
Reddit ಎಂಬೆಡ್ಗಳ ನಿಯಮಗಳು
- ಕನ್ನಡ
- Bahasa Indonesia
- Bahasa Melayu - Malaysia
- Čeština – Česká republika
- Dansk - Danmark
- Deutsch – Deutschland
- English
- Español - España
- Español - México
- Farsi
- Français - France
- Hrvatski – Hrvatska
- Italiano - Italia
- Magyar – Magyarország
- Nederlands - Nederland
- Norwegian Bokmål
- Polski (Polska)
- Português - Brasil
- Português - Portugal
- Română - România
- Slovenčina - Slovensko
- Suomi – Suomi
- Svenska – Sverige
- Tagalog
- Tiếng Việt - Việt Nam
- Türkçe - Türkiye
- Ελληνικά - Ελλάδα
- Български – България
- Русский — Россия
- Српски – Србија
- Українська — Україна
- עברית
- اردو
- العربية
- मराठी
- हिंदी भारत
- বাংলা
- ગુજરાતી
- தமிழ்
- తెలుగు
- ไทย
- 한국어 - 대한민국
- 中文 - 繁體
- 日本語 - 日本
- 简体中文
ಜೂನ್ 19, 2023ರಿಂದ ಜಾರಿಗೆ ಬಂದಿದೆ. ಕೊನೆಯದಾಗಿ ಏಪ್ರಿಲ್ 18, 2023ರಂದು ಪರಿಷ್ಕರಿಸಲಾಗಿದೆ
ನೀವು Reddit ಎಂಬೆಡ್ಗಳ ಸೇವೆಯನ್ನು (“Reddit ಎಂಬೆಡ್ಗಳು”) ಬಳಸಲು ಆಸಕ್ತಿ ತೋರಿಸಿರುವುದು ನಮಗೆ ಸಂತೋಷವಾಗಿದೆ! ಈ Reddit ಎಂಬೆಡ್ಗಳ ನಿಯಮಗಳು (Redditನ ಡೆವಲಪರ್ ನಿಯಮಗಳು, ಬಳಕೆದಾರರ ಒಪ್ಪಂದ, Press & Broadcast Guidelines ಮತ್ತು ಬ್ರ್ಯಾಂಡ್ ಮಾರ್ಗಸೂಚಿಗಳು ಜೊತೆಗೆ, ಇನ್ನು ಮುಂದೆ “ನಿಯಮಗಳು” ಎಂದು ಕರೆಯಲಾಗುತ್ತದೆ). Reddit ಎಂಬೆಡ್ಗಳಿಗೆ ನಿಮ್ಮ ಪ್ರವೇಶ ಮತ್ತು ಅವುಗಳ ಬಳಕೆಗೆ ಅನ್ವಯಿಸುತ್ತವೆ. ಇದರಲ್ಲಿ ಡೆವಲಪರ್ ನಿಯಮಗಳು ಮತ್ತು ಬಳಕೆದಾರರ ಒಪ್ಪಂದಗಳಲ್ಲಿ ವಿವರಿಸಿರುವ ಕೆಲವು ಪದಗಳೂ ಸೇರಿವೆ. Reddit ಎಂಬೆಡ್ಗಳ ಮೂಲಕ ಬಳಕೆದಾರರ ವಿಷಯ ಅಥವಾ Redditನಿಂದ ಪರವಾನಗಿ ಪಡೆದ ಇತರ ಯಾವುದೇ ಸಾಮಗ್ರಿಗಳನ್ನು ಎಂಬೆಡ್ ಮಾಡುವ ಮೂಲಕ, ನೀವು ಈ ನಿಯಮಗಳಿಗೆ ಬದ್ಧರಾಗಲು ಒಪ್ಪುತ್ತೀರಿ. ನೀವು ಈ ನಿಯಮಗಳಿಗೆ ಒಪ್ಪದಿದ್ದರೆ, Reddit ಎಂಬೆಡ್ಗಳಿಗೆ ಪ್ರವೇಶ ಪಡೆಯಲು ಅಥವಾ ಅವುಗಳನ್ನು ಬಳಸಲು ನಿಮಗೆ ಅನುಮತಿ ಇಲ್ಲ. ನೀವು ಯಾವುದೇ ಸಂಸ್ಥೆಯ ಪರವಾಗಿ ಪ್ರತಿನಿಧಿಸುವ ವ್ಯಕ್ತಿಯಾಗಿದ್ದರೆ, ಆ ಸಂಸ್ಥೆಯ ಪರವಾಗಿ ಈ ನಿಯಮಗಳನ್ನು ಒಪ್ಪಿಕೊಳ್ಳಲು ನಿಮಗೆ ಅಗತ್ಯವಾದ ಅಧಿಕಾರವಿದೆ ಎಂದು ನೀವು ಒಪ್ಪಿಕೊಳ್ಳುತ್ತೀರಿ.
1. ಪರವಾನಗಿ
1.1 ನಿಮಗೆ ನಾವು ನೀಡುವ ಪರವಾನಗಿ
Reddit ಎಂಬೆಡ್ಗಳ ಒಂದು ಲಿಂಕ್ನ್ನು ನೀಡುತ್ತದೆ. ಈ ಲಿಂಕ್ನ್ನು ನಿಮ್ಮ ಆಪ್ನಲ್ಲಿ ನಕಲಿಸಿ ಹಾಕಿ, ಈ ನಿಯಮಗಳ ಪ್ರಕಾರ ಬಳಕೆದಾರರ ವಿಷಯವನ್ನು ನಿಮ್ಮ ಆಪ್ನಲ್ಲಿ ತೋರಿಸಬಹುದು.
ನೀವು ಈ ನಿಯಮಗಳನ್ನು, (ಡೆವಲಪರ್ ನಿಯಮಗಳು ಮತ್ತು ಬಳಕೆದಾರರ ಒಪ್ಪಂದ ಮತ್ತು Reddit ಎಂಬೆಡ್ಗಳ ಕುರಿತ ಎಲ್ಲಾ ಡೆವೆಲಪರ್ ಡೊಚ್ಯುಮೆಂಟೇಷನ್) ಅನ್ನು ನಿರಂತರವಾಗಿ ಪಾಲಿಸಿದರೆ, Reddit ನಿಮಗೆ Reddit ಎಂಬೆಡ್ಗಳನ್ನು ಬಳಸಲು ಪರವಾನಗಿ ನೀಡುತ್ತದೆ. ಈ ಪರವಾನಗಿಯನ್ನು ಬೇರೆಯವರಿಗೆ ವರ್ಗಾಯಿಸಲು ಅಥವಾ ಮತ್ತೊಬ್ಬರಿಗೆ ನೀಡಲು ಸಾಧ್ಯವಿಲ್ಲ ಮತ್ತು Reddit ಇದನ್ನು ಹಿಂಪಡೆಯಬಹುದು. ಈ ಬಳಕೆ ಡೆವಲಪರ್ ನಿಯಮಗಳಲ್ಲಿರುವ Reddit ಪರವಾನಗಿ (ನಿಯಮಗಳ ವ್ಯಾಪ್ತಿಯಲ್ಲೇ ಇರಬೇಕು). ನಿಮಗೆ ಸ್ಪಷ್ಟವಾಗಿ ನೀಡದ ಉಳಿದ ಎಲ್ಲ ಹಕ್ಕುಗಳು Reddit ಬಳಿಯೇ ಇರುತ್ತವೆ.
1.2 Reddit ಗೆ ನೀವು ನೀಡುವ ಅನುಮತಿ
ನಿಮ್ಮ ಆಪ್ನಲ್ಲಿ ಬಳಕೆದಾರರ ವಿಷಯವನ್ನು ತೋರಿಸಲು Reddit ಎಂಬೆಡ್ಗಳನ್ನು ಬಳಸುತ್ತಿದ್ದರೆ, ಈ ನಿಯಮಗಳನ್ನು ನೀವು ಪಾಲಿಸುತ್ತಿದ್ದೀರಾ ಎಂದು ಪರಿಶೀಲಿಸಲು ಮತ್ತು ಅನ್ವಯವಾಗುವ ಕಾನೂನುಗಳನ್ನು ಪಾಲಿಸಲು, ನಿಮ್ಮ ಆಪ್ನ ಬಳಕೆದಾರರ ವಿಷಯ ಅಥವಾ ಇತರ Reddit ಪರವಾನಗಿ ಪಡೆದ ವಿಷಯಗಳನ್ನು Reddit ಎಂಬೆಡ್ಗಳನ್ನು ಬಳಸಿ ತೋರಿಸುವ ಭಾಗಗಳನ್ನು Reddit ಪರಿಶೀಲಿಸಬಹುದು ಮತ್ತು ಅವುಗಳಿಗೆ ಪ್ರವೇಶಿಸಬಹುದು. ಇದಕ್ಕಾಗಿ Reddit ಗೆ ಈ ಕೆಲಸಗಳನ್ನು ಮಾಡಲು ಅನುಮತಿ ನೀಡುತ್ತೀರಿ: ಆ ವಿಷಯವನ್ನು ಹುಡುಕುವುದು, ಸಂಗ್ರಹಿಸುವುದು, ಪರಿಶೀಲಿಸುವುದು ಮತ್ತು ಅಗತ್ಯವಿದ್ದರೆ ಮತ್ತೆ ಪ್ರವೇಶಿಸುವುದು. ಈ ಅನುಮತಿಯನ್ನು ಬೇರೆಯವರಿಗೆ ನೀಡಲಾಗುವುದಿಲ್ಲ ಮತ್ತು Reddit ಬೇಕಾದರೆ ಹಿಂಪಡೆಯಬಹುದು.
2. ಬಳಕೆಯ ಮೇಲಿನ ನಿರ್ಬಂಧಗಳು
Reddit ಎಂಬೆಡ್ಗಳನ್ನು Reddit ಕೇವಲ ಸೌಲಭ್ಯಕ್ಕಾಗಿ ನೀಡುತ್ತದೆ. ಈ ನಿಯಮಗಳ ಪ್ರಕಾರ, ನಿಮ್ಮ ಆಪ್ನಲ್ಲಿ ಬಳಕೆದಾರರ ವಿಷಯವನ್ನು ಎಂಬೆಡ್ ಮಾಡಲು ಮಾತ್ರ ಇದನ್ನು ಬಳಸಬೇಕು. Reddit ಎಂಬೆಡ್ಗಳನ್ನು ನೀವು ಬಳಸುವುದಕ್ಕೆ Reddit ಯಾವುದೇ ಹೊಣೆ ಹೊರುವುದಿಲ್ಲ ಮತ್ತು ಯಾವುದೇ ಖಾತರಿ ನೀಡುವುದಿಲ್ಲ. ಈ ನಿಯಮಗಳಿಂದ ಬಳಕೆದಾರರ ವಿಷಯದ ಮೇಲೆ ನಿಮಗೆ ಯಾವುದೇ ಹಕ್ಕು ಅಥವಾ ಮಾಲೀಕತ್ವ ಸಿಗುತ್ತದೆ ಎಂದು ಅರ್ಥವಲ್ಲ. ಬಳಕೆದಾರರ ವಿಷಯವನ್ನು ಬಳಸುವಾಗ, ಅದರ ಹಕ್ಕುದಾರರು ವಿಧಿಸಿರುವ ನಿಯಮಗಳು ಅಥವಾ ನಿರ್ಬಂಧಗಳನ್ನು ಪಾಲಿಸುವ ಜವಾಬ್ದಾರಿ ನಿಮ್ಮದಾಗಿರುತ್ತದೆ.
Reddit ಎಂಬೆಡ್ಗಳನ್ನು ಬಳಸುವಾಗ ಅಥವಾ ಪ್ರವೇಶಿಸುವಾಗ, ನೀವು ಈ ನಿಯಮಗಳು, ಅನ್ವಯವಾಗುವ ಎಲ್ಲಾ ಕಾನೂನುಗಳು, ನಿಯಮಗಳು, ಮತ್ತು ನಿಯಮಾವಳಿಗಳನ್ನು ಪಾಲಿಸಬೇಕು. Reddit ಎಂಬೆಡ್ಗಳನ್ನು ಬಳಸುವಾಗ ಈ ಕೆಳಗಿನ ನಿರ್ಬಂಧಗಳು ಮತ್ತು ಅಗತ್ಯಗಳನ್ನು ಪಾಲಿಸಬೇಕು:
-
ನಿಮ್ಮ ಆಪ್ನಲ್ಲಿ ಬಳಕೆದಾರರ ವಿಷಯವನ್ನು ತೋರಿಸುವುದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶಕ್ಕೆ Reddit ಎಂಬೆಡ್ಗಳನ್ನು ಬಳಸಬೇಡಿ;
-
Reddit ನಿಂದ ಮುಂಚಿತವಾಗಿ ಲಿಖಿತ ಅನುಮತಿ ಪಡೆಯದೆ, Reddit ಸೇವೆಗಳು ಮತ್ತು ಡೇಟಾಗೆ ಪ್ರವೇಶವನ್ನು ಮಾರಾಟ ಮಾಡಲು Reddit ಎಂಬೆಡ್ಗಳನ್ನು ಬಳಸಬೇಡಿ;
-
Reddit ಎಂಬೆಡ್ಗಳ ಮೂಲಕ ನಿಮ್ಮ ಆಪ್ನಲ್ಲಿ ತೋರಿಸುವ Reddit ಸೇವೆಗಳು ಮತ್ತು ಡೇಟಾದ ಯಾವುದೇ ಭಾಗವನ್ನು ಬದಲಾಯಿಸಬೇಡಿ, ಮರೆಮಾಡಬೇಡಿ ಅಥವಾ ನಿಷ್ಕ್ರಿಯಗೊಳಿಸಬೇಡಿ;
-
Reddit ಎಂಬೆಡ್ಗಳ ಮೂಲಕ Reddit ಸೇವೆಗಳು ಮತ್ತು ಡೇಟಾವನ್ನು ತೋರಿಸುವಾಗ, ನಿಮ್ಮ ಮತ್ತು Reddit ನಡುವೆ ಪಾಲುದಾರಿಕೆ, ಸಂಬಂಧ, ಪ್ರಾಯೋಜಕತ್ವ ಅಥವಾ Reddit ಬೆಂಬಲ ಇದೆ ಎಂಬಂತೆ ತೋರಿಸಬೇಡಿ; ಮತ್ತು
-
ಹಕ್ಕುದಾರರ ಸ್ಪಷ್ಟ ಅನುಮತಿ ಇಲ್ಲದೆ, ಜಾಹೀರಾತುಗಳಲ್ಲಿ ಬಳಕೆದಾರರ ವಿಷಯವನ್ನು ತೋರಿಸಲು ಅಥವಾ ಯಾವುದೇ ವಸ್ತು ಅಥವಾ ಸೇವೆಗೆ ಬೆಂಬಲವಿದೆ ಎಂಬಂತೆ ತೋರಿಸಲು Reddit ಎಂಬೆಡ್ಗಳನ್ನು ಬಳಸಬೇಡಿ.
Reddit ನಿಯಮಗಳ ಪ್ರಕಾರ ವಿಷಯವನ್ನು ತೆಗೆದುಹಾಕುವಂತೆ ಸೂಚನೆ ಅಥವಾ ವಿನಂತಿ ಬಂದರೆ, ಈ ಸಂಪರ್ಕ ಫಾರ್ಮ್ ಮೂಲಕ ಅದನ್ನು Reddit ಗೆ ಕಳುಹಿಸಬೇಕು.
3. ಇತರೆ ವಿಷಯಗಳು
Reddit ನ ಡೆವಲಪರ್ ನಿಯಮಗಳು, ಬಳಕೆದಾರರ ಒಪ್ಪಂದ, Press & Broadcast Guidelines, ಮತ್ತು ಬ್ರ್ಯಾಂಡ್ ಮಾರ್ಗಸೂಚಿಗಳು ಇವುಗಳನ್ನೆಲ್ಲಾ ಈ ನಿಯಮಗಳ ಭಾಗವಾಗಿಯೂ, ಈ ನಿಯಮಗಳಲ್ಲಿ ಸೇರಿಸಿರುವುದಾಗಿಯೂ ಪರಿಗಣಿಸಲಾಗುತ್ತದೆ. ಈ ನಿಯಮಗಳನ್ನು ನಾವು ಯಾವುದೇ ಸಮಯದಲ್ಲಿ ಬದಲಾಯಿಸುವ ಹಕ್ಕನ್ನು ಹೊಂದಿದ್ದೇವೆ. ನೀವು Reddit ಎಂಬೆಡ್ಗಳನ್ನು ಮುಂದುವರಿಸಿ ಬಳಸುವುದರಿಂದ ಅಥವಾ ಅವುಗಳಿಗೆ ಪ್ರವೇಶ ಪಡೆಯುವುದರಿಂದ, ತಿದ್ದುಪಡಿ ಮಾಡಿದ ಈ ನಿಯಮಗಳಿಗೆ ನೀವು ಬದ್ಧರಾಗಲು ಒಪ್ಪಿಕೊಂಡಿದ್ದೀರಿ ಎಂದು ಪರಿಗಣಿಸಲಾಗುತ್ತದೆ. ನಾವು ಯಾವುದೇ ಸಮಯದಲ್ಲಿ Reddit ಎಂಬೆಡ್ಗಳ ಲಭ್ಯತೆಯನ್ನು ಬದಲಾಯಿಸಬಹುದು, ಅಮಾನತುಗೊಳಿಸಬಹುದು ಅಥವಾ ಸಂಪೂರ್ಣವಾಗಿ ಸ್ಥಗಿತಗೊಳಿಸಬಹುದು. ಇದಲ್ಲದೆ, ನಮ್ಮ ಸ್ವಂತ ನಿರ್ಧಾರದ ಮೇರೆಗೆ Reddit ಎಂಬೆಡ್ಗಳಿಗೆ ನಿಮ್ಮ ಪ್ರವೇಶವನ್ನು ಮತ್ತು ಅವುಗಳ ಬಳಕೆಯನ್ನು ನಿರ್ಬಂಧಿಸುವ ಹಕ್ಕನ್ನು Reddit ಹೊಂದಿದೆ.