ಟ್ರೇಡ್‌ಮಾರ್ಕ್ ಬಳಕೆ ನೀತಿ

ಟ್ರೇಡ್‌ಮಾರ್ಕ್ ಬಳಕೆ ನೀತಿ

ಪ್ರಪಂಚದ ಎಲ್ಲರಿಗೂ ಸಮುದಾಯದ ಭಾವನೆ, ಸೇರಿದವರಾಗಿರುವ ಅನುಭವ ಮತ್ತು ತಮ್ಮ ಸಾಮರ್ಥ್ಯವನ್ನು ಬಳಸಿಕೊಳ್ಳುವ ಅವಕಾಶವನ್ನು ನೀಡಲು Reddit ಬದ್ಧವಾಗಿದೆ. ನಮ್ಮ ಗುರಿಯನ್ನು ಸಾಧಿಸುವ ಕೆಲಸದಲ್ಲಿ, ನಾವು ಬೆಳೆಯುತ್ತಾ ಜನರು ಇಷ್ಟಪಡುವ ಹೊಸ ವಿಷಯಗಳನ್ನು ಸೃಷ್ಟಿಸುತ್ತೇವೆ. ಈ ರೀತಿಯಾಗಿ ನಾವು ಸಾಕಷ್ಟು ಬೌದ್ಧಿಕ ಆಸ್ತಿಯನ್ನು ಅಭಿವೃದ್ಧಿಪಡಿಸಿದ್ದೇವೆ. ನಮ್ಮ ಸಮುದಾಯಗಳನ್ನು ಹೇಗೆ ರಕ್ಷಿಸಲು ಪ್ರಯತ್ನಿಸುತ್ತೇವೋ, ಅದೇ ರೀತಿಯಲ್ಲಿ ಈ ಬೌದ್ಧಿಕ ಆಸ್ತಿಯನ್ನೂ ರಕ್ಷಿಸಲು ನಾವು ಬದ್ಧರಾಗಿದ್ದೇವೆ. ಆದ್ದರಿಂದ, ನಮ್ಮ ಬ್ರಾಂಡ್ ಮಾರ್ಗಸೂಚಿಗಳ ಅಡಿಯಲ್ಲಿ ಅನುಮತಿ ನೀಡಿರುವ ಬಳಕೆಯನ್ನೂ ಒಳಗೊಂಡಂತೆ, Reddit ನ ಟ್ರೇಡ್‌ಮಾರ್ಕ್ ಮತ್ತು ಇತರ ಬ್ರ್ಯಾಂಡ್ ಆಸ್ತಿಗಳನ್ನು ಬಳಸಲು ನೀವು ನಮ್ಮ ಅನುಮತಿ ಪಡೆಯಬೇಕು. 

ಕೆಳಗೆ Reddit ನ ಟ್ರೇಡ್‌ಮಾರ್ಕ್‌ನ ಸಂಪೂರ್ಣವಲ್ಲದ ಪಟ್ಟಿಯನ್ನು ನೀಡಲಾಗಿದೆ. ಈ ಪಟ್ಟಿಯಲ್ಲಿ ಸೇರಿಸದ ಯಾವುದೇ ಲೋಗೋ ಅಥವಾ ಉತ್ಪನ್ನದ ಹೆಸರಿನ ಮೇಲಿನ ತನ್ನ ಹಕ್ಕುಗಳನ್ನು Reddit ಬಿಟ್ಟುಕೊಟ್ಟಿಲ್ಲ.

ಇಂಗ್ಲಿಷ್ ಟ್ರೇಡ್‌ಮಾರ್ಕ್ ನೀತಿ

*ಗಮನಿಸಿ: Reddit ನ ಕೆಲವು ಟ್ರೇಡ್‌ಮಾರ್ಕ್‌ಗಳನ್ನು ಆ ಟ್ರೇಡ್‌ಮಾರ್ಕ್ ಜೊತೆಗೆ ಸಾಮಾನ್ಯ ಪದವನ್ನೂ ಸೇರಿಸಿ ಬಳಸಬೇಕು. ಮೇಲಿನ ಪಟ್ಟಿಯಲ್ಲಿ ನಾವು ಕೆಲವು ಸಾಮಾನ್ಯ ಪದಗಳನ್ನು ಸಲಹೆಯಾಗಿ ನೀಡಿದ್ದೇವೆ. ಆದರೆ ಸಂಬಂಧಿಸಿದ ವಸ್ತುಗಳು ಅಥವಾ ಸೇವೆಗಳನ್ನು ಸರಿಯಾಗಿ ವಿವರಿಸುವ ಬೇರೆ ಯಾವುದೇ ಸಾಮಾನ್ಯ ಪದಗಳನ್ನು ನೀವು ಬಳಸಬಹುದು. 

Reddit ತನ್ನ ಬೌದ್ಧಿಕ ಆಸ್ತಿಯನ್ನು ಅಭಿವೃದ್ಧಿಪಡಿಸಲು ಮತ್ತು ರಕ್ಷಿಸಲು ಸಾಕಷ್ಟು ಸಂಪನ್ಮೂಲಗಳನ್ನು ಬಳಸುತ್ತದೆ. Reddit ನ ಟ್ರೇಡ್‌ಮಾರ್ಕ್ ಅನ್ನು ವಿಶ್ವದಾದ್ಯಂತ ಆನ್‌ಲೈನ್ ಬಳಕೆದಾರರು ವ್ಯಾಪಕವಾಗಿ ಗುರುತಿಸುತ್ತಾರೆ. ನಮ್ಮ ಟ್ರೇಡ್‌ಮಾರ್ಕ್‌ಗಳು, ಲೋಗೋಗಳು ಮತ್ತು ಸ್ಲೋಗನ್‌ಗಳನ್ನು ವಿಶ್ವದಾದ್ಯಂತ ನೋಂದಾಯಿಸಲು ನಾವು ಪ್ರಯತ್ನಿಸುತ್ತೇವೆ. ನಮ್ಮ ಟ್ರೇಡ್‌ಮಾರ್ಕ್ ಮತ್ತು ಇತರ ಬ್ರ್ಯಾಂಡ್ ಆಸ್ತಿಗಳನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ Reddit ಸಮುದಾಯಗಳಂತೆ ತಪ್ಪಾಗಿ ತೋರಿಸಿಕೊಳ್ಳಲು ಅಥವಾ ನಕಲು ಮಾಡಲು ಪ್ರಯತ್ನಿಸುವ ಮೂರನೇ ವ್ಯಕ್ತಿಗಳ ವಿರುದ್ಧವೂ ನಾವು ನಮ್ಮ ಹಕ್ಕುಗಳನ್ನು ಜಾರಿಗೊಳಿಸುತ್ತೇವೆ. 

Reddit ನ ಟ್ರೇಡ್‌ಮಾರ್ಕ್‌ಗಳು ಮತ್ತು ಇತರ ಬ್ರ್ಯಾಂಡ್ ಆಸ್ತಿಗಳು Reddit ಗೆ ಸೇರಿವೆ. Reddit ನ ಟ್ರೇಡ್‌ಮಾರ್ಕ್‌ಗಳು ಮತ್ತು ಬ್ರ್ಯಾಂಡ್ ಆಸ್ತಿಗಳನ್ನು ನಮ್ಮ ಬ್ರಾಂಡ್ ಮಾರ್ಗಸೂಚಿಗಳು ಮತ್ತು ಈ ನೀತಿಯ ಪ್ರಕಾರ ಮಾತ್ರ ಬಳಸಬಹುದು. ಇಲ್ಲವಾದರೆ, Reddit ಲಿಖಿತವಾಗಿ ಅನುಮತಿ ನೀಡಿದ ಸಂದರ್ಭದಲ್ಲಷ್ಟೇ ಬಳಸಬಹುದು. ನೀವು ಮಾಡಬಾರದು: 

  • Reddit ನ ಯಾವುದೇ ಟ್ರೇಡ್‌ಮಾರ್ಕ್‌ಗಳು ಅಥವಾ ಬ್ರ್ಯಾಂಡ್ ಆಸ್ತಿಗಳಂತೆಯೇ ಇರುವ, ಗೊಂದಲ ಉಂಟುಮಾಡುವಷ್ಟು ಹೋಲುವ ಅಥವಾ ಅವುಗಳನ್ನು ಒಳಗೊಂಡಿರುವ ಟ್ರೇಡ್‌ಮಾರ್ಕ್‌ಗಳು, ವ್ಯಾಪಾರ ಹೆಸರುಗಳು, ಕಂಪನಿ ಹೆಸರುಗಳು, ಬಳಕೆದಾರರ ಹೆಸರುಗಳು ಅಥವಾ ಡೊಮೇನ್ ಹೆಸರುಗಳನ್ನು ಬಳಸಬಾರದು, ನೋಂದಾಯಿಸಬಾರದು ಅಥವಾ ಅವುಗಳ ಮೇಲೆ ಹಕ್ಕು ಇದೆ ಎಂದು ಹೇಳಿಕೊಳ್ಳಬಾರದು; 
  • Reddit ಜೊತೆ ನಿಮಗೆ ಯಾವುದೇ ಸಂಬಂಧವಿದೆ, Reddit ನಿಮ್ಮನ್ನು ಬೆಂಬಲಿಸುತ್ತದೆ ಅಥವಾ ನಿಮ್ಮ ಕೆಲಸಕ್ಕೆ Reddit ಪ್ರಾಯೋಜಕತ್ವ ನೀಡುತ್ತದೆ ಎಂಬ ಭಾವನೆ ಮೂಡುವ ರೀತಿಯಲ್ಲಿ Reddit ನ ಯಾವುದೇ ಟ್ರೇಡ್‌ಮಾರ್ಕ್‌ಗಳು ಅಥವಾ ಇತರ ಬ್ರ್ಯಾಂಡ್ ಆಸ್ತಿಗಳನ್ನು ಬಳಸಬಾರದು; ಅಥವಾ
  • Reddit ನ ಬಳಕೆದಾರರ ಒಪ್ಪಂದ, Reddit ನಿಯಮಗಳು ಅಥವಾ ಸಾರ್ವಜನಿಕ ಕಂಟೆಂಟ್ ನೀತಿಯನ್ನು ಉಲ್ಲಂಘಿಸುವ ಯಾವುದೇ ಕೆಲಸಕ್ಕಾಗಿ Reddit ನ ಯಾವುದೇ ಟ್ರೇಡ್‌ಮಾರ್ಕ್‌ಗಳು ಅಥವಾ ಇತರ ಬ್ರ್ಯಾಂಡ್ ಆಸ್ತಿಗಳನ್ನು ಬಳಸಬಾರದು.  
Reddit ನ ಯಾವುದೇ ಟ್ರೇಡ್‌ಮಾರ್ಕ್‌ಗಳು ಅಥವಾ ಇತರ ಬ್ರ್ಯಾಂಡ್ ಆಸ್ತಿಗಳನ್ನು ಬಳಸಲು ನಾವು ನೀಡಿರುವ ಯಾವುದೇ ಅನುಮತಿಯನ್ನು ಯಾವಾಗ ಬೇಕಾದರೂ ಹಿಂಪಡೆಯುವ ಹಕ್ಕು Reddit ಗೆ ಇದೆ. ಹಾಗೆಯೇ, Reddit ನ ಬ್ರ್ಯಾಂಡ್‌ಗೆ ಹೊಂದಿಕೆಯಾಗುವುದಿಲ್ಲ ಎಂದು ನಾವು ಪರಿಗಣಿಸುವ ಯಾವುದೇ Reddit ಟ್ರೇಡ್‌ಮಾರ್ಕ್‌ಗಳು ಅಥವಾ ಇತರ ಬ್ರ್ಯಾಂಡ್ ಆಸ್ತಿಗಳನ್ನು ಬಳಸುವ ವಿನಂತಿಯನ್ನು ಅನುಮೋದಿಸಬೇಕೇ ಅಥವಾ ತಿರಸ್ಕರಿಸಬೇಕೇ ಎಂಬುದನ್ನು ನಿರ್ಧರಿಸುವ ಹಕ್ಕು ಕೂಡ Reddit ಗೆ ಇದೆ.
⌂ 换网址