವು ಪಾವತಿ ಸೇವೆಗಳನ್ನು ಖರೀದಿಸಿದರೆ ಅಥವಾ ಬಳಸಿದರೆ, Econ ನಿಯಮಗಳುಮತ್ತು ಅನ್ವಯಿಸಿದರೆ ಪೂರ್ವವೀಕ್ಷಣೆಗಳ ನಿಯಮಗಳಿಗೂ ಒಪ್ಪಿಗೆ ನೀಡಿದಂತಾಗುತ್ತದೆ.
11. ಬೌದ್ಧಿಕ ಆಸ್ತಿ
ಸೇವೆಗಳನ್ನು Reddit ಒಡೆತನದಲ್ಲಿದೆ ಮತ್ತು ನಿರ್ವಹಿಸುತ್ತದೆ. Reddit ಒದಗಿಸಿದ ದೃಶ್ಯ ಇಂಟರ್ಫೇಸ್ಗಳು, ಗ್ರಾಫಿಕ್ಸ್, ವಿನ್ಯಾಸ, ಸಂಕಲನ, ಮಾಹಿತಿ, ಡೇಟಾ, ಕಂಪ್ಯೂಟರ್ ಕೋಡ್, ಉತ್ಪನ್ನಗಳು, ಸೇವೆಗಳು, ಟ್ರೇಡ್ಮಾರ್ಕ್ಗಳು ಮತ್ತು ಸೇವೆಗಳ (“ಮೆಟೀರಿಯಲ್ಸ್”) ಎಲ್ಲಾ ಇತರ ಅಂಶಗಳು ಬೌದ್ಧಿಕ ಆಸ್ತಿ ಮತ್ತು ಇತರ ಕಾನೂನುಗಳಿಂದ ರಕ್ಷಿಸಲ್ಪಟ್ಟಿವೆ. ಸೇವೆಗಳಲ್ಲಿ ಸೇರಿಸಲಾದ ಎಲ್ಲಾ ವಸ್ತುಗಳು Reddit ಅಥವಾ ಅದರ ಮೂರನೇ ವ್ಯಕ್ತಿಯ ಪರವಾನಗಿದಾರರ ಆಸ್ತಿಯಾಗಿದೆ. ಸಾಮಗ್ರಿಗಳನ್ನು ಡೌನ್ಲೋಡ್ ಮಾಡುವ ಮೂಲಕ ಅಥವಾ ಪಾವತಿಸಿದ ಸೇವೆಗಳನ್ನು ಖರೀದಿಸುವ ಮೂಲಕ ನೀವು ಯಾವುದೇ ಮಾಲೀಕತ್ವದ ಹಕ್ಕುಗಳನ್ನು ಪಡೆದುಕೊಳ್ಳುವುದಿಲ್ಲ ಎಂದು ನೀವು ಅಂಗೀಕರಿಸಿ ಒಪ್ಪಿಗೆ ನೀಡುತ್ತೀರಿ. Reddit ನಿಂದ ಸ್ಪಷ್ಟವಾಗಿ ಅಧಿಕೃತಗೊಳಿಸಲ್ಪಟ್ಟ ಮತ್ತು Reddit ನ ಬ್ರ್ಯಾಂಡ್ ಮಾರ್ಗಸೂಚಿಗಳಿಗೆಒಳಪಟ್ಟಿರುವುದನ್ನು ಹೊರತುಪಡಿಸಿ , ನೀವು ಸಾಮಗ್ರಿಗಳನ್ನು ಬಳಸುವಂತಿಲ್ಲ. ಈ ನಿಯಮಗಳಲ್ಲಿ ಸ್ಪಷ್ಟವಾಗಿ ನೀಡದ ಸಾಮಗ್ರಿಗಳಿಗೆ Reddit ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸುತ್ತದೆ.
12. ನಷ್ಟಪರಿಹಾರ
ಕಾನೂನಿನಿಂದ ನಿಷೇಧಿಸಲ್ಪಟ್ಟಿರುವ ಮಟ್ಟಿಗೆ ಹೊರತುಪಡಿಸಿ, ಈ ಕೆಳಗಿನವುಗಳಿಂದ ಉಂಟಾಗುವ, ಅವುಗಳಿಗೆ ಸಂಬಂಧಿಸಿದ ಅಥವಾ ಅವುಗಳಿಗೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ಮೂರನೇ ಪಕ್ಷದ ಹಕ್ಕು ಅಥವಾ ಬೇಡಿಕೆ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಹೊಣೆಗಾರಿಕೆ, ಹಾನಿ, ನಷ್ಟ ಮತ್ತು ವೆಚ್ಚಗಳಿಂದ (ವೆಚ್ಚಗಳು ಮತ್ತು ವಕೀಲರ ಶುಲ್ಕಗಳನ್ನು ಒಳಗೊಂಡಂತೆ) Reddit, ಅದರ ಅಂಗಸಂಸ್ಥೆಗಳು ಹಾಗೂ ಅವುಗಳ ಆಯಾ ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು, ಅಂಗಸಂಸ್ಥೆಗಳು, ಏಜೆಂಟ್ಗಳು, ಗುತ್ತಿಗೆದಾರರು, ಮೂರನೇ ವ್ಯಕ್ತಿಯ ಸೇವಾ ಪೂರೈಕೆದಾರರು ಮತ್ತು ಪರವಾನಗಿದಾರರನ್ನು (ಒಟ್ಟಾಗಿ “Reddit ಸಂಸ್ಥೆಗಳು”) ರಕ್ಷಿಸಲು, ನಷ್ಟಪರಿಹಾರ ನೀಡಲು ಮತ್ತು ಹಾನಿಯಾಗದಂತೆ ಇರಿಸಲು ನೀವು ಒಪ್ಪುತ್ತೀರಿ: (a) ನೀವು ಸೇವೆಗಳನ್ನು ಬಳಸುವುದು; (b) ನೀವು ಈ ನಿಯಮಗಳನ್ನು ಉಲ್ಲಂಘಿಸುವುದು; (c) ನೀವು ಅನ್ವಯವಾಗುವ ಕಾನೂನುಗಳು ಅಥವಾ ನಿಯಮಗಳನ್ನು ಉಲ್ಲಂಘಿಸುವುದು; ಅಥವಾ (d) ನಿಮ್ಮ ವಿಷಯ. ನೀವು ನಮಗೆ ನಷ್ಟಪರಿಹಾರ ನೀಡಬೇಕಾಗಿರುವ ಯಾವುದೇ ವಿಷಯದ ಪ್ರತಿವಾದವನ್ನು ನಿಯಂತ್ರಿಸುವ ಹಕ್ಕನ್ನು ನಾವು ಕಾಯ್ದಿರಿಸಿಕೊಂಡಿದ್ದೇವೆ ಮತ್ತು ಈ ಹಕ್ಕುಗಳ ವಿರುದ್ಧದ ನಮ್ಮ ಪ್ರತಿವಾದದಲ್ಲಿ ಸಹಕರಿಸಲು ನೀವು ಒಪ್ಪುತ್ತೀರಿ.
13. ಹೊಣೆಗಾರಿಕೆಯ ಮಿತಿ
ನೀವು Reddit ಸೇವೆಗಳನ್ನು ಬಳಸುವ ಮೂಲಕ, ನಿಮ್ಮ ವಾಸಸ್ಥಳದ ದೇಶದ ಕಾನೂನು ಅನುಮತಿಸುವ ಗರಿಷ್ಠ ಮಿತಿಯವರೆಗೆ Reddit ಸಂಸ್ಥೆಗಳ ಹೊಣೆಗಾರಿಕೆ ಸೀಮಿತವಾಗಿರುತ್ತದೆ ಎಂಬುದಕ್ಕೆ ಒಪ್ಪುತ್ತೀರಿ. ಈ ರೀತಿಯ ಒಪ್ಪಂದದಲ್ಲಿ ಸಾಮಾನ್ಯವಾಗಿ ಇರುವ ಪ್ರಮುಖ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿದರೆ, ಅದರಿಂದ ಮುಂಚಿತವಾಗಿ ಊಹಿಸಬಹುದಾದ ಹಾನಿಗಳಿಗೆ ಮಾತ್ರ ಹೊಣೆಗಾರಿಕೆ ಸೀಮಿತವಾಗಿರುತ್ತದೆ. ಇತರ ಅನ್ವಯವಾಗುವ ಕಾಳಜಿಯ ಕರ್ತವ್ಯಗಳನ್ನು ಉಲ್ಲಂಘಿಸುವುದರಿಂದ ಉಂಟಾಗುವ, ಒಪ್ಪಂದದ ಪ್ರಮುಖ ಷರತ್ತುಗಳಿಗೆ ಸಂಬಂಧಿಸದ ಹಾನಿಗಳಿಗೆ Reddit ಹೊಣೆಗಾರಿಕೆ ತೆಗೆದುಕೊಳ್ಳುವುದಿಲ್ಲ. ಕಾನೂನಿನ ಪ್ರಕಾರ ಮಿತಿಗೊಳಿಸಲು ಸಾಧ್ಯವಿಲ್ಲದ ಹೊಣೆಗಾರಿಕೆಗಳಿಗೆ, ನಮ್ಮ ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ತಪ್ಪಿನಿಂದ ಉಂಟಾಗುವ ಸಾವು ಅಥವಾ ದೈಹಿಕ ಗಾಯಗಳಿಗೆ, ಹಾಗೂ ನಾವು ನಿಮಗೆ ನಿರ್ದಿಷ್ಟವಾಗಿ ಭರವಸೆ ನೀಡಿರುವ ವಿಷಯಗಳಿಗೆ ಸಂಬಂಧಿಸಿದ ನಮ್ಮ ಹೊಣೆಗಾರಿಕೆಗೆ ಈ ಮಿತಿ ಅನ್ವಯಿಸುವುದಿಲ್ಲ.
14. ಈ ನಿಯಮಗಳಲ್ಲಿ ಬದಲಾವಣೆಗಳು
ನಾವು ಕಾಲಕಾಲಕ್ಕೆ ಈ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಬಹುದು. ನಾವು ಈ ನಿಯಮಗಳಲ್ಲಿ ಬದಲಾವಣೆ ಮಾಡಿದರೆ, ಹೊಸ ನಿಯಮಗಳನ್ನು ಪೋಸ್ಟ್ ಮಾಡುತ್ತೇವೆ ಮತ್ತು ಮೇಲಿನ ಜಾರಿಗೆ ಬರುವ ದಿನಾಂಕವನ್ನು ನವೀಕರಿಸುತ್ತೇವೆ. ನಮ್ಮ ಅಭಿಪ್ರಾಯದಲ್ಲಿ ಆ ಬದಲಾವಣೆಗಳು ಪ್ರಮುಖವಾಗಿದ್ದರೆ, ಅವು ಜಾರಿಗೆ ಬರುವ ಕನಿಷ್ಠ 30 ದಿನಗಳ ಮೊದಲು ನಿಮಗೆ ತಿಳಿಸುತ್ತೇವೆ. ಇದಕ್ಕಾಗಿ, ನಿಮ್ಮ ಖಾತೆಗೆ ಲಿಂಕ್ ಆಗಿರುವ ಇಮೇಲ್ ವಿಳಾಸಕ್ಕೆ (ನೀವು ಪರಿಶೀಲಿಸಿದ ಇಮೇಲ್ ವಿಳಾಸವನ್ನು ನೀಡಿದ್ದರೆ) ಇಮೇಲ್ ಕಳುಹಿಸುತ್ತೇವೆ ಅಥವಾ Reddit ಸೇವೆಗಳ ಮೂಲಕ ಬೇರೆ ರೀತಿಯಲ್ಲಿ ನಿಮಗೆ ಸೂಚನೆ ನೀಡುತ್ತೇವೆ. ಪರಿಷ್ಕರಿಸಿದ ನಿಯಮಗಳು ಜಾರಿಗೆ ಬಂದ ದಿನದಿಂದ ಅಥವಾ ಅದರ ನಂತರವೂ ನೀವು ನಮ್ಮ ಸೇವೆಗಳನ್ನು ಬಳಸುವುದನ್ನು ಮುಂದುವರಿಸಿದರೆ, ಆ ಪರಿಷ್ಕರಿಸಿದ ನಿಯಮಗಳಿಗೆ ನೀವು ಒಪ್ಪಿಕೊಂಡಂತಾಗುತ್ತದೆ. ಪರಿಷ್ಕರಿಸಿದ ನಿಯಮಗಳನ್ನು ನೀವು ಒಪ್ಪದಿದ್ದರೆ, ಆ ಬದಲಾವಣೆಗಳು ಜಾರಿಗೆ ಬರುವ ಮೊದಲು ನಮ್ಮ ಸೇವೆಗಳನ್ನು ಬಳಸುವುದನ್ನು ನಿಲ್ಲಿಸಬೇಕು.
15. ಹೆಚ್ಚುವರಿ ನಿಯಮಗಳು
Reddit ಹಲವು ರೀತಿಯ ಸೇವೆಗಳನ್ನು ನೀಡುವುದರಿಂದ, ನಿರ್ದಿಷ್ಟ ಪ್ರಾಡಕ್ಟ್ ಅಥವಾ ಸೇವೆಯನ್ನು ಬಳಸುವ ಮೊದಲು ನೀವು ಕೆಲವು ಹೆಚ್ಚುವರಿ ಷರತ್ತುಗಳು, ನೀತಿಗಳು, ಮಾರ್ಗಸೂಚಿಗಳು ಅಥವಾ ನಿಯಮಗಳಿಗೆ ಒಪ್ಪಿಗೆ ನೀಡಬೇಕಾಗಬಹುದು. (ಇವೆಲ್ಲವನ್ನೂ ಒಟ್ಟಾಗಿ “ಹೆಚ್ಚುವರಿ ಷರತ್ತುಗಳು” ಎಂದು ಕರೆಯಲಾಗುತ್ತದೆ). ಎಲ್ಲ ಹೆಚ್ಚುವರಿ ಷರತ್ತುಗಳೂ ಈ ನಿಯಮಗಳ ಭಾಗವಾಗಿರುತ್ತವೆ. ಈ ನಿಯಮಗಳು ಮತ್ತು ಹೆಚ್ಚುವರಿ ಷರತ್ತುಗಳ ನಡುವೆ ಯಾವುದಾದರೂ ವ್ಯತ್ಯಾಸ ಅಥವಾ ಸಂಘರ್ಷವಿದ್ದರೆ, ಸಂಬಂಧಿತ Reddit ಸೇವೆಯನ್ನು ನೀವು ಬಳಸುವಾಗ ಆ ಹೆಚ್ಚುವರಿ ಷರತ್ತುಗಳೇ ಅನ್ವಯಿಸುತ್ತವೆ.
- ನೀವು ಯಾವುದೇ ಪಾವತಿಸಿದ ಸೇವೆಗಳು ಅಥವಾ ಡಿಜಿಟಲ್ ಸರಕುಗಳನ್ನು ಬಳಸಿದರೆ, ನೀವು Reddit Econ ನಿಯಮಗಳಿಗೂ ಒಪ್ಪಿಕೊಳ್ಳಬೇಕು.
- ನೀವು ಯಾವುದೇ ಪೂರ್ವವೀಕ್ಷಣೆಗಳ ಫೀಚರ್ಗಳನ್ನು ಅಥವಾ ಡಿಜಿಟಲ್ ಸರಕುಗಳನ್ನು ಬಳಸಿದರೆ, ನೀವು Reddit ಪೂರ್ವವೀಕ್ಷಣೆಗಳ ನಿಯಮಗಳಿಗೂ ಒಪ್ಪಿಕೊಳ್ಳಬೇಕು.
- ನೀವು Reddit ಸೇವೆಗಳಲ್ಲಿ ಜಾಹೀರಾತು ನೀಡಿದರೆ,Reddit ಜಾಹಿರಾತು ಪ್ಲಾಟ್ಫಾರ್ಮ್ ನಿಯಮಗಳಿಗೂ ಒಪ್ಪಿಗೆ ನೀಡಬೇಕು.
- ನೀವು ನಮ್ಮ ಡೆವಲಪರ್ ಸೇವೆಗಳನ್ನು (API ಸೇರಿದಂತೆ) ಬಳಸಿದರೆ, Reddit ಡೆವಲಪರ್ ನಿಯಮಗಳಿಗೂ ಒಪ್ಪಿಗೆ ನೀಡಬೇಕು.
- ನೀವು ಹೆಚ್ಚುವರಿ ನಿಯಮಗಳಿಗೆ ಒಳಪಟ್ಟಿರುವ ಯಾವುದೇ Reddit ಪ್ರೋಗ್ರಾಂನಲ್ಲಿ ಭಾಗವಹಿಸಿದರೆ (ಉದಾ. ಯಾವುದೇ ಗಳಿಕೆ ಕಾರ್ಯಕ್ರಮಕ್ಕಾಗಿ ಗಳಿಕೆಯ ನಿಯಮಗಳು), ನೀವು ಆ ಹೆಚ್ಚುವರಿ ನಿಯಮಗಳಿಗೆ ಸಹ ಒಪ್ಪಿಕೊಳ್ಳಬೇಕು.
16. ಕೊನೆಗೊಳಿಸುವಿಕೆ
ನಿಮ್ಮ ಖಾತೆಯನ್ನು ಅಳಿಸಿ ಮತ್ತು ಎಲ್ಲಾ ಸೇವೆಗಳನ್ನು ಬಳಸುವುದನ್ನು ನಿಲ್ಲಿಸುವ ಮೂಲಕ ನೀವು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಕ್ಕಾಗಿ ಈ ಷರತ್ತುಗಳನ್ನು ಕೊನೆಗೊಳಿಸಬಹುದು. ನಿಮ್ಮ ಖಾತೆಯನ್ನು ಅಳಿಸದೆ ಸೇವೆಗಳನ್ನು ಬಳಸುವುದನ್ನು ನಿಲ್ಲಿಸಿದರೆ, ದೀರ್ಘಕಾಲದ ಚಟುವಟಿಕೆರಹಿತ ಕಾರಣಕ್ಕಾಗಿ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು.
ಅನ್ವಯವಾಗುವ ಕಾನೂನಿನಿಂದ ಅನುಮತಿಸಲಾದ ಪೂರ್ಣ ಪ್ರಮಾಣದಲ್ಲಿ, ಈ ಷರತ್ತುಗಳನ್ನು ಅಥವಾ ನಮ್ಮ Reddit ನಿಯಮಗಳನ್ನು ಉಲ್ಲಂಘಿಸುವುದು ಸೇರಿದಂತೆ, ಯಾವುದೇ ಕಾರಣಕ್ಕಾಗಲಿ ಅಥವಾ ಕಾರಣವಿಲ್ಲದೆಯೇ, ನಾವು ಯಾವುದೇ ಸಮಯದಲ್ಲಿ ನಿಮ್ಮ ಖಾತೆ, ಮಾಡರೇಟರ್ ಸ್ಥಾನಮಾನ ಅಥವಾ ಸೇವೆಗಳನ್ನು ಪ್ರವೇಶಿಸುವ ಅಥವಾ ಬಳಸುವ ನಿಮ್ಮ ಸಾಮರ್ಥ್ಯವನ್ನು ಅಮಾನತುಗೊಳಿಸಬಹುದು ಅಥವಾ ಕೊನೆಗೊಳಿಸಬಹುದು.
ಈ ಷರತ್ತುಗಳು ಅಥವಾ ನಿಮ್ಮ ಖಾತೆಯ ಯಾವುದೇ ಮುಕ್ತಾಯದ ನಂತರವೂ ಈ ಕೆಳಗಿನ ವಿಭಾಗಗಳು ಜಾರಿಯಲ್ಲಿರುತ್ತವೆ: 5 (ನಿಮ್ಮ ವಿಷಯ), 7 (ನೀವು ಮಾಡಲಾಗದ ಕೆಲಸಗಳು), 12 (ನಷ್ಟಪರಿಹಾರ), 13 (ಹೊಣೆಗಾರಿಕೆಯ ಮಿತಿ), 16 (ಕೊನೆಗೊಳಿಸುವಿಕೆ), ಮತ್ತು 17 (ಇತರೆ).
17. ಇತರೆ ವಿಷಯಗಳು
ಈ ನಿಯಮಗಳು, ಗೌಪ್ಯತೆ ನೀತಿಮತ್ತು ಈ ನಿಯಮಗಳಲ್ಲಿ ಉಲ್ಲೇಖದ ಮೂಲಕ ಸೇರಿಸಲಾದ ಇತರ ಒಪ್ಪಂದಗಳು — ಇವೆಲ್ಲವೂ ನೀವು Reddit ಸೇವೆಗಳನ್ನು ಪ್ರವೇಶಿಸುವುದು ಮತ್ತು ಬಳಸುವುದಕ್ಕೆ ಸಂಬಂಧಿಸಿದಂತೆ ನಿಮ್ಮ ಮತ್ತು Reddit ನಡುವಿನ ಸಂಪೂರ್ಣ ಒಪ್ಪಂದವಾಗಿರುತ್ತವೆ. Reddit ಈ ನಿಯಮಗಳಲ್ಲಿರುವ ಯಾವುದೇ ಹಕ್ಕು ಅಥವಾ ಷರತ್ತನ್ನು ಜಾರಿಗೊಳಿಸದಿದ್ದರೂ, ಅದರಿಂದ ಆ ಹಕ್ಕು ಅಥವಾ ಷರತ್ತನ್ನು ಬಿಟ್ಟುಕೊಟ್ಟಿದೆ ಎಂದರ್ಥವಲ್ಲ. ಈ ನಿಯಮಗಳ ಯಾವುದೇ ಭಾಗ ಅಮಾನ್ಯವಾಗಿದೆ ಅಥವಾ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದರೆ, ಆ ಭಾಗವನ್ನು ಸಾಧ್ಯವಾದಷ್ಟು ಮಟ್ಟಿಗೆ ಜಾರಿಗೊಳಿಸಲಾಗುತ್ತದೆ. ಉಳಿದ ಷರತ್ತುಗಳು ಎಂದಿನಂತೆ ಜಾರಿಯಲ್ಲಿರುತ್ತವೆ. Reddit ನ ಮುಂಚಿತ ಲಿಖಿತ ಒಪ್ಪಿಗೆ ಇಲ್ಲದೆ, ಈ ನಿಯಮಗಳ ಅಡಿಯಲ್ಲಿ ನಿಮಗಿರುವ ಯಾವುದೇ ಹಕ್ಕುಗಳು ಅಥವಾ ಜವಾಬ್ದಾರಿಗಳನ್ನು ನೀವು ಬೇರೆಯವರಿಗೆ ವರ್ಗಾಯಿಸುವಂತಿಲ್ಲ. ಆದರೆ, Reddit ತನ್ನ ಸ್ವಂತ ನಿರ್ಧಾರದಂತೆ, ಯಾವುದೇ ನಿರ್ಬಂಧವಿಲ್ಲದೆ, ಈ ನಿಯಮಗಳ ಅಡಿಯಲ್ಲಿ ತನಗಿರುವ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ವರ್ಗಾಯಿಸಬಹುದು. ಹಾಗೆ ಮಾಡುವ ಮೊದಲು ಕನಿಷ್ಠ 30 ದಿನಗಳ ಮುಂಚಿತವಾಗಿ ನಿಮಗೆ ಸೂಚನೆ ನೀಡುತ್ತದೆ. ಈ ನಿಯಮಗಳ ಸೆಕ್ಷನ್ 16ರ ಪ್ರಕಾರ, ನೀವು ಯಾವುದೇ ಸಮಯದಲ್ಲಿ ಈ ನಿಯಮಗಳನ್ನು ಕೊನೆಗೊಳಿಸುವ ಹಕ್ಕು ಹೊಂದಿರುತ್ತೀರಿ. ಈ ಹಕ್ಕಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಈ ಒಪ್ಪಂದದಲ್ಲಿರುವ ಶೀರ್ಷಿಕೆಗಳನ್ನು ವಿಷಯಗಳನ್ನು ಸುಲಭವಾಗಿ ಗುರುತಿಸಲು ಮಾತ್ರ ಬಳಸಲಾಗಿದೆ. ಒಪ್ಪಂದದ ಅರ್ಥವನ್ನು ವಿವರಿಸುವಾಗ ಶೀರ್ಷಿಕೆಗಳನ್ನು ಪರಿಗಣಿಸಲಾಗುವುದಿಲ್ಲ.ಈ ಒಪ್ಪಂದದ ಉದ್ದೇಶಕ್ಕಾಗಿ: (a) “ಒಳಗೊಂಡಿದೆ”, “ಒಳಗೊಂಡಿವೆ” ಮತ್ತು “ಒಳಗೊಂಡಿರುವ” ಎಂಬ ಪದಗಳಿಗೆ ಯಾವುದೇ ಮಿತಿಯಿಲ್ಲದೆ ಎಂಬ ಅರ್ಥವಿರುತ್ತದೆ.(b) “ಉದಾಹರಣೆಗೆ”, “ಹಾಗೆಂದರೆ” ಮತ್ತು ಇಂತಹ ಪದಗಳನ್ನು ಉದಾಹರಣೆ ನೀಡಲು ಬಳಸಲಾಗುತ್ತದೆ. ಈ ಪದಗಳ ನಂತರ ಬರುವ ವಿಷಯಗಳೇ ಸಂಪೂರ್ಣ ಪಟ್ಟಿ ಎಂದು ಪರಿಗಣಿಸಬಾರದು.(c) “ಅಥವಾ” ಎಂಬ ಪದವನ್ನು “ಮತ್ತು/ಅಥವಾ” ಎಂಬ ಅರ್ಥದಲ್ಲಿಯೂ ಬಳಸಲಾಗುತ್ತದೆ. “ಅಥವಾ”, “ಯಾವುದೇ” ಮತ್ತು “ಇವೆರಡರಲ್ಲಿ ಯಾವುದಾದರೂ ಒಂದು” ಎಂಬ ಪದಗಳನ್ನು ಒಂದೇ ಆಯ್ಕೆಗೆ ಸೀಮಿತಗೊಳಿಸಿ ಅರ್ಥೈಸಬಾರದು. ಈ ಒಪ್ಪಂದದ ಯಾವುದೇ ಪದ ಅಥವಾ ವಾಕ್ಯದ ಅರ್ಥದಲ್ಲಿ ಗೊಂದಲವಿದ್ದರೆ, ಅದನ್ನು ಯಾರು ಬರೆದಿದ್ದಾರೆ ಎಂಬ ಕಾರಣಕ್ಕೆ ಆ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧವಾಗಿ ಅರ್ಥೈಸಲಾಗುವುದಿಲ್ಲ.
ಈ ಒಪ್ಪಂದವು ನಿಮ್ಮ ಮತ್ತು Reddit ನೆದರ್ಲ್ಯಾಂಡ್ಸ್ ಬಿ.ವಿ. ನಡುವಿನ ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಒಪ್ಪಂದವಾಗಿದೆ.ಈ ಒಪ್ಪಂದದ ಬಗ್ಗೆ ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ, ದಯವಿಟ್ಟುನಮ್ಮನ್ನು ಸಂಪರ್ಕಿಸಿ.
Reddit ನೆದರ್ಲ್ಯಾಂಡ್ಸ್ ಬಿ.ವಿ.
ಲೂಯರ್ಸ್ಗ್ರಾಚ್ಟ್ 43, 1016 VR ಆಮ್ಸ್ಟರ್ಡ್ಯಾಮ್
ನೆದರ್ಲ್ಯಾಂಡ್ಸ್.
KVK ಸಂಖ್ಯೆ: 83433880
ಡಚ್ VAT ನೋಂದಣಿ ಸಂಖ್ಯೆ: NL862872662B01
Reddit, Inc.
548 ಮಾರ್ಕೆಟ್ ಸ್ಟ್ರೀಟ್, #16093,
ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾ 94104
ಅಮೇರಿಕಾ
ಯುಕೆ ವ್ಯಾಟ್ (VAT) ನೋಂದಣಿ ಸಂಖ್ಯೆ: 431 7546 01